»   » ಡಾಲಿಯ ಬೇಬಿ, ಬೋರಾಪುರದ ನಿಂಗಿಗೆ ಭಾರಿ ಡಿಮ್ಯಾಂಡ್

ಡಾಲಿಯ ಬೇಬಿ, ಬೋರಾಪುರದ ನಿಂಗಿಗೆ ಭಾರಿ ಡಿಮ್ಯಾಂಡ್

Posted By:
Subscribe to Filmibeat Kannada
ಡಾಲಿಯ ಬೇಬಿ, ಬೋರಾಪುರದ ನಿಂಗಿಗೆ ಭಾರಿ ಡಿಮ್ಯಾಂಡ್ | Filmibeat Kannada

ಟಗರು ಸಿನಿಮಾ ನೋಡಿದ ನಂತರ ಚಿತ್ರದಲ್ಲಿರುವ ಅನೇಕ ಪಾತ್ರಗಳು ಪ್ರೇಕ್ಷಕರಿಗೆ ಭಾರಿ ಇಷ್ಟವಾಗಿದೆ. ಡಾಲಿ, ಚಿಟ್ಟೆ, ಸರೋಜಮ, ಜಾಮೂನ್ ರವಿ, ಅಂಕಲ್ ಹೀಗೆ ಸಾಲು ಸಾಲು ಪಾತ್ರಗಳು ನೋಡುಗರನ್ನ ಸೆಳೆಯುತ್ತಿವೆ. ಇವೆಲ್ಲವುಗಳ ಜೊತೆ ಡಾಲಿಯ ಬೇಬಿಯನ್ನೂ ಮರೆಯುವ ಆಗಿಲ್ಲ. ಅರೆ ಯಾರ ಬಗ್ಗೆ ಹೇಳ್ತಿದ್ದೀವಿ ಅಂತ ಯೋಚನೆ ಮಾಡಬೇಡಿ ನಾವ್ ಹೇಳ್ತಿರೋದು ಸ್ಯಾಂಡಲ್ ವುಡ್ ನ ನಟಿ ಅನಿತಾ ಭಟ್ ಬಗ್ಗೆ.

ಅನಿತಾ ಭಟ್ ಸಿನಿಮಾರಂಗದಲ್ಲಿ ಹತ್ತು ವರ್ಷಗಳಿಂದ ವಿಭಿನ್ನ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಟಿ. ಕೆಲ ಸಿನಿಮಾ ನೋಡಿದಾಗ ಇವರು ಗೆಸ್ಟ್ ಅಪಿಯರೆನ್ಸ್ ನಲ್ಲಿ ಮಾತ್ರ ಇರಬೇಕು ಎನ್ನುವವರ ಮಧ್ಯೆ ತನ್ನದೇ ಆದ ರೀತಿಯಲ್ಲಿ ಚಿತ್ರರಂಗದಲ್ಲಿ ಜಾಗ ಗಿಟ್ಟಿಸಿಕೊಂಡಿರುವ ನಟಿ ಈಕೆ. ಅನಿತಾ ಹತ್ತು ವರ್ಷದಿಂದ ಬೆರೆಳೆಣಿಕೆ ಸಿನಿಮಾಗಳಲ್ಲಿ ಅಭಿನಯಿಸಿದ್ದು ಈಗ ಚಿತ್ರರಂಗದಲ್ಲಿ ಬಾರಿ ಬೇಡಿಕೆಯ ನಟಿಯಾಗಿದ್ದಾರೆ.

ಚಿಟ್ಟೆ ಲವರ್ ದೀಪಾಗೆ ರಿಯಲ್ ಮದುವೆ ಆಗೋಯ್ತು, ಯಾರ್ ಜೊತೆ?

ಡಾಲಿ ಜೊತೆ ಅಭಿನಯಿಸಿದ ನಂತರ ಬೋರಾಪುರದ ನಿಂಗಿ ಆಗಿ ಪ್ರೇಕ್ಷಕರ ಮುಂದೆ ಬರಲು ಸಿದ್ದರಾಗಿದ್ದಾರೆ. ಹಾಗಾದರೆ ಸದ್ಯ ಅನಿತ ಭಟ್ ಕೈನಲ್ಲಿರುವ ಚಿತ್ರಗಳೆಷ್ಟು. ಅನಿತಾ ಭಟ್ ಕೇವಲ ಸ್ಪೆಷಲ್ ಅಪಿಯರೆನ್ಸ್ ಮಾತ್ರ ಒಪ್ಪಿಕೊಳ್ಳುತ್ತಿದ್ದಾರ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಇಲ್ಲಿದೆ ಮುಂದೆ ಓದಿ

ಡಾಲಿಯ ಬೇಬಿಗೆ ಭಾರಿ ಬೇಡಿಕೆ

ಟಗರು ಸಿನಿಮಾದಲ್ಲಿ ಡಾಲಿಯ ಬೇಬಿ ಆಗಿ ಗುರುತಿಸಿಕೊಂಡಿದ್ದ ನಟಿ ಅನಿತಾ ಭಟ್ ಸದ್ಯ ಚಂದನವನದಲ್ಲಿ ಬ್ಯುಸಿ ಆಗಿರುವ ನಟಿ , ಇತ್ತೀಚಿಗಷ್ಟೆ ಬೋರಾಪುರ ಸಿನಿಮಾದ ಟ್ರೇಲರ್ ಬಿಡುಗಡೆ ಆಗಿದ್ದು ಅನಿತಾ ಸಿನಿಮಾದಲ್ಲಿ ನಿಂಗಿ ಪಾತ್ರವನ್ನ ನಿರ್ವಹಿಸಿದ್ದಾರೆ.

ವಿಭಿನ್ನ ಪಾತ್ರಗಳ ಆಯ್ಕೆ

ಅನಿತಾ ಭಟ್ 'ಸೈಕೋ' ಸಿನಿಮಾ ಮೂಲಕ ಕನ್ನಡ ಸಿನಿಮಾರಂಗವನ್ನ ಪ್ರವೇಶ ಮಾಡಿದ್ರು. ಅದಾದ ನಂತರ ಉತ್ತಮ ಅವಕಾಶಕ್ಕಾಗಿ ಸಾಕಷ್ಟು ದಿನಗಳು ಕಾದಿದ್ದರು. ಹತ್ತು ವರ್ಷದ ನಂತರ ವಿಭಿನ್ನ ಪಾತ್ರಗಳು ಹುಡುಕಿಕೊಂಡು ಬರುತ್ತಿದ್ದು 'ವೈಷಾಕಿನಿ' ಹಾಗೂ 'ಅಭಿರಾಮಿ' ಎನ್ನುವ ಸಿನಿಮಾಗಳಲ್ಲಿ ರಾಣಿಯ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.

ಅನಿತಾ ಕೈ ತುಂಬ ಸಿನಿಮಾಗಳು

ಟಗರು ಚಿತ್ರದ ನಂತರ ಅನಿತಾ ಭಟ್ ಅಭಿನಯದ 'ಬೋರಾಪುರ' ಚಿತ್ರ ರಿಲೀಸ್ ಆಗುತ್ತಿದೆ. ಇನ್ನು ಅಭಿನಯಿಸುತ್ತಿರುವ ಆರಕ್ಕೂ ಹೆಚ್ಚು ಸಿನಿಮಾಗಳು ಚಿತ್ರೀಕರಣದ ಕೊನೆಯ ಹಂತ ತಲುಪಿದೆ, ಅದರ ಜೊತೆಯಲ್ಲಿ ಅಕ್ಕ-ಪಕ್ಕದ ಚಿತ್ರರಂಗದಲ್ಲಿಯೂ ಆಫರ್ ಗಳು ಬರುತ್ತಿದೆ.

ಅನಿತಾ ಅಭಿನಯಿಸುತ್ತಿರುವ ಚಿತ್ರಗಳು

ಸದ್ಯ ಅನಿತಾ ಭಟ್ 'ಪ್ರಭುತ್ವ' , 'ಡಿ ಎನ್ ಎ', ಬೋರಾಪುರ ಚಿತ್ರಗಳಲ್ಲಿ ಅಭಿನಯಿಸುತ್ತಿದ್ದು ಇನ್ನು ಹೆಸರಿಡ ಚಿತ್ರಗಳು ಮಾತುಗತೆ ಆಗಿದ್ದು ಚಿತ್ರೀಕರಣ ಶುರು ಆಗಬೇಕಿದೆ. ಕೆಲ ಚಿತ್ರಗಳಲ್ಲಿ ಸ್ಪೆಷಲ್ ಅಪಿಯರೆನ್ಸ್ ನಲ್ಲಿ ಕಾಣಿಸಿಕೊಂಡಿದ್ದು ಸಿನಿಮಾದ ಕತೆಗೆ ತಿರುವು ನೀಡುವ ಪಾತ್ರದಲ್ಲಿ ಅನಿತಾ ಕಾಣಿಸಿಕೊಂಡಿದ್ದಾರೆ.

English summary
Kannada actress Anitta Bhat has been busy with movies and Anitha Bhat is currently acting in six films. Anita Bhat has done a baby role in the Tagaru film.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X