For Quick Alerts
  ALLOW NOTIFICATIONS  
  For Daily Alerts

  ಅನಿಶ್ ತೇಜೇಶ್ವರ್ ಈಗ NRI: ಬರ್ತಡೇ ದಿನ ಹೊಸ ಪ್ರಾಜೆಕ್ಟ್ ಘೋಷಣೆ

  |

  ಕನ್ನಡದ ಪ್ರತಿಭಾನ್ವಿತ ನಟ ಅನೀಶ್ ತೇಜೇಶ್ವರ್ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಬರ್ತಡೇ ಪ್ರಯುಕ್ತ ಹೊಸ ಪ್ರಾಜೆಕ್ಟ್ ಘೋಷಣೆಯಾಗಿದ್ದು, ಟೈಟಲ್ ಪೋಸ್ಟರ್ ಸಹ ಬಿಡುಗಡೆಯಾಗಿದೆ.

  ಹೊಸ ವರ್ಷದ ಸಂಭ್ರಮ ಹಾಗೂ ಜನುಮದಿನದ ಸಂಭ್ರಮದಲ್ಲಿರುವ ನಟ ಅನೀಶ್ ಮತ್ತೊಮ್ಮೆ ನಿರ್ದೇಶನದ ಕಡೆ ಒಲವು ತೋರಿದ್ದು, 'ಎನ್‌ಆರ್‌ಐ' ಎಂಬ ಹೊಸ ಚಿತ್ರ ಕೈಗೆತ್ತಿಕೊಂಡಿದ್ದಾರೆ. ನಟನೆಯ ಜೊತೆ ನಿರ್ದೇಶನವನ್ನು ಮುಂದುವರಿಸಲು ನಿರ್ಧರಿಸಿದ್ದಾರೆ.

  ಅನಿಶ್ 'ರಾಮಾರ್ಜುನ' ಚಿತ್ರಕ್ಕೆ ರಕ್ಷಿತ್ ಶೆಟ್ಟಿ ನಿರ್ಮಾಪಕ!ಅನಿಶ್ 'ರಾಮಾರ್ಜುನ' ಚಿತ್ರಕ್ಕೆ ರಕ್ಷಿತ್ ಶೆಟ್ಟಿ ನಿರ್ಮಾಪಕ!

  ಅನೀಶ್ ನಿರ್ದೇಶನದಲ್ಲಿ ಈಗಾಗಲೇ ತಯಾರಾಗಿರುವ ರಾಮಾರ್ಜುನ ಚಿತ್ರದ ಸೆನ್ಸಾರ್ ಮುಗಿದಿದೆ. ಅನಿಶ್ ನಿರ್ಮಿಸಿ, ನಿರ್ದೇಶಿಸಿ, ನಟಿಸಿರುವ "ರಾಮಾರ್ಜುನ" ಚಿತ್ರಕ್ಕೆ ಯು/ಎ ಸೆರ್ಟಿಫಿಕೇಟ್ ಸಿಕ್ಕಿದ್ದು, ಸೆನ್ಸಾರ್ ಮಂಡಳಿಯವರಿಂದ ಪ್ರಶಂಸೆ ಪಡೆದುಕೊಂಡಿದೆ.

  ನೆಚ್ಚಿನ ಗೆಳೆಯನಿಗೆ ನಟ ರಕ್ಷಿತ್ ಶೆಟ್ಟಿ ಶುಭಕೋರಿದ್ದಾರೆ. ಟ್ವಿಟ್ಟರ್‌ನಲ್ಲಿ ಆತ್ಮೀಯ ಗೆಳೆಯನಿಗೆ ಒಳ್ಳೆಯದಾಗಲಿ ಎಂದು ವಿಶ್ ಮಾಡಿದ್ದಾರೆ.

  ಅಂದ್ಹಾಗೆ, ರಕ್ಷಿತ್ ಶೆಟ್ಟಿ ಮತ್ತು ಅನೀಶ್ ಆರಂಭದ ದಿನಗಳಿಂದಲೂ ಸ್ನೇಹಿತರು. 'ನಮ್ ಏರಿಯಾಲ್ ಒಂದಿನಾ' ಸಿನಿಮಾದಿಂದಲೂ ರಕ್ಷಿತ್ ಮತ್ತು ಅನಿಶ್ ಒಟ್ಟಿಗೆ ಇಂಡಸ್ಟ್ರಿಯಲ್ಲಿ ಬೆಳೆದವರು. ವಿಶೇಷ ಅಂದ್ರೆ ರಾಮಾರ್ಜುನ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಪಾಲುದಾರರಾಗಿದ್ದಾರೆ.

   Anish Tejeshwar Announced the Title of His Bilingual Next Movie NRI

  ಕ್ಲಾಸ್ ಪಾತ್ರಕ್ಕೂ ಸೈ, ಮಾಸ್ ಪಾತ್ರಕ್ಕೂ ಸೈ ಎಂದು ಸಾಧಿಸಿ ತೋರಿಸಿರುವ ಅನೀಶ್ ಎಲ್ಲ ವರ್ಗದ ಪ್ರೇಕ್ಷಕರಿಗೂ ಇಷ್ಟವಾಗಿರುವ ನಟ. 2010ರಲ್ಲಿ ಪೊಲೀಸ್ ಕ್ವಾಟ್ರಸ್ ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿ ಅನೀಶ್ ನಮ್ ಏರಿಯಾಲ್ ಒಂದ್ ದಿನ, ಕಾಫಿ ವಿತ್ ಮೈ ವೈಫ್, ಎಂದೆಂದು ನಿನಗಾಗಿ, ಅಕಿರಾ, ವಾಸು ನಾನ್ ಪಕ್ಕಾ ಕಮರ್ಷಿಯಲ್ ಅಂತಹ ಚಿತ್ರಗಳಲ್ಲಿ ನಾಯಕನಾಗಿ ನಟಿಸಿದ್ದಾರೆ.

  English summary
  Kannada actor Anish Tejeshwar Announced the Title of His Bilingual Next Movie NRI.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X