ಪುನೀತ್ 'ಅಂಜನೀಪುತ್ರ' ಹಾಡುಗಳ ಹಬ್ಬ ಇದೇ ತಿಂಗಳು ಶುರು
ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನೀಪುತ್ರ' ಸಿನಿಮಾದ ಆಡಿಯೋ ಬಿಡುಗಡೆ ದಿನಾಂಕ ಇದೀಗ ನಿಗದಿ ಆಗಿದೆ. ಚಿತ್ರದ ಹಾಡುಗಳು ಇದೇ ತಿಂಗಳು ರಿಲೀಸ್ ಆಗಲಿದೆ.
ಸಿನಿಮಾದ ಆಡಿಯೋವನ್ನು ನವೆಂಬರ್ 27ಕ್ಕೆ ಬಿಡುಗಡೆ ಮಾಡುವುದಕ್ಕೆ ಚಿತ್ರತಂಡ ಪ್ಲಾನ್ ಮಾಡಿದೆ. ಇದುವರೆಗೂ 'ಅಂಜನೀಪುತ್ರ' ಚಿತ್ರದ ಟೀಸರ್.. ಟ್ರೇಲರ್.. ಯಾವುದು ಬಿಡುಗಡೆ ಆಗಿಲ್ಲ. ಪೋಸ್ಟರ್ ಬಿಟ್ಟು ಚಿತ್ರದ ಸಣ್ಣ ತುಣುಕನ್ನು ನಿರ್ದೇಶಕ ಹರ್ಷ ಬಿಟ್ಟು ಕೊಟ್ಟಿಲ್ಲ. ಸೋ, ಇಷ್ಟು ದಿನದ ಪ್ರೇಕ್ಷಕರ ಕಾಯುವಿಕೆಗೆ ಹಾಡುಗಳಿಂದ ಬ್ರೇಕ್ ಬೀಳಲಿದೆ.

ಅಂದಹಾಗೆ, ಪುನೀತ್ ರಾಜ್ ಕುಮಾರ್ ಜೊತೆ ಇಲ್ಲಿ ಕಿರಿಕ್ ಹುಡುಗಿ ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ. ರವಿಬಸೂರ್ ಸಿನಿಮಾಗೆ ಸಂಗೀತ ನೀಡಿದ್ದಾರೆ. 'ರಾಜಕುಮಾರ' ಬಳಿಕ ಅಪ್ಪು 'ಅಂಜನೀಪುತ್ರ' ಸಿನಿಮಾ ಮಾಡಿದ್ದು, ಸಿನಿಮಾದ ಮೇಲೆ ದೊಡ್ಡ ನಿರೀಕ್ಷೆ ಇದೆ.
English summary
Puneeth Rajkumar's 'Anjaniputra' movie audio will be releasing on November 27. ಅಂಜನೀಪುತ್ರ ಸಿನಿಮಾದ ಆಡಿಯೋ ನವೆಂಬರ್ 27ಕ್ಕೆ ಬಿಡುಗಡೆ ಆಗಲಿದೆ.


Click it and Unblock the Notifications