For Quick Alerts
  ALLOW NOTIFICATIONS  
  For Daily Alerts

  ಪಕ್ಕಾ ಕಮರ್ಷಿಯಲ್ ಆಗಿ ಬಂದ ಅನಿಶ್ ತೇಜೇಶ್ವರ್

  By Pavithra
  |
  ರಿಲೀಸ್ ಆಯಿತು ವಾಸು ನಾನು ಪಕ್ಕ ಕಮರ್ಷಿಯಲ್ ಟ್ರೈಲರ್ | Filmibeat Kannada

  ಸಾಮಾನ್ಯವಾಗಿ ಕಲಾವಿದರು ಸಿನಿಮಾರಂಗಕ್ಕೆ ಬಂದಾಗ ನಾನು ನಿಮ್ಮನೆ ಹುಡ್ಗ, ನಾನು ನಿಮ್ ಮನೆ ಹುಡ್ಗಿ ಅಂತ ಹೇಳಿಕೊಳ್ತಾರೆ. ಆದ್ರೆ ಸಿನಿಮಾ ಮೂಲಕವೇ ನಮ್ ಏರಿಯಾ ಹುಡುಗ ಅಂತ ಫೀಲ್ ಕೊಟ್ಟ ನಟ ಅನಿಶ್ ತೇಜೇಶ್ವರ್. ಅಕಿರ ಸಿನಿಮಾದ ನಂತರ ಅನಿಶ್ ಅಭಿನಯದ ಹೊಸ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ.

  ಟೈಟಲ್ ನಿಂದಲೇ ನಾನ್ ಪಕ್ಕಾ ಕಮರ್ಷಿಯಲ್ ಅಂತಿದ್ದ ಅನಿಶ್ ಮತ್ತು ಟೀಂ ಈ ಬಾರಿ ಹೊಸ ಪ್ರಯತ್ನಕ್ಕೆ ಮುಂದಾಗಿ ಹೊಸತನವಿರುವ ಚಿತ್ರವನ್ನ ಪ್ರೇಕ್ಷಕರ ಮುಂದಿಡಲು ಸಜ್ಜಾಗಿದ್ದಾರೆ. ಯಾವುದೇ ಪಾತ್ರವಾದರೂ ನೀರು ಕುಡಿದಂತೆ ನಿಭಾಯಿಸಬಲ್ಲ ಅನಿಶ್ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಚಿತ್ರದ ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದಾರೆ.

  ಪಕ್ಕಾ ಕಮರ್ಷಿಯಲ್ ಆಗಿರುವ 'ವಾಸು' ಟೀಸರ್ ಇಲ್ಲಿದೆ ನೋಡಿ... ಪಕ್ಕಾ ಕಮರ್ಷಿಯಲ್ ಆಗಿರುವ 'ವಾಸು' ಟೀಸರ್ ಇಲ್ಲಿದೆ ನೋಡಿ...

  ಕೆಲ ಟ್ರೇಲರ್ ಬಿಡುಗಡೆ ಆದ್ರೆ ಮಾತನಾಡಲು ಏನು ಇರುವುದಿಲ್ಲ. ಮತ್ತೆ ಕೆಲವರ ಟ್ರೇಲರ್ ರಿಲೀಸ್ ಆದ್ರೆ ಅದರಲ್ಲಿ ಸಾಕಷ್ಟು ಸ್ಪೆಷಾಲಿಟಿಸ್ ಇರುತ್ತೆ. ಅಂತದ್ದೇ ಸಾಲಿನಲ್ಲಿ ನಿಲ್ಲುವ 'ವಾಸು ನಾನ್ ಪಕ್ಕಾ ಕಮರ್ಷಿಯಲ್' ಸಿನಿಮಾದ ಟ್ರೇಲರ್ ನ ವಿಶೇಷತೆಯ ಕಂಪ್ಲೀಟ್ ಮಾಹಿತಿ ಇಲ್ಲಿದೆ. ಮುಂದೆ ಓದಿ

  ವಾಸು ಪಕ್ಕಾ ಕಮರ್ಷಿಯಲ್

  ವಾಸು ಪಕ್ಕಾ ಕಮರ್ಷಿಯಲ್

  'ವಾಸು ನಾನ್ ಪಕ್ಕಾ ಕಮರ್ಷಿಯಲ್' ಟ್ರೇಲರ್ ಬಿಡುಗಡೆ ಆಗಿದೆ. ಸುಪ್ರಿಂ ಸ್ಟಾರ್ ಅನಿಶ್ ತೇಜೇಶ್ವರ್ ಚಿತ್ರದಲ್ಲಿ ನಾಯಕನಾಗಿ ಅಭಿನಯಿಸಿದ್ದು ನಿಶ್ವಿಕಾ ನಾಯ್ಡು ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಾಕಷ್ಟು ದಿನಗಳಿಂದ ಚಿತ್ರೀಕರಣದಲ್ಲಿ ಬ್ಯುಸಿ ಆಗಿದ್ದ ತಂಡ ಶೂಟಿಂಗ್ ಮುಗಿಸಿ ಟ್ರೇಲರ್ ಲಾಂಚ್ ಮಾಡಿದೆ.

  ಅದ್ಧೂರಿಯಾಗಿದೆ ಮೇಕಿಂಗ್

  ಅದ್ಧೂರಿಯಾಗಿದೆ ಮೇಕಿಂಗ್

  ವಾಸು ನಾನ್ ಪಕ್ಕಾ ಕಮರ್ಷಿಯಲ್ ಟೈಟಲ್ ಹೇಳುವಂತೆ ಔಟ್ ಅಂಡ್ ಔಟ್ ಕಮರ್ಷಿಯಲ್ ಸಿನಿಮಾ. ಚಿತ್ರದ ಮೇಕಿಂಗ್ ಅದ್ಧೂರಿಯಾಗಿದ್ದು ಒಂದ್ ಒಳ್ಳೆ ಮೆಸೆಜ್ ಕೂಡ ಇದೆ ಎನ್ನುವ ಸೂಚನೆ ಟ್ರೇಲರ್ ನಲ್ಲಿ ಗೊತ್ತಾಗುತ್ತಿದೆ.

  ಅಪ್ಪು ಗಾನಕ್ಕೆ ಅನಿಶ್ ಡ್ಯಾನ್ಸ್

  ಅಪ್ಪು ಗಾನಕ್ಕೆ ಅನಿಶ್ ಡ್ಯಾನ್ಸ್

  ಟ್ರೇಲರ್ ನಲ್ಲಿನ ಹಿನ್ನಲೆ ಸಂಗೀತ ನೋಡಿದ್ರೆ ಬೇರೆಯದ್ದೇ ಫೀಲ್ ಕೊಡುವಂತಹ ಮ್ಯೂಸಿಕ್ ಚಿತ್ರದಲ್ಲಿ ಇರಲಿದೆ ಎನ್ನಿಸುತ್ತಿದೆ. ಇನ್ನು ಪವರ್ ಸ್ಟಾರ್ ಹಾಡಿರುವ ಹಾಡಿಗೆ ದಿಲೀಪ್ ಚಕ್ರವರ್ತಿ ಸುಂದರವಾದ ದೃಶ್ಯಗಳನ್ನ ಸೆರೆ ಹಿಡಿದುಕೊಟ್ಟಿರುವುದು ಸ್ಕ್ರೀನ್ ಮೇಲೆ ಕಾಣಿಸುತ್ತಿದೆ.

  ಟ್ರೇಲರ್ ನಲ್ಲೇ ಹಿಟ್ ಆಯ್ತು ಹಾಡು

  ಟ್ರೇಲರ್ ನಲ್ಲೇ ಹಿಟ್ ಆಯ್ತು ಹಾಡು

  ವಾಸು ನಾನ್ ಪಕ್ಕಾ ಕಮರ್ಷಿಯಲ್ ಸಿನಿಮಾದ ಟ್ರೇಲರ್ ನಲ್ಲಿ ಎರಡು ಹಾಡಿನ ಝಲಕ್ ಸೇರಿಸಲಾಗಿದೆ. ಟ್ರೇಲರ್ ನೋಡಿರುವ ಅಭಿಮಾನಿಗಳು "ಇವನೊಬ್ಬ ಪೊರ್ಕಿ, ಇವನೊಬ್ಬ ಕಂತ್ರಿ..ಇವನೊಬ್ಬ ಲೋಫರ್.. ಪಕ್ಕಾ ಚಪ್ಪರು.. ಹಾಡನ್ನ ಇಷ್ಟ ಪಟ್ಟಿದ್ದಾರೆ. ಟ್ರೇಲರ್ ಬಿಡುಗಡೆ ಆದ ದಿನವೇ ಈ ಹಾಡು ಹಿಟ್ ಆಗುವ ಸೂಚನೆ ಸಿಕ್ಕಿದೆ.

  ಚಿತ್ರದ ತಾಂತ್ರಿಕ ವರ್ಗ

  ಚಿತ್ರದ ತಾಂತ್ರಿಕ ವರ್ಗ

  ವಾಸು ನಾನ್ ಪಕ್ಕಾ ಕಮರ್ಷಿಯಲ್ ಚಿತ್ರವನ್ನು ಅಜಿತ್ವಾಸನ್ ಉಗ್ಗಿನಾ ನಿರ್ದೇಶನ ಮಾಡುತ್ತಿದ್ದು ವಿಂಕ್ ವಿಷಲ್ ಪ್ರೊಡಕ್ಷನ್ ಲಿಮಿಟೆಡ್ ಅಡಿಯಲ್ಲಿ ಚಿತ್ರ ನಿರ್ಮಾಣ ಆಗಿದೆ ಶರತ್ ಗೌಡ ಕಾರ್ಯಕಕಾರಿ ನಿರ್ಮಾಪಕರಾಗಿ ಕೆಲಸ ಮಾಡಿದ್ದಾರೆ. ಅಜನೀಶ್ ಬಿ ಲೋಕನಾಥ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದಾರೆ.

  ತೆರೆಗೆ ಬರಲು ಸಿದ್ದವಾದ ವಾಸು

  ತೆರೆಗೆ ಬರಲು ಸಿದ್ದವಾದ ವಾಸು

  ಸದ್ಯ ಟ್ರೇಲರ್ ಬಿಡುಗಡೆ ಮಾಡಿರುವ ಸಿನಿಮಾ ತಂಡ ಆದಷ್ಟು ಬೇಗ ಹಾಡುಗಳನ್ನ ಹೊರತರಲಿದ್ದಾರೆ. ಚಿತ್ರೀಕರಣ ಕಂಪ್ಲೀಟ್ ಮಾಡಿ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿ ಆಗಿದ್ದು ಆದಷ್ಟು ಬೇಗ ಸಿನಿಮಾ ತೆರೆ ಮೇಲೆ ನೋಡುವ ಅವಕಾಶ ಮಾಡಿಕೊಡಲಿದ್ದಾರೆ ನಿರ್ಮಾಪಕರು.

  English summary
  Kannada actor Anish Tejeshwar starrer Vasu Nan Pakka commercial film trailer released. Ajithaswam Ugginina Directed the movie, Ajaneesh B. Lokanath has composed the music for movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X