ತಮಿಳಿನ 'ಪೂಜೈ' ಚಿತ್ರಕ್ಕಿಂತ 'ಅಂಜನಿಪುತ್ರ' ಡಿಫರೆಂಟ್

By Bharath Kumar

Recommended Video

ಶಿವಣ್ಣ ಹಾಗು ಪುನೀತ್ ರಾಜ್ ಕುಮಾರ್ ಜೊತೆಯಾಗಿ ಫೇಸ್ ಬುಕ್ ಲೈವ್ ನಲ್ಲಿ | Filmibeat Kannada

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯಿಸಿರುವ 'ಅಂಜನಿಪುತ್ರ' ಸಿನಿಮಾ ಡಿಸೆಂಬರ್ 21ಕ್ಕೆ ರಿಲೀಸ್ ಆಗುತ್ತಿದೆ. ಇದು ತಮಿಳಿನ ಸೂಪರ್ ಹಿಟ್ ಸಿನಿಮಾ 'ಪೂಜೈ' ರೀಮೇಕ್ ಎನ್ನುವುದು ಗೊತ್ತಿರುವ ವಿಚಾರ. ಆದ್ರೆ, ತಮಿಳಿನ 'ಪೂಜೈ' ಚಿತ್ರಕ್ಕಿಂತ 'ಅಂಜನಿಪುತ್ರ' ಡಿಫರೆಂಟ್.

ತಮಿಳಿನಲ್ಲಿ ವಿಶಾಲ್ ಅಭಿನಯಿಸಿದ್ದ ಈ ಚಿತ್ರದಲ್ಲಿ ಶ್ರುತಿ ಹಾಸನ್ ನಾಯಕಿಯಾಗಿದ್ದರು. ಹಿರಿಯ ನಟಿ ರಾಧಿಕಾ ಮುಖ್ಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಕನ್ನಡದಲ್ಲಿ ಪುನೀತ್ ನಾಯಕನಾಗಿದ್ದು, ರಶ್ಮಿಕಾ ಮಂದಣ್ಣ ಜೋಡಿಯಾಗಿದ್ದಾರೆ. ಬಹುಭಾಷಾ ನಟಿ ರಮ್ಯಾಕೃಷ್ಣ ಮುಖ್ಯಪಾತ್ರವನ್ನ ನಿರ್ವಹಿಸಿದ್ದಾರೆ.

ಹಾಗಿದ್ರೆ, ತಮಿಳಿನ 'ಪೂಜೈ' ಚಿತ್ರಕ್ಕಿಂತ ಕನ್ನಡದ ಅಂಜನಿಪುತ್ರ ಯಾಕೆ ವಿಶೇಷ? ಅಂಜನಿಪುತ್ರ ಚಿತ್ರವನ್ನ ಯಾಕೆ ನೋಡ್ಬೇಕು ಎಂಬ ಕೆಲವು ಅಂಶಗಳನ್ನ ಪಟ್ಟಿ ಮಾಡಲಾಗಿದೆ. ಮುಂದೆ ಓದಿ.....

ರೀಮೇಕ್ ಆದ್ರೂ ಸ್ವಮೇಕ್ ಸೊಗಡು

ರೀಮೇಕ್ ಆದ್ರೂ ಸ್ವಮೇಕ್ ಸೊಗಡು

'ಅಂಜನಿಪುತ್ರ' ತಮಿಳಿನ 'ಪೂಜೈ' ಚಿತ್ರದ ಕಂಪ್ಲೀಟ್ ರೀಮೇಕ್ ಅಲ್ಲ. ತಮಿಳಿನ ಚಿತ್ರವನ್ನ ಸ್ಫೂರ್ತಿಯಾಗಿ ಪಡೆದುಕೊಂಡು, ನಮ್ಮ ಸಂಸ್ಕೃತಿ, ನೆಲೆಗೆ ತಕ್ಕಂತೆ ಚಿತ್ರಕಥೆಯಲ್ಲಿ ಬದಲಾವಣೆ ಮಾಡಿಕೊಳ್ಳಲಾಗಿದೆ. ಹೀಗಾಗಿ, ಇದು ಕಾಪಿ ಪೇಸ್ಟ್ ಆಗಿರುವುದಿಲ್ಲ ಎಂಬುದು ಗಮನಿಸಬೇಕಾದ ಅಂಶ.

ಅವಧಿಗೆ ಕಡಿಮೆ ಮಾಡಲಾಗಿದೆ

ಅವಧಿಗೆ ಕಡಿಮೆ ಮಾಡಲಾಗಿದೆ

ತಮಿಳಿನಲ್ಲಿ 'ಪೂಜೈ' ಸಿನಿಮಾ 2 ಗಂಟೆ 38 ನಿಮಿಷಗಳ ಕಾಲಾವಧಿ ಹೊಂದಿದೆ. ಆದ್ರೆ, ಕನ್ನಡದಲ್ಲಿ ಚಿತ್ರದ ಸಮಯವನ್ನ ಕಡಿತಗೊಳಿಸಲಾಗಿದೆಯಂತೆ. ಮೂಲಗಳ ಪ್ರಕಾರ ಸುಮಾರು 15 ರಿಂದ 20 ನಿಮಿಷ ಕಡಿಮೆ ಮಾಡಲಾಗಿದೆ.

ಎರಡೂ ಚಿತ್ರಗಳಲ್ಲೂ ವಿಲನ್ ಒಬ್ಬರೇ

ಎರಡೂ ಚಿತ್ರಗಳಲ್ಲೂ ವಿಲನ್ ಒಬ್ಬರೇ

ತಮಿಳು ಹಾಗೂ ಕನ್ನಡದ ಎರಡೂ ಚಿತ್ರಗಳಲ್ಲೂ ಒಬ್ಬರೇ ಖಳನಾಯಕ ಮುಖೇಶ್ ತಿವಾರಿ. ಅಲ್ಲಿ ವಿಶಾಲ್ ಎದುರು ಅಬ್ಬರಿಸಿದ್ದರು. ಇಲ್ಲಿ ಪುನೀತ್ ಎದುರು ಘರ್ಜಿಸಲಿದ್ದಾರೆ.

ಫ್ಯಾಮಿಲಿ 'ಪವರ್'

ಫ್ಯಾಮಿಲಿ 'ಪವರ್'

ಅಂದ್ಹಾಗೆ, ಪುನೀತ್ ರಾಜ್ ಕುಮಾರ್ ಗೆ ಫ್ಯಾಮಿಲಿ ಎಂಟರ್ ಟೈನ್ ಮೆಂಟ್ ಸಿನಿಮಾಗಳಲ್ಲಿ ಹೆಚ್ಚು ಯಶಸ್ಸು ಸಿಕ್ಕಿದೆ. ಅಂಜನಿಪುತ್ರ ಕೂಡ ಪಕ್ಕಾ ಫ್ಯಾಮಿಲಿ ಸ್ಟೋರಿ. ಹೀಗಾಗಿ, ಅಪ್ಪು ಅಭಿಮಾನಿಗಳಿಗೆ ಈ ಚಿತ್ರದ ಮೇಲೆ ಹೆಚ್ಚು ನಂಬಿಕೆ ಇದೆ.

More from Filmibeat

English summary
Kannada Actor, Powerstar Puneeth Rajkumar most expected Movie Anjaniputra has been censored with clean U/A certificate and is releasing on 21st December. Anjaniputra is remake of Tamil movie Poojai.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X