'ಅಂಜನಿಪುತ್ರ'ನ ಜೊತೆ 'ಕನಕ' ಫೈಟ್ ಮಾಡೋದಿಲ್ಲ!
Recommended Video

ಡಿಸೆಂಬರ್ ತಿಂಗಳು ಮುಗಿಯುತ್ತಿದೆ. ಹೊಸ ವರ್ಷ ಬರುವುದರೊಳಗೆ ಕನ್ನಡದ ಕೆಲ ಸಿನಿಮಾಗಳು ತೆರೆಗೆ ಅಪ್ಪಳಿಸುವುದಕ್ಕೆ ಸಿದ್ಧವಾಗಿದೆ. ಈ ವರ್ಷದ ಬಹುನಿರೀಕ್ಷೆಯ ಕೆಲವು ಸಿನಿಮಾಗಳು ಈ ವರ್ಷಾಂತ್ಯಕ್ಕೆ ರಿಲೀಸ್ ಆಗುವ ತಯಾರಿಯಲ್ಲಿವೆ.
ಈ ತಿಂಗಳು ರಿಲೀಸ್ ಆಗುವ ಸಿನಿಮಾಗಳ ಪೈಕಿ ಪುನೀತ್ ರಾಜ್ ಕುಮಾರ್ ನಟನೆಯ 'ಅಂಜನಿಪುತ್ರ' ಮತ್ತು ದುನಿಯಾ ವಿಜಯ್ ನಟನೆಯ 'ಕನಕ' ಸಿನಿಮಾ ಪ್ರಮುಖವಾಗಿದ್ದವು. ಮೊದಲು ಈ ಎರಡು ಚಿತ್ರಗಳು ಇದೇ ತಿಂಗಳು ಬಿಡುಗಡೆಯಾಗುತ್ತದೆ ಎಂಬ ಸುದ್ದಿ ಇತ್ತು. 'ಅಂಜನಿಪುತ್ರ' ಮತ್ತು 'ಕನಕ' ಚಿತ್ರಗಳ ನಡುವೆ ಪೈಪೋಟಿ ನಡೆಯುತ್ತದೆಯಾ ಎನ್ನವ ಕುತೂಹಲ ಕೂಡ ಮೂಡಿತ್ತು. ಆದರೆ ಈಗ ಗಾಂಧಿನಗರಕ್ಕೆ 'ಅಂಜನಿಪುತ್ರ'ನ ಆಗಮನವಾಗಲು 'ಕನಕ' ದಾರಿ ಬಿಟ್ಟು ಕೊಟ್ಟಿದ್ದಾನೆ. ಮುಂದೆ ಓದಿ....

ಮುಂದೆ ಹೋದ 'ಕನಕ'
'ಕನಕ' ಮತ್ತು 'ಅಂಜನಿಪುತ್ರ' ಸಿನಿಮಾ ಒಂದೇ ತಿಂಗಳು ರಿಲೀಸ್ ಆಗುತ್ತಿಲ್ಲ. ಯಾಕಂದ್ರೆ, ಈಗ ದುನಿಯಾ ವಿಜಯ್ ನಟನೆಯ 'ಕನಕ' ಸಿನಿಮಾ ಬಿಡುಗಡೆಯ ದಿನಾಂಕ ಮುಂದೆ ಹೋಗಿದೆ.

ಜನವರಿಯಲ್ಲಿ 'ಕನಕ' ರಿಲೀಸ್
'ಅಂಜನಿಪುತ್ರ' ಸಿನಿಮಾ ಡಿಸೆಂಬರ್ ನಲ್ಲಿ ಬಿಡುಗಡೆಯಾಗುವ ಕಾರಣ ಜನವರಿ ತಿಂಗಳಿನ ಮೊದಲ ಅಥವಾ ಎರಡನೇ ವಾರ 'ಕನಕ' ಬಿಡುಗಡೆಯಾಗಲಿದೆ.

ಬಾಕ್ಸ್ ಆಫೀಸ್ ಲೆಕ್ಕಾಚಾರ
ಪುನೀತ್ ರಾಜ್ ಕುಮಾರ್ ಮತ್ತು ದುನಿಯಾ ವಿಜಯ್ ಇಬ್ಬರು ಕನ್ನಡದ ದೊಡ್ಡ ನಟರಾಗಿರುವ ಕಾರಣ ಎರಡು ಚಿತ್ರಗಳು ಒಂದೇ ಸಮಯಕ್ಕೆ ರಿಲೀಸ್ ಆದರೆ ಬಾಕ್ಸ್ ಆಫೀಸ್ ನಲ್ಲಿ ಎರಡು ಚಿತ್ರಗಳಿಗೆ ಪಟ್ಟು ಬೀಳುತ್ತದೆ. ಇದೇ ಕಾರಣಕ್ಕೆ ಈಗ ಎರಡು ಸಿನಿಮಾಗಳಿಗೂ ಸಮಸ್ಯೆ ಆಗಬಾರದು ಎಂದು 'ಕನಕ' ಚಿತ್ರತಂಡ ಈ ನಿರ್ಧಾರ ತೆಗೆದುಕೊಂಡಿದೆಯಂತೆ.

ಹೊಸ ವರ್ಷಕ್ಕೆ 'ಕನಕ'ನ ಉಡುಗೊರೆ
ಹೊಸ ವರ್ಷಕ್ಕೆ 'ಕನಕ' ಚಿತ್ರತಂಡ ಸಿನಿಮಾದ ವಿಶೇಷ ಹಾಡನ್ನು ರಿಲೀಸ್ ಮಾಡಲಿದೆ. ಇದು ಎಣ್ಣೆ ಹಾಡು ಆಗಿದ್ದು, ನವೀನ್ ಸಜ್ಜು ಹಾಡಿಗೆ ಸಂಗೀತ ನೀಡಿದ್ದಾರೆ.

'ಅಂಜನಿಪುತ್ರ' ಚಿತ್ರದ ಬಗ್ಗೆ
'ಅಂಜನಿಪುತ್ರ' ತಮಿಳಿನ 'ಪೂಜೈ' ಚಿತ್ರದ ರಿಮೇಕ್ ಆಗಿದೆ. ನಟಿ ರಮ್ಯ ಕೃಷ್ಣ ಪುನೀತ್ ತಾಯಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ರಶ್ಮಿಕಾ ಮಂದಣ್ಣ ಎರಡನೇ ಸಿನಿಮಾ ಇದಾಗಿದೆ. ಪುನೀತ್ ರಾಜ್ ಕುಮಾರ್ ಜೋಡಿಯಾಗಿ ಕಿರಿಕ್ ಹುಡುಗಿ ಕಾಣಿಸಿಕೊಂಡಿದ್ದಾರೆ. ಸಿನಿಮಾ ಇದೇ ತಿಂಗಳ 21ಕ್ಕೆ ರಿಲೀಸ್ ಆಗಲಿದೆ


Click it and Unblock the Notifications











