twitter
    For Quick Alerts
    ALLOW NOTIFICATIONS  
    For Daily Alerts

    ಇಂದು ನನಸಾಯ್ತು ಅರ್ಜುನ್ ಸರ್ಜಾ ಕಂಡ ವರ್ಷಗಳ ಕನಸು

    |

    ಖ್ಯಾತ ನಟ ಅರ್ಜುನ್ ಸರ್ಜಾ ಕಂಡಿದ್ದ ಬಹು ವರ್ಷಗಳ ಕನಸು ಇಂದು ನನಸಾಗಿದೆ. ಅರ್ಜುನ್ ಸರ್ಜಾ ನಿರ್ಮಿಸಿರುವ ಆಂಜನೇಯ ದೇಗುಲ ಇಂದು ಲೋಕಾರ್ಪಣೆಯಾಗಿದೆ.

    ಆಂಜನೇಯ ಸ್ವಾಮಿ ದೇಗುಲವನ್ನು ನಿರ್ಮಿಸಬೇಕು ಎಂಬುದು ಅರ್ಜುನ್ ಸರ್ಜಾರ ಬಹುದಿನದ ಕನಸು. ಆ ಕನಸು ಇದೀಗ ಈಡೇರಿದೆ. ಚೆನ್ನೈನ ಗುರುಗಂಬಕ್ಕಮ್‌ನಲ್ಲಿ ಅರ್ಜುನ್ ಸರ್ಜಾ ಬೃಹತ್ತಾದ ಆಂಜನೇಯ ಸ್ವಾಮಿ ದೇವಾಲಯ ನಿರ್ಮಿಸಿದ್ದಾರೆ.

    ಅರ್ಜುನ್ ಸರ್ಜಾ ನಿರ್ಮಿಸಿರುವ ಬೃಹತ್ ದೇವಾಲಯದ ಲೋಕಾರ್ಪಣೆ ಇಂದು ನೆರವೇರಿದೆ. ಪೂಜೆಗಳು, ಹೋಮಗಳು, ಅದ್ಧೂರಿ ಕುಂಭಾಭಿಷೇಕ ಇನ್ನಿತರೆ ಧಾರ್ಮಿಕ ಕಾರ್ಯಕ್ರಮಗಳ ಮೂಲಕ ದೇವಸ್ಥಾನವನ್ನು ಉದ್ಘಾಟನೆ ಮಾಡಲಾಗಿದೆ. ನಾಳೆಯೂ ಧಾರ್ಮಿಕ ಕಾರ್ಯಗಳು ನಡೆಯಲಿವೆ.

    Anjaneya Swami Temple Which Built By Arjun Sarja Inaugurated Today

    ಕೊರೊನಾ ಕಾರಣದಿಂದಾಗಿ ಕಡಿಮೆ ಮಂದಿ ಅತಿಥಿಗಳು, ಕುಟುಂಬ ಸದಸ್ಯರ ಸಮ್ಮುಖದಲ್ಲಿ ದೇವಾಲಯದ ಲೋಕಾರ್ಪಣೆ ಕಾರ್ಯಕ್ರಮ ನಡೆದಿದೆ. ಅಭಿಮಾನಿಗಳಿಗಾಗಿ ಧಾರ್ಮಿಕ ಕಾರ್ಯಗಳನ್ನು ಯೂಟ್ಯೂಬ್ ಹಾಗೂ ಇತರೆ ಸಾಮಾಜಿಕ ಜಾಲತಾಣಗಳ ಮೂಲಕ ಲೈವ್ ಮಾಡಲಾಗಿತ್ತು.

    ಬೃಹತ್‌ ಆದ ಆಂಜನೇಯ ಸ್ವಾಮಿ ಮೂರ್ತಿಯನ್ನು ಅರ್ಜುನ್ ಸರ್ಜಾ ಸ್ಥಾಪಿಸಿದ್ದಾರೆ. ತಮ್ಮ ಸ್ವಂತ ಖರ್ಚಿನಲ್ಲಿ ದೇವಾಲಯ ನಿರ್ಮಿಸಿರುವ ಅರ್ಜುನ್ ಸರ್ಜಾ, ದೇವಾಲಯ ನಿರ್ಮಾಣದ ಪ್ರತಿ ಕಾರ್ಯವನ್ನು ಹತ್ತಿರವಿದ್ದು ಮೇಲ್ವಿಚಾರಣೆ ಮಾಡಿದ್ದಾರೆ. ನಿರ್ಮಾಣ ಕಾರ್ಯದಲ್ಲಿ ಅವರೂ ಸಹ ಕೈಜೋಡಿಸಿದ್ದಾರೆ.

    Anjaneya Swami Temple Which Built By Arjun Sarja Inaugurated Today

    Recommended Video

    KGF 2 ನ ಎಲ್ಲಾ ಭಾಷೆಯ ಆಡಿಯೋ ಹಕ್ಕು ಖರೀದಿಸಿದ ಲಹರಿ ಸಂಸ್ಥೆ | Filmibeat Kannada

    ಅರ್ಜುನ್ ಸರ್ಜಾ ಮಾಡಿರುವ ಈ ಕಾರ್ಯಕ್ಕೆ ಅಭಿಮಾನಿಗಳು, ಆಂಜನೇಯ ಭಕ್ತರು ಬಹು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    English summary
    Anjaneya Swami temple which built by Arjun Sarja in Chennai inaugurated today. Rituals will be done on July 2 also.
    Thursday, July 1, 2021, 17:06
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X