'ಅಂಜನಿಪುತ್ರ' ಹಾಡಿನಲ್ಲಿ ಅಪ್ಪು ಸ್ಪೆಷಲ್ ಗೆಟಪ್ ಹೇಗಿದೆ ನೋಡಿ
ಪುನೀತ್ ರಾಜ್ ಕುಮಾರ್ ನಟನೆಯ 'ಅಂಜನಿಪುತ್ರ' ಸಿನಿಮಾದ ಚಿತ್ರೀಕರಣ ಜೋರಾಗಿ ನಡೆಯುತ್ತಿದೆ. ಸದ್ಯ, ಹಾಡಿನ ಶೂಟಿಂಗ್ ನಲ್ಲಿ ಚಿತ್ರತಂಡ ಬ್ಯುಸಿಯಾಗಿದ್ದು, ಪವರ್ ಸ್ಟಾರ್ ಲುಕ್ ಹೆಚ್ಚು ಗಮನ ಸೆಳೆಯುತ್ತಿದೆ.
ಈ ಹಾಡಿನಲ್ಲಿ ಪುನೀತ್ ರಾಜ್ ಕುಮಾರ್ ಮತ್ತು ರಶ್ಮಿಕಾ ಮಂದಣ್ಣ ವಿಭಿನ್ನ ಗೆಟಪ್ ನಲ್ಲಿ ಹೆಜ್ಜೆ ಹಾಕಲಿದ್ದಾರೆ. ಇಬ್ಬರು ಕೂಡ ಮುದ್ದಾಗಿ ಕಾಣಿಸುತ್ತಿದ್ದಾರೆ. ಪುನೀತ್ ಅವರ ಈ ಲುಕ್ 'ರಣವಿಕ್ರಮ' ಚಿತ್ರದ ಒಂದು ಹಾಡನ್ನು ನೆನಪು ಮಾಡುತ್ತದೆ.

ಈ ಹಾಡು ರಿಲೀಸ್ ಆದ ಮೇಲೆ ನೋಡುಗರಿಗೆ ಕಿಕ್ ನೀಡುವುದು ಖಾಯಂ ಎನಿಸುತ್ತದೆ. ಕಾರಣ ಹಾಡಿನ ಚಿತ್ರೀಕರಣ ಮಾಡುತ್ತಿರುವ ರೀತಿ ಹಾಗೂ ಕಾಸ್ಟ್ಯೂಮ್ ತುಂಬ ಕಾಮಿಕ್ ಆಗಿದೆ. ವಿಶೇಷ ಅಂದ್ರೆ, ಚಿಕ್ಕ ಮಕ್ಕಳು ಕೂಡ ಈ ಹಾಡಿನಲ್ಲಿ ಅಪ್ಪು ಜೊತೆ ಹೆಜ್ಜೆ ಹಾಕಿದ್ದಾರೆ.

'ಅಂಜನಿಪುತ್ರ' ಎ.ಹರ್ಷ ನಿರ್ದೇಶನ ಚಿತ್ರವಾಗಿದ್ದು, ಈ ವರ್ಷದ ಕೊನೆಯಲ್ಲಿ ಚಿತ್ರ ಿಡುಗಡೆಯಾಗುವ ಸಾಧ್ಯತೆ ಇದೆ.
English summary
Kannada actor Puneth Rajkumar's 'Anjaniputra' movie song making photos out. the movie is directed by A.Harsha.


Click it and Unblock the Notifications