ಆನ್ ಲೈನ್ ಬುಕ್ಕಿಂಗ್ ನಲ್ಲಿ 'ಅಂಜನಿಪುತ್ರ'ನ ಹವಾ ಶುರು
ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ಅಂಜನಿಪುತ್ರ' ಸಿನಿಮಾ ಇದೇ ವಾರ ರಾಜ್ಯಾದ್ಯಂತ ಅದ್ಧೂರಿಯಾಗಿ ತೆರೆಕಾಣಲಿದೆ. ರಾಜ್ಯದ ಬಹುತೇಕ ಥಿಯೇಟರ್ ಗಳಲ್ಲಿ ಮಧ್ಯರಾತ್ರಿಯೇ ಶೋ ಆರಂಭವಾಗಲಿದ್ದು, ಅಪ್ಪು ಫ್ಯಾನ್ಸ್ ಸಿನಿಮಾ ನೋಡಲು ಕಾದು ಕುಂತಿದ್ದಾರೆ.
ಇನ್ನು ಮಲ್ಟಿಫ್ಲೆಕ್ಸ್ ಗಳಲ್ಲಿ ಬೆಳ್ಳಂಬೆಳಿಗ್ಗೆಯೇ ಅಂಜನಿಪುತ್ರನ ಶೋ ಆರಂಭವಾಗಲಿದ್ದು, ಈಗಾಗಲೇ ಬುಕ್ಕಿಂಗ್ ಕೂಡ ಒಪನ್ ಆಗಿದೆ. ಇನ್ನು ದಿನಕ್ಕೆ ನಾಲ್ಕು ಶೋ ಪ್ರದರ್ಶನ ಮಾಡುವ ಸಿಂಗಲ್ ಸ್ಕ್ರೀನ್ ಚಿತ್ರಮಂದಿರಗಳು ಅಂಜನಿಪುತ್ರ ಚಿತ್ರಕ್ಕಾಗಿ ಐದು, ಆರು ಶೋ ನಡೆಸುತ್ತಿದೆ.

ಇನ್ನು ಹಿಂದಿಯಲ್ಲಿ ಸಲ್ಮಾನ್ ಖಾನ್ ಅಭಿನಯದ ಟೈಗರ್ ಜಿಂದಾ ಹೈ ಚಿತ್ರವೂ ಕೂಡ ಇದೇ ವಾರ ತೆರೆಕಾಣುತ್ತಿದ್ದು, ಮಲ್ಟಿಫ್ಲೆಕ್ಸ್ ಗಳಲ್ಲಿ ಸಲ್ಲು ಚಿತ್ರದ ಹವಾ ಕೂಡ ಜೋರಾಗಿದೆ. ಬೆಂಗಳೂರಿನ ಮಲ್ಟಿಫ್ಲೆಕ್ಸ್ ಗಳಲ್ಲೂ ಹಿಂದಿ ಚಿತ್ರದ ದರ್ಬಾರ್ ಹೆಚ್ಚಾಗಿದೆ. ಇದರ ಮಧ್ಯೆಯೂ ಪವರ್ ಸ್ಟಾರ್ ಸಿನಿಮಾ ಅಬ್ಬರಿಸುತ್ತಿದೆ.
ಅಂದ್ಹಾಗೆ, ಹರ್ಷ ಈ ಚಿತ್ರವನ್ನ ನಿರ್ದೇಶನ ಮಾಡಿದ್ದು, ಪುನೀತ್ ಗೆ ಕಿರಿಕ್ ಪಾರ್ಟಿ ರಶ್ಮಿಕಾ ಮಂದಣ್ಣ ಜೋಡಿಯಾಗಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ರಮ್ಯಾಕೃಷ್ಣ, ಚಿಕ್ಕಣ್ಣ, ಮುಖೇಶ್ ತಿವಾರಿ ಪ್ರಮುಖ ಪಾತ್ರಗಳಲ್ಲಿ ಬಣ್ಣ ಹಚ್ಚಿದ್ದಾರೆ.


Click it and Unblock the Notifications











