For Quick Alerts
  ALLOW NOTIFICATIONS  
  For Daily Alerts

  ''ಕಾಗೆಯ ಮಾತು ಕೇಳಿ ಕುಕ್ಕುವ ಕೆಲಸ ಮಾಡಬೇಡಿ": ರಕ್ಷಿತ್ ಬೆಂಬಲಿಸಿದ ಅನೀಶ್

  |

  ನಟ ರಕ್ಷಿತ್ ಶೆಟ್ಟಿ ವಿರುದ್ಧ ಪಬ್ಲಿಕ್ ಟಿವಿ ಉದ್ದೇಶಪೂರ್ವಕವಾಗಿ ತೇಜೋವಧೆ ಮಾಡಿದೆ ಎಂದು ಸಿಂಪಲ್ ಸ್ಟಾರ್ ಅಭಿಮಾನಿಗಳು, ಆಪ್ತರು ಆರೋಪ ಮಾಡಿದ್ದಾರೆ. ಈ ಕುರಿತು ನಟ ಅನೀಶ್ ತೇಜೇಶ್ವರ್ ಫೇಸ್‌ಬುಕ್‌ನಲ್ಲಿ ರಕ್ಷಿತ್ ಬೆಂಬಲಿಸಿ ಸುದೀರ್ಘವಾಗಿ ಅಭಿಪ್ರಾಯ ಮಂಡಿಸಿದ್ದಾರೆ.

  ನನ್ನ ಹನ್ನೊಂದು ವರ್ಷಗಳ ಸಿನಿಮಾ ಜೀವನದ ಪಯಣದಲ್ಲಿ ನಾನು ರಕ್ಷಿತ್ ನ ಕಂಡಂತೆ, ತನಗೆ ಕೆಲಸ ಕೊಟ್ಟವರಿಗೆ, ಕಷ್ಟದಲ್ಲಿ ಇರುವ ತನ್ನ ಸುತ್ತಮುತ್ತಲಿನ ಸ್ನೇಹ ಬಳಗಕ್ಕೆ ಮತ್ತು ನಿರ್ಮಾಪಕರಿಗೆ ಸದಾ ಬೆನ್ನೆಲುಬಾಗಿ ನಿಂತಿರುವ ನಾನು ಕಂಡ ಕೆಲವೇ ಕೆಲವು ವ್ಯಕ್ತಿಗಳಲ್ಲಿ ರಕ್ಷಿತ್ ಶೆಟ್ಟಿ ಕೂಡ ಒಬ್ರು. ಆತ ಮೊದಲ ದಿನ ಹೇಗೆ ಇದ್ದ ಇಂದಿಗೂ ಹಾಗೆಯೇ ಇದ್ದಾನೆ. ಸರಳ ಸಜ್ಜನ ಮತ್ತು ಕೆಲಸ ಅಂದ್ರೆ ದೇವರ ಸಮಾನವಾಗಿ ಕಾಣುತ್ತಾನೆ.

  ಪಬ್ಲಿಕ್ ಟಿವಿ ವಿರುದ್ಧ ನಟ ರಕ್ಷಿತ್ ಶೆಟ್ಟಿ ಕೆಂಡಾಮಂಡಲಪಬ್ಲಿಕ್ ಟಿವಿ ವಿರುದ್ಧ ನಟ ರಕ್ಷಿತ್ ಶೆಟ್ಟಿ ಕೆಂಡಾಮಂಡಲ

  ತುಂಬಾ ಜನ ನನ್ನ ಗೆಳೆಯರು ನನ್ನ ಜೊತೆ ಸಿನಿ ಬದುಕು ಶುರು ಮಾಡಿ ಇಂದು ಸ್ಟಾರ್ ಗಳಾಗಿದ್ದಾರೆ. ಆದರೆ ಮೊದಲ ದಿನ ಇದ್ದ ಹಾಗೆ ಇಂದಿಗೂ ತನ್ನ ವ್ಯಕ್ತಿತ್ವದಲ್ಲಿ ಒಂದು ಎಳ್ಳಿನಷ್ಟು ಬದಲಾವಣೆ ಆಗದ ವ್ಯಕ್ತಿ ಅಂದ್ರೆ ರಕ್ಷಿತ್ ಶೆಟ್ಟಿ. ಆತನಿಗೆ ಸಿಂಪಲ್ ಸ್ಟಾರ್ ಎಂದು ಸುಮ್ಮನೇ ಬಂದ ಪಟ್ಟವಲ್ಲ ಎಂದು ಸಪೋರ್ಟ್ ಮಾಡಿದ್ದಾರೆ. ಮುಂದೆ ಓದಿ..

  ಇದು ಒಳ್ಳೆಯ ಬೆಳವಣಿಗೆಯಲ್ಲ

  ಇದು ಒಳ್ಳೆಯ ಬೆಳವಣಿಗೆಯಲ್ಲ

  ''ಒಬ್ಬ ಸಾಮಾನ್ಯ ನಟ, ಸ್ಟಾರ್ ಆಗಿ ಮಾರ್ಪಾಡು ಆಗುವ ಪ್ರಕ್ರಿಯೆಯಲ್ಲಿ ತನ್ನ ಶ್ರಮ, ಕೆಲಸದ ಮೇಲಿನ ಶ್ರದ್ಧೆ ಮತ್ತು ಅಭಿಮಾನಗಳ ಬೆಂಬಲದ ಜೊತೆಗೆ ಮಾಧ್ಯಮಗಳ ಕೊಡುಗೆ ಕೂಡ ಇರುತ್ತದೆ. ಆದರೆ ಯಾವುದೋ ಒಂದು ಗಾಳಿ ಸುದ್ದಿಯನ್ನ ನಂಬಿ ಅದನ್ನ ಪರಿಶೀಲಿಸದೆ ಈ ರೀತಿ ಒಬ್ಬ ವ್ಯಕ್ತಿಯ ವ್ಯಕ್ತಿತ್ವದ ತೇಜೋವಧೆ ಮಾಡುವುದು ಖಂಡಿತ ಒಳ್ಳೆಯ ಬೆಳವಣಿಗೆಯಲ್ಲ. ರಕ್ಷಿತ್ ಶೆಟ್ಟಿಯಿಂದ ಚಿತ್ರರಂಗದಲ್ಲಿ ದೊಡ್ಡ ಮಟ್ಟಿಗೆ ಬದುಕು ಕಟ್ಟಿಕೊಂಡಿರುವವರ ಸಂಖ್ಯೆ ಬಹಳ ದೊಡ್ಡ ಮಟ್ಟದಲ್ಲಿ ಇದೆ, ಅಂಥವರ ಬಗ್ಗೆ ಇಲ್ಲ ಸಲ್ಲದ ಆರೋಪ ಸಹಿಸುವಂತದಲ್ಲ.'' ಎಂದು ಅನೀಶ್ ತೇಜೇಶ್ವರ್ ಹೇಳಿದ್ದಾರೆ.

  ತಪ್ಪು ಮಾಡದೆ ಹೊರೆ ಹೊರುವ ನೋವು ಗೊತ್ತೇ?

  ತಪ್ಪು ಮಾಡದೆ ಹೊರೆ ಹೊರುವ ನೋವು ಗೊತ್ತೇ?

  ''ಉದಾಹರಣೆ: ಮಾಧ್ಯಮ ಲೋಕದಲ್ಲಿ ನಿಮಗೆ ತುಂಬಾ ಬೇರೆ ಚಾನಲ್‌ನವರು ಪ್ರತಿಸ್ಪರ್ಧಿಗಳಿರುತ್ತಾರೆ. ನಿಮ್ಮನ್ನ ಹಿಂದಿಕ್ಕಿ ಮುನ್ನುಗಲು ಆಗದೆ ನಿಮ್ಮ ಚಾನಲ್ ಮತ್ತು ಅಲ್ಲಿ ಕೆಲಸ ಮಾಡುವ ಪ್ರಮುಖರ ಬಗ್ಗೆ ಇಲ್ಲದ ಸಲ್ಲದ ಆರೋಪ ಮಾಡುತ್ತಾ ಗಾಳಿ ಸುದ್ದಿ ಹಬ್ಬಿಸುತ್ತಾರೆ, ಅದನ್ನ ಪರಿಶೀಲಿಸದೆ ಜನರು ನಂಬಿ ನಿಮ್ಮ ಬಗ್ಗೆ ನಿಮ್ಮ ಪ್ರತಿಷ್ಠಿತ ಸಂಸ್ಥೆಯ ಬಗ್ಗೆ ಅಲ್ಲಿಯ ಪ್ರಮುಖರ ಬಗ್ಗೆ ಕಟುವಾಗಿ ಟೀಕಿಸಿದರೆ ನಿಮಗೆ ಹೇಗೆ ಆಗ ಬೇಡ ಹೇಳಿ? ತಪ್ಪು ಮಾಡದೆ ತಪ್ಪಿನ ಹೊರೆಯನ್ನ ಹೊರುವ ನೋವು ಆ ಹೊರೆಯನ್ನ ಹೊತ್ತವರಿಗೆ ಗೊತ್ತಿರುತ್ತದೆ'' ಎಂದು ಖಾಸಗಿ ವಾಹಿನಿಯ ನಡೆಯನ್ನು ಖಂಡಿಸಿದ್ದಾರೆ.

  ನನ್ನ ಗೆಳೆಯನ ಬಗ್ಗೆ ನನಗೆ ಗೊತ್ತಿದೆ

  ನನ್ನ ಗೆಳೆಯನ ಬಗ್ಗೆ ನನಗೆ ಗೊತ್ತಿದೆ

  ''ನಿಮ್ಮ ನಿಮ್ಮ ಸಂಸ್ಥೆ ಮತ್ತು ಅಲ್ಲಿ ಕೆಲಸ ಮಾಡುವವರ ಬಗ್ಗೆ ಹೇಗೆ ನಿಮಗೆ ಸತ್ಯ ಗೊತ್ತಿರುತದ್ದೆಯೋ ಹಾಗೆ ನನ್ನ ಗೆಳಯನ ಬಗ್ಗೆ ನನಗೆ ಸಂಪೂರ್ಣವಾಗಿ ಗೊತ್ತಿದೆ. ತಿಳಿಯದಯೆ ಮಾಡಿರುವ ಅಥವಾ ಸರಿಯಾದ ಮಾಹಿತಿ ಇಲ್ಲದೆ ಮಾಡಿರುವ ತಪ್ಪನ್ನು ಸರಿಪಡಿಸಿಕೊಳ್ಳಿ'' ಎಂದು ತಿಳಿಸಿದ್ದಾರೆ.

  ಅಸಲಿಗೆ Dvitva ಪದದ ಅರ್ಥ ಹೇಳಿದ ನಿರ್ದೇಶಕ | Filmibeat Kannada
  ಕಾಗೆಯ ಮಾತು ಕೇಳಿ ಕುಕ್ಕುವ ಕೆಲಸ ಮಾಡಬೇಡಿ

  ಕಾಗೆಯ ಮಾತು ಕೇಳಿ ಕುಕ್ಕುವ ಕೆಲಸ ಮಾಡಬೇಡಿ

  ''ರಕ್ಷಿತ್ ಶೆಟ್ಟಿ ಮೇಲೆ ನೀವು ಮಾಡಿರುವ ಅಷ್ಟು ಆರೋಪಗಳಿಗೆ ಅವರೇ ಜುಲೈ 11 ರಂದು ಉತ್ತರ ಕೊಡಲಿದ್ದಾರೆ. ರಕ್ಷಿತ್ ಎಂದಿಗೂ ಯಾರಿಗೂ ಅನ್ಯಾಯ ಮಾಡಿದವನಲ್ಲ ಎಲ್ಲರೂ ಒಟ್ಟಾಗಿ ಗೆಲ್ಲಬೇಕು ಎನ್ನುವ ಮನಸ್ಥಿತಿಯ ಮನುಷ್ಯ. "ಒಂದು ಒಳ್ಳೆಯ ವ್ಯಕ್ತಿತ್ವಕ್ಕೆ, ಕಾಗೆಯ ಮಾತು ಕೇಳಿ ಕುಕ್ಕುವ ಕೆಲಸ ಮಾಡಬೇಡಿ" ಎಂದು ಅನೀಶ್ ಬರೆದುಕೊಂಡಿದ್ದಾರೆ.

  English summary
  Kannada actor Anish Tejeshwar support to Rakshit Shetty on kannada news channel trying to defame him.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X