ದರ್ಶನ್ ಫ್ಯಾನ್ ಆಗಿದ್ದಕ್ಕೆ ಬಿಗ್ ಬಾಸ್‌ನಲ್ಲಿ ನನಗೆ ಅವಕಾಶ ಸಿಗಲಿಲ್ಲ; ಗಂಭೀರ ಆರೋಪ ಮಾಡಿದ ನಟ..!
ಬಿಗ್ ಬಾಸ್ ಮೂಲಕ ಅನೇಕರು ಬೆಳಕಿಗೆ ಬಂದಿದ್ದಾರೆ. ಆ ನಂತರ ತಮ್ಮಲ್ಲಿನ ಪ್ರತಿಭೆಯಿಂದ ಬೆಳೆದಿದ್ದಾರೆ. ಕೆಲವರು ಕಿರುತೆರೆಯಲ್ಲಿ .. ಇನ್ನು ಕೆಲವರು ಚಿತ್ರರಂಗದಲ್ಲಿ ಹೆಸರನ್ನು ಸಂಪಾದಿಸಿದ್ದಾರೆ. ಮಿಂಚಿದ್ದಾರೆ. ಕೇವಲ ಕನ್ನಡದಲ್ಲಿ ಮಾತ್ರವಲ್ಲ ಬೇರೆ ಬೇರೆ ಭಾಷೆಯಲ್ಲಿ ಕೂಡ ಬಿಗ್ ಬಾಸ್ ಅನೇಕರ ಬದುಕು ಬದಲಿಸಿದೆ. ಇಂಥಾ ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಭಾಗಿಯಾಗುವ ಕನಸನ್ನು ಅನೇಕರು ಕಾಣುತ್ತಾರೆ.
ಆಯೋಜಕರ ಗಮನ ಸೆಳೆಯಲು ನಾನಾ ಕಸರತ್ತು ಕೂಡ ಮಾಡುತ್ತಾರೆ. ಆದರೆ ಬಿಗ್ ಬಾಸ್ ವರ ಎಲ್ಲರಿಗೆ ಸಿಗಲ್ಲ. ಯಾಕೆಂದರೆ ಅದಕ್ಕೆ ಅದ್ರದ್ದೇ ಆದ ನೀತಿ ನಿಯಮಗಳಿವೆ. ಕಾರ್ಯಕ್ರಮಕ್ಕೆ ಇವರು ಇವರೇ ಬರಬೇಕು ಎಂದು ಮೊದಲೇ ಡಿಸೈಡ್ ಮಾಡಿರಲಾಗಿರುತ್ತೆ ಎನ್ನುವ ಮಾತು ಇದೆ. ಇದಕ್ಕೆ ಕೈ ಗನ್ನಡಿ ಎನ್ನುವಂತೆ ಇದೀಗ ಜಿಮ್ ಟ್ರೈನರ್ ಕಮ್ ನಟ ಅಂಜನ್ ದೀಪು ಬಿಗ್ ಬಾಸ್ ಮೇಲೆ ಗಂಭೀರ ಆರೋಪ ಮಾಡಿದ್ದಾರೆ.

ಹೌದು, ಬಾಸ್ ಟಿವಿಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಅಂಜನ್ ದೀಪು ಬಿಗ್ ಬಾಸ್ ನನ್ನನ್ನೂ ಯಾವತ್ತು ನೇರವಾಗಿ ಕರೆದಿಲ್ಲ. ಆದರೆ ನನಗೆ ಅಲ್ಲಿನವರು ಸಂಪರ್ಕದಲ್ಲಿದ್ದಾರೆ ಎಂದಿರುವ ಅಂಜನ್ ದೀಪು, ಅವರು ನಿನ್ನ ಫೋಟೊ ಮತ್ತು ವಿವರಗಳನ್ನು ನಾನು ಕಳುಹಿಸುತ್ತೇನೆ ಅಂದರು, ನಾನು ಸರಿ ಕಳುಹಿಸಿ ಎಂದೆ ಆದರೆ ಅವರು ಫೋಟೊ ಕಳುಹಿಸಿದ ತಕ್ಷಣ ನನ್ನ ರಿಜೆಕ್ಟ್ ಮಾಡಲಾಯ್ತು ಎಂದಿದ್ದಾರೆ.
ನನ್ನ ಫೋಟೋ ನೋಡುತ್ತಿದ್ದಂತೆ ಅಂಜನ್ ದೀಪು ಯಾರು? ಏನು ಮಾಡುತ್ತಿದ್ದಾರೆ? ಯಾರ ಅಭಿಮಾನಿ ಎಂಬ ಪ್ರಶ್ನೆಗಳು ಮೊದಲು ಬರುತ್ತವೆ, ಆಗ ನಾನು ದರ್ಶನ್ ಸರ್ ಅಭಿಮಾನಿ ಅಂತಾ ಗೊತ್ತಾಗುತ್ತೆ ಎಂದಿರುವ ಅಂಜನ್ ದೀಪು ಬಿಗ್ ಬಾಸ್‌ನಲ್ಲಿ ದರ್ಶನ್ ಸರ್ ಅಭಿಮಾನಿ ಅಂತ ಗೊತ್ತಾದರೆ ಬೇಡ ಎಂದು ನಿರ್ಧಾರ ಮಾಡುತ್ತಾರೆ ಎಂದು ಹೇಳಿದ್ದಾರೆ. ನಾನು ಅವತ್ತೂ ದರ್ಶನ್ ಸರ್ ಅಭಿಮಾನಿ, ಇವತ್ತು ದರ್ಶನ್ ಸರ್ ಅಭಿಮಾನಿ, ಎಂದೆಂದೂ ದರ್ಶನ್ ಸರ್ ಅಭಿಮಾನಿ ಎಂದಿರುವ ಅಂಜನ್ ದೀಪು ದರ್ಶನ್ ಸರ್ ಅಭಿಮಾನಿಯಾಗಿದ್ದಕ್ಕೆ ನಾನು ಅವಕಾಶ ವಂಚಿತನಾದೆ ಎಂದು ಹೇಳಿದ್ದಾರೆ.
ಮುಂದುವರೆದು ಬಿಗ್ ಬಾಸ್ ಮನೆಗೆ ಹೋಗಲು ತುಂಬಾನೇ ಪ್ರಭಾವಶಾಲಿ ವ್ಯಕ್ತಿಯ ಬೆಂಬಲ ಇರಬೇಕು ಎಂದು ಹೇಳಿರುವ ಅಂಜನ್ ದೀಪು, ಆ ಮನೆಯಲ್ಲಿ ಯಾರು ಎಷ್ಟು ದಿನ ಇರಬೇಕು ಎನ್ನುವುದು ಮೊದಲೇ ನಿರ್ಧಾರವಾಗಿರುತ್ತೆ ಎಂದು ಹೇಳಿದ್ದಾರೆ. ಸುಖಾಸುಮ್ಮನೆ ಅವರಿಗೆ ಅಷ್ಟು ಲಕ್ಷ, ಇವರಿಗೆ ಇಷ್ಟು ಲಕ್ಷ ಎಂದು ಹೇಳುತ್ತಾರೆ, ಪೇಮೆಂಟ್ ಯಾರಿಗೆ ಎಷ್ಟು ಕೊಟ್ಟರು ಎಂದು ಯಾರು ಹೋಗಿ ನೋಡುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ಬಿಗ್ ಬಾಸ್ ಮನೆಯಲ್ಲಿ ಏನೆಲ್ಲ ನಡೆಯುತ್ತೆ ಎನ್ನುವುದು ನನಗೆ ಗೊತ್ತು, ಯಾಕೆಂದರೆ ಅಲ್ಲಿ ಹೋಗಿ ಬಂದವರಲ್ಲಿ ನನಗೆ ತುಂಬಾ ಜನ ಸ್ನೇಹಿತರು ಇದ್ದಾರೆ ಎಂದಿರುವ ಅಂಜನ್ ದೀಪು, ಒಳಗಡೆ ಏನಾಗುತ್ತೆ ಎಂದು ಗೊತ್ತಾದ ಮೇಲೆ ಕೂಡ ನಾನು ಅಲ್ಲಿಗೆ ಹೇಗೆ ಹೋಗಲಿ ಎಂದು ಪ್ರಶ್ನೆ ಮಾಡಿದ್ದಾರೆ. ಬಿಗ್ ಬಾಸ್‌ನಿಂದ ಹೊರ ಬಂದ ಮೇಲೆ ಏನು ಮಾಡ್ತಿದ್ದೀಯಾ ಎಂದು ಕೇಳಿದರೆ ಹೋಟೆಲ್ ಉದ್ಘಾಟನೆ ಸಮಾರಂಭಕ್ಕೆ ಹೋಗ್ತಿದ್ದೀನಿ, ಆ ಕಾರ್ಯಕ್ರಮ ಇದೆ, ಈ ಕಾರ್ಯಕ್ರಮ ಇದೆ ಎಂದು ಹೇಳ್ತಾರೆ ಅಷ್ಟೇ ಎಂದು ಕೂಡ ಅಂಜನ್ ದೀಪು ಹೇಳಿದ್ದಾರೆ.
ಅಂದ್ಹಾಗೇ ಅಂಜನ್ ದೀಪು ಬೆಸಿಕಲಿ ಜಿಮ್ ಟ್ರೈನರ್. ದರ್ಶನ್ ಸೇರಿ ಹಲವರಿಗೆ ಕಸರತ್ತಿನ ಪಾಠವನ್ನು ಇವರು ಮಾಡಿದ್ದಾರೆ. ಇನ್ನು ಚಿತ್ರರಂಗದಲ್ಲಿ ನಾಯಕನಾಗಿ ಕೂಡ ಕಾಣಿಸಿಕೊಂಡಿರುವ ಅಂಜನ್ ದೀಪು, ತಮ್ಮದೇ ಹೆಸರಿನಲ್ಲಿ ಅಂಜನ್ ಎಂಬ ಚಿತ್ರವನ್ನು ಕೂಡ ಮಾಡಿದ್ದಾರೆ.


Click it and Unblock the Notifications