For Quick Alerts
  ALLOW NOTIFICATIONS  
  For Daily Alerts

  ಶುಕ್ರವಾರದಿಂದ ರಾಜ್ಯಾದ್ಯಂತ 'ರಾಮಾರ್ಜುನ'ನ ಅಬ್ಬರ ಶುರು

  |

  ಸ್ಯಾಂಡಲ್‌ವುಡ್‌ನಲ್ಲಿ ಜಾತ್ರೆ ಶುರುವಾಗುತ್ತಿದೆ. ಲಾಕ್‌ಡೌನ್ ಕಾರಣದಿಂದ ಶಿಳ್ಳೆ, ತಮಟೆ, ಹೌಸ್‌ಫುಲ್ ಬೋರ್ಡ್‌, ಪಟಾಕಿ, ಡ್ಯಾನ್ಸ್ ಸಂಭ್ರಮಕ್ಕೆ ಬ್ರೇಕ್ ಬಿದ್ದಿತ್ತು. ಈ ವಾರದಿಂದ ಈ ಸಂಭ್ರಮ ಮತ್ತೆ ಆರಂಭವಾಗಲಿದೆ.

  ಆ ದಿನ ಬಂದ್ರೆ ನಂಗೆ ನಡುಕ ಶುರುವಾಗೋದು | AnishTejeshwa | Ramarjuna | Filmibeat Kannada

  ಅನೀಶ್ ತೇಜೇಶ್ವರ್ ನಟಿಸಿ, ನಿರ್ದೇಶಿಸಿರುವ ರಾಮಾರ್ಜುನ ಸಿನಿಮಾ ನಾಳೆ (ಜನವರಿ 29) ಬಿಡುಗಡೆಯಾಗುತ್ತಿದೆ. ಲಾಕ್‌ಡೌನ್ ಬಳಿಕ ಚಿತ್ರಮಂದಿರಕ್ಕೆ ಬರುತ್ತಿರುವ ಮೊದಲ ಕಮರ್ಷಿಯಲ್ ಸಿನಿಮಾ ಇದಾಗಿದ್ದು, ಸಹಜವಾಗಿ ನಿರೀಕ್ಷೆ ಹೆಚ್ಚಿದೆ.

  ಅನಿಶ್ 'ರಾಮಾರ್ಜುನ' ಚಿತ್ರಕ್ಕೆ ರಕ್ಷಿತ್ ಶೆಟ್ಟಿ ನಿರ್ಮಾಪಕ!ಅನಿಶ್ 'ರಾಮಾರ್ಜುನ' ಚಿತ್ರಕ್ಕೆ ರಕ್ಷಿತ್ ಶೆಟ್ಟಿ ನಿರ್ಮಾಪಕ!

  ಕಾಮಿಡಿ, ಲವ್, ಆಕ್ಷನ್ ಹೀಗೆ ಪ್ರೇಕ್ಷಕರು ನಿರೀಕ್ಷೆ ಮಾಡುವ ಎಲ್ಲ ಕಮರ್ಷಿಯಲ್ ಅಂಶಗಳಿಂದ ತಯಾರಾಗಿರುವ ರಾಮಾರ್ಜುನ ಈಗಾಗಲೇ ಟ್ರೈಲರ್ ಮತ್ತು ಹಾಡುಗಳಿಂದ ಗಮನ ಸೆಳೆದಿದೆ. ಈ ಚಿತ್ರದಲ್ಲಿ ಅನೀಶ್ ಜೊತೆ ನಿಶ್ವಿಕಾ ನಾಯ್ಡು ನಾಯಕಿಯಾಗಿ ನಟಿಸಿದ್ದಾರೆ.

  ವಿಶೇಷ ಅಂದ್ರೆ, ರಾಮಾರ್ಜುನ ಚಿತ್ರಕ್ಕೆ ರಕ್ಷಿತ್ ಶೆಟ್ಟಿ ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದು, ಚಿತ್ರಕ್ಕೆ ಜೋಶ್ ಹೆಚ್ಚಿಸಿದೆ. ರಾಜ್ಯಾದ್ಯಂತ ಕೆಆರ್‌ಜಿ ಸ್ಟುಡಿಯೋಸ್ (ಕಾರ್ತಿಕ್ ಗೌಡ) ಸಿನಿಮಾ ವಿತರಣೆ ಮಾಡ್ತಿದ್ದು, ದೊಡ್ಡ ಮಟ್ಟದ ಬಿಡುಗಡೆ ಇದಾಗಲಿದೆ.

  ಬಹಳ ದಿನಗಳ ನಂತರ ಕೆಜಿ ರಸ್ತೆಯ ಮುಖ್ಯ ಚಿತ್ರಮಂದಿರದಲ್ಲಿ ಸ್ಟಾರ್ ನಟನ ಸಿನಿಮಾ ಬರ್ತಿದ್ದು, ಪ್ರೇಕ್ಷಕರಿಗೆ ಖುಷಿ ತಂದಿದೆ. ಇನ್ನು ರಾಮಾರ್ಜುನ ಚಿತ್ರದ ಬಿಡುಗಡೆಗೆ ಇಡೀ ಸ್ಯಾಂಡಲ್‌ವುಡ್ ಶುಭಕೋರಿದೆ. ರಕ್ಷಿತ್ ಶೆಟ್ಟಿ, ಧನಂಜಯ್, ಮೇಘನಾ ಗಾಂವ್ಕರ್ ಸೇರಿದಂತೆ ಹಲವರು ವಿಶ್ ಮಾಡಿದ್ದಾರೆ.

  ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸುವ 'ರಾಮಾರ್ಜುನ' ಟ್ರೇಲರ್ಸಿನಿಮಾ ಬಗ್ಗೆ ಕುತೂಹಲ ಹೆಚ್ಚಿಸುವ 'ರಾಮಾರ್ಜುನ' ಟ್ರೇಲರ್

  ಫೆಬ್ರವರಿ 1 ರಿಂದ ಚಿತ್ರಮಂದಿರಗಳಿಗೆ 100 ಪರ್ಸೆಂಟ್ ಆಸನ ಭರ್ತಿಗೆ ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ರಾಮಾರ್ಜುನ ಚಿತ್ರಕ್ಕೆ ಇದು ಸಹಕಾರಿ ಆಗಲಿದೆ. ಇಷ್ಟು ದಿನ ಕೇವಲ 50 ಪರ್ಸೆಂಟ್ ಮಾತ್ರ ಅವಕಾಶ ನೀಡಲಾಗಿತ್ತು.

  English summary
  Kannada actor Anish tejeshwar starrer Ramarjuna movie will release tomorrow Santhosh theater at KG Road.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X