»   » ಹಬ್ಬದ ದಿನ ಖುಷಿ ಹೆಚ್ಚಿಸಿದ ಪುನೀತ್ - ಮನೋರಂಜನ್

ಹಬ್ಬದ ದಿನ ಖುಷಿ ಹೆಚ್ಚಿಸಿದ ಪುನೀತ್ - ಮನೋರಂಜನ್

Posted By:
Subscribe to Filmibeat Kannada
ಹಬ್ಬದ ದಿನ ಖುಷಿ ಹೆಚ್ಚಿಸಿದ ಅಂಜನಿಪುತ್ರ ಹಾಗು ಬೃಹಸ್ಪತಿ | Filmibeat Kannada

ಸಂಕ್ರಾಂತಿ ಹಬ್ಬದ ಆಚರಣೆ ಇರುವ ಅಭಿಮಾನಿಗಳಿಗೆ ನಟರಾದ ಪುನೀತ್ ರಾಜ್ ಕುಮಾರ್ ಮತ್ತು ಮನೋರಂಜ್ ಗಿಫ್ಟ್ ನೀಡಿದ್ದಾರೆ. ಪುನೀತ್ ರಾಜ್ ಕುಮಾರ್ ಅವರ 'ಅಂಜನಿಪುತ್ರ' ಮತ್ತು ಮನೋರಂಜನ್ ಅವರ 'ಬೃಹಸ್ಪತಿ' ಚಿತ್ರಗಳ ಕಡೆಯಿಂದ ಅಭಿಮಾನಿಗಳ ಹಬ್ಬದ ಖುಷಿ ಮತ್ತಷ್ಟು ಜಾಸ್ತಿ ಆಗಿದೆ.

ಇನ್ಮುಂದೆ 'ಅಂಜನಿಪುತ್ರ' ನೋಡೋರಿಗೆ Extra ಪವರ್ ಸಿಗಲಿದೆ

'ಅಂಜನಿಪುತ್ರ' ಸಿನಿಮಾ ರಿಲೀಸ್ ಆಗಿ 25 ದಿನಗಳನ್ನು ಪೂರೈಸಿದೆ. ಈ ವಿಶೇಷವಾಗಿ ಚಿತ್ರತಂಡ ಟ್ರೇಲರ್ ರಿಲೀಸ್ ಮಾಡಿದೆ. ಸಿನಿಮಾ ರಿಲೀಸ್ ಆಗುವುದಕ್ಕೆ ಮುಂಚೆ ಟ್ರೇಲರ್ ಬಿಡುವುದು ಸಾಮಾನ್ಯ ಸಂಗತಿ. ಆದರೆ ಸಿನಿಮಾ ಬಂದ ಮೇಲೆ 'ಅಂಜನಿಪುತ್ರ' ಮತ್ತೊಂದು ಟ್ರೇಲರ್ ಬಂದಿದೆ. ಅಷ್ಟೆ ಅಲ್ಲದೆ ಇಂದಿನಿಂದ ಚಿತ್ರಮಂದಿರದಲ್ಲಿ ಸಿನಿಮಾ ನೋಡುವ ಪ್ರೇಕ್ಷಕರು ಪುನೀತ್ ಅವರ ಹೆಚ್ಚು ಆಕ್ಷನ್ ದೃಶ್ಯಗಳನ್ನು ಕಣ್ಣು ತುಂಬಿಕೊಳ್ಳಬಹುದಾಗಿದೆ. 'ಅಂಜನಿಪುತ್ರ' ಸಿನಿಮಾ ನೋಡೋರಿಗೆ ಮತ್ತಷ್ಟು ಕಿಕ್ ನೀಡಲು ಹೊಸ ದೃಶ್ಯ ಸೇರಿಸಲಾಗಿದೆ.

'Anjaniputra' trailer and Bruhaspati Movie video songreleased

ನಟ ಮನೋರಂಜನ್ ಅಭಿನಯದ 'ಬೃಹಸ್ಪತಿ' ಸಿನಿಮಾ ಕೂಡ ರಿಲೀಸ್ ಆಗಿ ಯಶಸ್ವಿಯಾಗಿ ಮುನ್ನುಗುತ್ತಿದೆ. ಈ ವೇಳೆ ಸಿನಿಮಾ ಒಂದು ವಿಶೇಷ ಹಾಡಿನ ವಿಡಿಯೋವನ್ನು ಹಬ್ಬದ ದಿನ ಚಿತ್ರತಂಡ ರಿಲೀಸ್ ಮಾಡಿದೆ. ಚಿತ್ರದಲ್ಲಿ ಯೋಗರಾಜ್ ಭಟ್ ಬರೆದ 'ನೋಡ್ರಪ್ಪ ನಮೋನು ಆಗ್ಬಿಟ್ಟ ರವಿಚಂದ್ರನು..' ಎಂಬ ಹಾಡಿನ ವಿಡಿಯೋವನ್ನು ಯೂಟ್ಯೂಬ್ ನಲ್ಲಿ ಬಿಡುಗಡೆ ಮಾಡಲಾಗಿದೆ. 'ಬೃಹಸ್ಪತಿ' ಮನೋರಂಜನ್ ಅಭಿನಯದ ಎರಡನೇ ಸಿನಿಮಾವಾಗಿದ್ದು, ಚಿತ್ರವನ್ನು ನಂದಕಿಶೋರ್ ನಿರ್ದೇಶನ ಮಾಡಿದ್ದರು.

English summary
Actor Puneeth Rajkumar's Kannada movie 'Anjaniputra' trailer and Manoranjan Ravichandran's 'Bruhaspati' Movie video song released Today.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X