ಅನೀಶ್ 'ರಾಮಾರ್ಜುನ' ಸಿನಿಮಾದ ರಿಲೀಸ್ ಡೇಟ್ ಫಿಕ್ಸ್: ರಕ್ಷಿತ್ ಶೆಟ್ಟಿ ಸಾಥ್
ಸ್ಯಾಂಡಲ್ ವುಡ್ ನಟ ಅನೀಶ್ ನಾಯಕನಾಗಿ ಮಿಂಚಿರುವ ರಾಮಾರ್ಜುನ ಸಿನಿಮಾದ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ನಿರೀಕ್ಷೆಯ ಸಿನಿಮಾಗಳಲ್ಲಿ ಒಂದಾಗಿರುವ ರಾಮಾರ್ಜುನ ಸಿನಿಮಾ ರಕ್ಷಿತ್ ಶೆಟ್ಟಿ ಸಹ ನಿರ್ಮಾಣದಲ್ಲಿ ಮೂಡಿಬರುತ್ತಿದೆ.
ಚಿತ್ರದ ಬಗ್ಗೆ ವಿಭಿನ್ನವಾಗಿ ಪ್ರಮೋಟ್ ಮಾಡುವ ಮೂಲಕ ರಕ್ಷಿತ್ ಮತ್ತು ಕೆ ಆರ್ ಜಿ ಸ್ಟೂಡಿಯೊದ ಮಾಲಿಕ ಕಾರ್ತಿಕ್ ಗೌಡ ಅಭಿಮಾನಿಗಳ ಗಮನ ಸೆಳೆದಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ರಾಮ ಮತ್ತು ಅರ್ಜುನ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದ್ದರು. ಇದು ರಕ್ಷಿತ್ ಶೆಟ್ಟಿ ಹೊಸ ಸಿನಿಮಾದ ಪೋಸ್ಟರ್ ಇರಬಹುದಾ ಎಂದು ಎಲ್ಲರೂ ಅಂದುಕೊಂಡಿದ್ದರು.
ಫೈನಲಿ ರಕ್ಷಿತ್ ಮತ್ತು ಕಾರ್ತಿಕ್ ಗೌಡ ಇಬ್ಬರು ರಾಮಾರ್ಜುನ ಸಿನಿಮಾದ ಬಗ್ಗೆ ಮಾಹಿತಿ ಹಂಚಿಕೊಳ್ಳುವ ಮೂಲಕ ಕುತೂಹಲಕ್ಕೆ ತೆರೆ ಎಳೆದರು. ರಾಮಾರ್ಜುನ ಸಿನಿಮಾ ಇದೇ ತಿಂಗಳು ಜನವರಿ 29ರಂದು ತೆರೆಗೆ ಬರುತ್ತಿದೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ನಟ ರಕ್ಷಿತ್ ಶೆಟ್ಟಿ, 'ಹೈ ವೋಲ್ಟೇಜ್ ಎಂಟಟೈನರ್ ರಾಮಾರ್ಜುನ ಸಿನಿಮಾ ಜನವರಿ 29ರಂದು ರಿಲೀಸ್ ಆಗುತ್ತಿದೆ. ಪ್ರೀತಿ, ಬೆಂಬಲ ಇರಲಿ' ಎಂದು ಕೇಳಿಕೊಂಡಿದ್ದಾರೆ.

ಅಂದಹಾಗೆ 'ರಾಮಾರ್ಜುನ' ಸಿನಿಮಾದಲ್ಲಿ ನಟ ಅನೀಶ್ ನಟನೆಯ ಜೊತೆಗೆ ನಿರ್ದೇಶನ ಸಹ ಮಾಡಿದ್ದಾರೆ. ಅನೀಶ್ ಗೆ ನಾಯಕಿಯಾಗಿ ನಿಶ್ವಿಕಾ ನಾಯ್ಡು ಕಾಣಿಸಿಕೊಳ್ಳುತ್ತಿದ್ದಾರೆ. ಲಾಕ್ ಡೌನ್ ಬಳಿಕ ಸಿನಿಮಾಗಳು ಚಿತ್ರಮಂದಿರದಲ್ಲಿ ತೆರೆ ಕಾಣುತ್ತಿವೆ. ನಿರ್ಮಾಪಕರು ಧೈರ್ಯವಾಗಿ ಸಿನಿಮಾ ರಿಲೀಸ್ ಮಾಡುತ್ತಿದ್ದಾರೆ.
ಶೇ.50 ಆಸನದಲ್ಲೇ ಚಿತ್ರಮಂದಿರಗಳು ಸಿನಿಮಾ ಪ್ರದರ್ಶನ ಮಾಡುತ್ತಿವೆ. ಇದೀಗ ಅನೀಶ್ ನಟನೆಯ ರಾಮಾರ್ಜುನ ಸಿನಿಮಾ ಸಹ ಚಿತ್ರಮಂದಿರದ ಅಂಗಳಕ್ಕೆ ಎಂಟ್ರಿ ಕೊಡುತ್ತಿದ್ದು, ಪ್ರೇಕ್ಷಕರು ಹೇಗೆ ಸ್ವಾಗತಿಸಲಿದ್ದಾರೆ ಎಂದು ಕಾದುನೋಡ ಬೇಕು.


Click it and Unblock the Notifications











