»   » ಉತ್ತರ ಕರ್ನಾಟಕದ ಜೋಡಿಯಾಗಿ ಪುನೀತ್, ರಶ್ಮಿಕಾ ಮಂದಣ್ಣ ಮಿಂಚಿಂಗ್

ಉತ್ತರ ಕರ್ನಾಟಕದ ಜೋಡಿಯಾಗಿ ಪುನೀತ್, ರಶ್ಮಿಕಾ ಮಂದಣ್ಣ ಮಿಂಚಿಂಗ್

Posted By:
Subscribe to Filmibeat Kannada
Rashmika Mandanna

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ 'ಅಂಜನಿಪುತ್ರ' ಸಿನಿಮಾದ ಮತ್ತೊಂದು ಪೋಸ್ಟರ್ ಬಿಡುಗಡೆಯಾಗಿದೆ. ಈ ಪೋಸ್ಟರ್ ನಲ್ಲಿ ಪಕ್ಕಾ ಉತ್ತರ ಕರ್ನಾಟಕದ ಜೋಡಿಯಾಗಿ ಪುನೀತ್ ರಾಜ್ ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ಕಾಣಿಸಿಕೊಂಡಿದ್ದಾರೆ.

ಪುನೀತ್ ಚಿತ್ರದಲ್ಲಿ ಚಂದ್ರಕಾಂತಾ ಖ್ಯಾತಿಯ 'ಕ್ರೂರ್ ಸಿಂಗ್'!

ಚಿತ್ರದ ಈ ಪೋಸ್ಟರ್ ನೋಡಿದರೆ ಇದು ಹಾಡಿನ ಭಾಗದ ಫೋಟೋ ಇರಬೇಕು ಎನಿಸುತ್ತದೆ. ಉತ್ತರ ಕರ್ನಾಟಕದ ಪೇಟ ತೊಟ್ಟು ಪುನೀತ್ ಹಾಗೂ ಸೀರೆ ಉಟ್ಟು ರಶ್ಮಿಕಾ ಪೋಸ್ ನೀಡಿದ್ದಾರೆ. ಹಿಂದಿನ ಸಿನಿಮಾದಲ್ಲಿ ಕಾಲೇಜ್ ಹುಡುಗಿಯಾಗಿದ್ದ ರಶ್ಮಿಕಾ ಇಲ್ಲಿ ಉತ್ತರ ಕರ್ನಾಟಕದ ಹೆಣ್ಣು ಮಗಳಾಗಿ ಕಾಣಿಸಿಕೊಂಡಿದ್ದಾರೆ.

'Anjaniputra' Movie new poster is out.

ಪೋಸ್ಟರ್ ನಲ್ಲಿ ಈ ಜೋಡಿ ಸಖತ್ ಕ್ಯೂಟ್ ಆಗಿದ್ದು, ಇದೇ ರೀತಿ ಸಿನಿಮಾದಲ್ಲಿ ಪುನೀತ್, ರಶ್ಮಿಕಾ ವಿಭಿನ್ನ ಗೆಟಪ್ ಗಳಲ್ಲಿ ಕಾಣಿಸಿಕೊಂಡಿದ್ದಾರಂತೆ. ಅಂದಹಾಗೆ, 'ಅಂಜನಿಪುತ್ರ' ಎ.ಹರ್ಷ ನಿರ್ದೇಶನ ಚಿತ್ರವಾಗಿದ್ದು, ಈ ವರ್ಷದ ಕೊನೆಯಲ್ಲಿ ಚಿತ್ರ ಬಿಡುಗಡೆಯಾಗುವ ಸಾಧ್ಯತೆ ಇದೆ.

English summary
Actor Puneth Rajkumar's 'Anjaniputra' movie new poster is out. The movie is directed by A.Harsha. 'ಅಂಜನಿಪುತ್ರ' ಸಿನಿಮಾದ ಮತ್ತೊಂದು ಪೋಸ್ಟರ್ ಬಿಡುಗಡೆಯಾಗಿದೆ.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X