For Quick Alerts
  ALLOW NOTIFICATIONS  
  For Daily Alerts

  ನಟಿಯ ತುಟಿ ಬಗ್ಗೆ ಸಾರ್ವಜನಿಕವಾಗಿ ಕಮೆಂಟ್ ಮಾಡಿದ ಅನೀಶ್

  By Pavithra
  |
  ಕೃಷಿ ತುಟಿ ಬಗ್ಗೆ ಸಾರ್ವಜನಿಕವಾಗಿ ಕಮೆಂಟ್ ಮಾಡಿದ ಅನೀಶ್ | Filmibeat Kannada

  ಸಾಮಾನ್ಯವಾಗಿ ಸ್ಟಾರ್ ಗಳು ಅಂದರೆ ಸಾರ್ವಜನಿಕ ಜೀವನದಲ್ಲಿ ಇರುವವರು. ಸದಾ ಕಾಲ ಎಲ್ಲರಿಗೂ ಇಷ್ಟವಾಗುವಂತೆ ಅಲ್ಲವಾದರೂ ಕೆಲವರಿಗಾದರೂ ಮಾದರಿಯಾಗುವಂತೆ ಬದುಕಬೇಕು ಎನ್ನುವ ಮಾತುಗಳನ್ನ ಸಾಕಷ್ಟು ಜನರು ಹೇಳುತ್ತಾರೆ. ಸ್ಟಾರ್ ಗಳು ಆಗುವುದು ಕಷ್ಟವಲ್ಲ ಸೆಲಬ್ರೆಟಿ ಆದ ನಂತರ ಆ ಜೀವನವನ್ನ ಕಾಪಾಡಿಕೊಳ್ಳುವುದು ತುಂಬಾ ಕಷ್ಟ.

  ಆದರೆ ಕೆಲ ಸ್ಟಾರ್ ಗಳು ನಡೆದುಕೊಳ್ಳುವುದನ್ನ ನೋಡಿದರೆ ಅಯ್ಯೋ ಇವರಿಗೆ ಯಾಕೆ ಇಂತ ಬುದ್ದಿ ಬಂತಪ್ಪ ಅನ್ನೋ ಪ್ರಶ್ನೆಗಳು ಮೂಡುವುದಕ್ಕೆ ಶುರುವಾಗುತ್ತೆ. ಇಂತ ಪ್ರಶ್ನೆ ನಿನ್ನೆ ರಾತ್ರಿಯಿಂದ ಕನ್ನಡ ಸಿನಿಮಾ ಪ್ರೇಕ್ಷಕರ ಮನಸ್ಸಿನಲ್ಲಿ ಓಡಾಡುತ್ತಿದೆ.

  ಪಕ್ಕಾ ಕಮರ್ಷಿಯಲ್ ಆದ ಪವರ್ ಸ್ಟಾರ್ ಪುನೀತ್ ಪಕ್ಕಾ ಕಮರ್ಷಿಯಲ್ ಆದ ಪವರ್ ಸ್ಟಾರ್ ಪುನೀತ್

  ಅಕಿರ ಚಿತ್ರದ ಮೂಲಕ ಸಿನಿ ಪ್ರೇಕ್ಷಕರ ಮನಸ್ಸು ಗೆದ್ದಿದ್ದ ನಟ ಅನೀಶ್ ತೇಜೇಶ್ವರ್ ತಮ್ಮ ಜೊತೆ ಅಭಿನಯಿಸಿದ ನಟಿಯ ಬಗ್ಗೆ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿಕೊಂಡಿದ್ದಾರೆ. ಇದನ್ನ ನೋಡಿರುವ ಅಭಿಮಾನಿಗಳು ಅಯ್ಯೋ ಇವರಿಗ್ಯಾಕೆ ಇಂತಹ ಬುದ್ದಿ ಬಂತು ಅಂತಿದ್ದಾರೆ. ಅಷ್ಟಕ್ಕೂ ಅನೀಶ್ ಸ್ಟೇಟಸ್ ಹಾಕಿದ್ದು ಯಾರ ಬಗ್ಗೆ? ಸಂಪೂರ್ಣ ಮಾಹಿತಿ ಇಲ್ಲಿದೆ ಮುಂದೆ ಓದಿ

  ನಟಿಯ ತುಟಿ ಬಗ್ಗೆ ಕಮೆಂಟ್ ಮಾಡಿದ ಅನೀಶ್

  ನಟಿಯ ತುಟಿ ಬಗ್ಗೆ ಕಮೆಂಟ್ ಮಾಡಿದ ಅನೀಶ್

  'ನಮ್ ಏರಿಯಾದಲ್ಲಿ ಒಂದ್ ದಿನ', 'ನನ್ ಲೈಫ್ ನಲ್ಲಿ', 'ಅಕಿರ' ಚಿತ್ರದ ಮೂಲಕ ಕನ್ನಡ ಸಿನಿಮಾ ಪ್ರೇಕ್ಷಕರನ್ನ ರಂಜಿಸಿದ ನಟ ಅನೀಶ್ ತೇಜೇಶ್ವರ್ ನಟಿ ಕೃಷಿ ತಾಪಂಡ ಅವರ ತುಟಿ ಬಗ್ಗೆ ಫೇಸ್ ಬುಕ್ ನಲ್ಲಿ ಸ್ಟೇಟಸ್ ಹಾಕಿದ್ದಾರೆ. ಈ ವಿಚಾರ ಸದ್ಯ ತೀರ ಚರ್ಚೆಗೆ ಗ್ರಾಸವಾಗಿದೆ.

  ಕಮೆಂಟ್ ನೋಡಿ ಆಶ್ವರ್ಯ ಪಟ್ಟ ಅಭಿಮಾನಿಗಳು

  ಕಮೆಂಟ್ ನೋಡಿ ಆಶ್ವರ್ಯ ಪಟ್ಟ ಅಭಿಮಾನಿಗಳು

  ನಿನ್ನೆ ರಾತ್ರಿ ಅಂದರೆ ಮಾರ್ಚ್ 1 ನೇ ತಾರೀಖಿನಂದು ಅನೀಶ್ ತಮ್ಮ ಫೇಸ್ ಬುಕ್ ನಲ್ಲಿ "ಕೃಷಿ ತಾಪಂಡ ಐ ಲೈಕ್ ಯುವರ್ ಲಿಫ್ಸ್" ಎಂದು ಬರೆದುಕೊಂಡಿದ್ದಾರೆ. ಇದನ್ನ ನೋಡಿದ ಅನೀಶ್ ಅಭಿಮಾನಿಗಳಿಗೆ ಆಶ್ಚರ್ಯ ಆಗಿದೆ.

  ಎಲ್ಲದಕ್ಕೂ ಕಾರಣ ಶಿವರಾಜ್ ಕುಮಾರ್

  ಎಲ್ಲದಕ್ಕೂ ಕಾರಣ ಶಿವರಾಜ್ ಕುಮಾರ್

  ಅನೀಶ್ ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿ ಕನ್ನಡದ ಸಿನಿಮಾರಂಗದ ಪ್ರೇಕ್ಷಕರ ಮನೆ ಮಗನಂತೆ ಮನಸ್ಸಿನಲ್ಲಿ ಉಳಿದುಕೊಂಡಿರುವ ನಟ. ಅನೀಶ್ ನಟಿಯ ತುಟಿ ಬಗ್ಗೆ ಕಮೆಂಟ್ ಮಾಡಲು ಕಾರಣ ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ .

  ನಂ 1 ಯಾರಿ ಶೋ ನಲ್ಲಿ ಅನೀಶ್

  ನಂ 1 ಯಾರಿ ಶೋ ನಲ್ಲಿ ಅನೀಶ್

  ಶಿವರಾಜ್ ಕುಮಾರ್ ನಡೆಸಿಕೊಡುವ ನಂ 1 ಯಾರಿ ಕಾರ್ಯಕ್ರಮದಲ್ಲಿ ಅನೀಶ್ ಇತ್ತಿಚಿಗಷ್ಟೇ ಭಾಗಿ ಆಗಿದ್ದರು. ಈ ಸಮಯದಲ್ಲಿ ಯಾರಿ ಡೇರ್ ಚಾಲೆಂಜ್ ಸ್ವೀಕರಿಸಿದ ಅನೀಶ್ ಕೃಷಿ ಅವರ ತುಟಿ ಬಗ್ಗೆ ಕಮೆಂಟ್ ಮಾಡಿದ್ದಾರೆ.

  ಸಿನಿಮಾ ನೋಡಿ ಡಾಲಿ ಕೈಗೆ ಹಣ ಕೊಟ್ಟ ಪ್ರೇಕ್ಷಕಸಿನಿಮಾ ನೋಡಿ ಡಾಲಿ ಕೈಗೆ ಹಣ ಕೊಟ್ಟ ಪ್ರೇಕ್ಷಕ

  English summary
  Kannada actor Anish update his Facebook status about Actress Krishi Tapanda. Anish and Krishi Tapanda have acted together in Akira movie.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X