»   » ಹಾಡುಗಳ ಜೊತೆಗೆ ನಾಳೆ ಅಪ್ಪು ಫ್ಯಾನ್ಸ್ ಗೆ ಕಾದಿದೆ ಮತ್ತೊಂದು ಸರ್ಪ್ರೈಸ್.!

ಹಾಡುಗಳ ಜೊತೆಗೆ ನಾಳೆ ಅಪ್ಪು ಫ್ಯಾನ್ಸ್ ಗೆ ಕಾದಿದೆ ಮತ್ತೊಂದು ಸರ್ಪ್ರೈಸ್.!

Posted By:
Subscribe to Filmibeat Kannada

ನಾಳೆ (ನವೆಂಬರ್ 24)ಕ್ಕೆ ಪುನೀತ್ ರಾಜ್ ಕುಮಾರ್ ಅವರ 'ಅಂಜನೀಪುತ್ರ' ಸಿನಿಮಾದ ಹಾಡುಗಳು ಹೊರಬರಲಿದೆ. ಜೊತೆಗೆ ಪುನೀತ್ ಅವರ ಹೊಸ ಆಡಿಯೋ ಕಂಪನಿ 'PRK Audio' ಮೂಲಕವೇ ಈ ಹಾಡುಗಳು ರಿಲೀಸ್ ಆಗುತ್ತಿದೆ.

'ಅಂಜನೀಪುತ್ರ' ಪುನೀತ್ ಕೆರಿಯರ್ ನ ಮೈಲಿಗಲ್ಲು ಸಿನಿಮಾ, ಕಾರಣ ಏನು..?

ಆದರೆ ಹಾಡುಗಳ ನಿರೀಕ್ಷೆಯಲ್ಲಿದ್ದ ಅಪ್ಪು ಅಭಿಮಾನಿಗಳಿಗೆ ಈಗ ಚಿತ್ರತಂಡ ಮತ್ತೊಂದು ಸರ್ಪ್ರೈಸ್ ನೀಡಲಿದೆ. ಹಾಡುಗಳ ಜೊತೆಗೆ 'ಅಂಜನೀಪುತ್ರ' ಸಿನಿಮಾದ ಟ್ರೇಲರ್ ಕೂಡ ನಾಳೆ ಬಿಡುಗಡೆಯಾಗಲಿದೆ. ಆಡಿಯೋದೊಂದಿಗೆ ಟ್ರೇಲರ್ ಕೂಡ ಬರುತ್ತಿದ್ದು ಪುನೀತ್ ಅಭಿಮಾನಿಗಳಿಗೆ ಇದು ಡಬಲ್ ಧಮಾಕ ಆಗಿದೆ.

'Anjaniputra' trailer and songs will be releasing Tomorrow.

ಅಂದಹಾಗೆ, 'ಅಂಜನೀಪುತ್ರ' ಸಿನಿಮಾದ ಆಡಿಯೋ ಅದ್ದೂರಿ ಕಾರ್ಯಕ್ರಮದ ಮೂಲಕ ರಿಲೀಸ್ ಆಗುತ್ತಿದೆ. ಬೆಂಗಳೂರಿನ ಜ್ಞಾನಜ್ಯೋತಿ ಸಭಾಂಗಣದಲ್ಲಿ ನಾಳೆ ಸಂಜೆ 7 ಗಂಟೆಗೆ ಕಾರ್ಯಕ್ರಮ ನಡೆಯಲಿದೆ. ಇನ್ನು ಇದೇ ಕಾರ್ಯಕ್ರಮವನ್ನು ಪುನೀತ್ ಅವರ 'PRK Audio' ಫೇಸ್ ಬುಕ್ ಪೇಜ್ ಮತ್ತು ಯೂ ಟ್ಯೂಬ್ ಚಾನಲ್ ನಲ್ಲಿ ಲೈವ್ ಆಗಿ ನೋಡಬಹುದಾಗಿದೆ.

English summary
Puneeth Rajkumar's 'Anjaniputra' trailer and song will be releasing Tomorrow (25 November) 'ಅಂಜನೀಪುತ್ರ' ಸಿನಿಮಾದ ಟ್ರೇಲರ್ ಮತ್ತು ಹಾಡುಗಳು ನಾಳೆ ರಿಲೀಸ್ ಆಗುತ್ತಿದೆ (25 ನವೆಂಬರ್).

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada