ಲೈಂಗಿಕ ಕಿರುಕುಳ ನೀಡಿದವನ ಮನ್ನಿಸಿದ 'ಕುಂಬಳಂಗಿ ನೈಟ್ಸ್' ನಟಿ
'ಕುಂಬಳಂಗಿ ನೈಟ್ಸ್', 'ಹೆಲೆನ್', 'ಕಪ್ಪೆಲ' ರೀತಿಯ ಸೂಪರ್ ಹಿಟ್ ಸಿನಿಮಾಗಳಲ್ಲಿ ನಟಿಸಿರುವ ನಟಿ ಅನ್ನಾ ಬೆನ್ ಇತ್ತೀಚೆಗೆ ಮಾಲ್ ಒಂದರಲ್ಲಿ ಲೈಂಗಿಕ ಕಿರುಕುಳ ಎದುರಿಸಿದ್ದರು.
ಲುಲು ಮಾಲ್‌ಗೆ ಕುಟುಂಬದೊಂದಿಗೆ ಶಾಪಿಂಗ್‌ಗೆ ತೆರಳಿದ್ದಾಗ ವ್ಯಕ್ತಿಯೊಬ್ಬ ಅನ್ನಾ ಬೆನ್ ಬಳಿ ಅನುಚಿವಾಗಿ ವರ್ತಿಸಿ, ಕೆಟ್ಟದಾಗಿ ದೇಹವನ್ನು ಸ್ಪರ್ಷಿಸಿದ್ದ ಈ ಬಗ್ಗೆ ಅನ್ನಾ ಬೆನ್ ಇನ್‌ಸ್ಟಾಗ್ರಾಂ ನಲ್ಲಿ ಬರೆದುಕೊಂಡಿದ್ದರು.
ಆದರೆ ಈಗ ಆ ವ್ಯಕ್ತಿ ಕ್ಷಮೆ ಕೇಳಿದ್ದಾನೆ ಎಂದಿರುವ ನಟಿ ಅನ್ನಾ ಬೆನ್, ಆತನನ್ನು ಕ್ಷಮಿಸಿದ್ದೇನೆ. ಕ್ಷಮೆ ಕೇಳಿದ ಆತನ ಧೈರ್ಯವನ್ನು ಮೆಚ್ಚಿದ್ದೇನೆ ಎಂದಿದ್ದಾರೆ, ಜೊತೆಗೆ ಪೊಲೀಸರಿಗೆ ಹಾಗೂ ಮಾಧ್ಯಮಗಳಿಗೆ ಧನ್ಯವಾದ ಹೇಳಿದ್ದಾರೆ.

ಘಟನೆ ಕುರಿತು ಅನ್ನಾ ಬೆನ್ ಪೊಲೀಸ್ ದೂರನ್ನು ನೀಡಿರಲಿಲ್ಲ, ಆದರೆ ಲುಲು ಹೈಪರ್ ಮಾಲ್‌ನ ವ್ಯವಸ್ಥಾಪಕ ಮಂಡಳಿಯು ದೂರು, ನೀಡಿದ್ದಲ್ಲದೆ, ಸಿಸಿಟಿವಿ ವಿಡಿಯೋ ಗಳ ಮೂಲಕ ಆತನನ್ನು ಸೆರೆ ಹಿಡಿಯಲು ಸಹಾಯ ಮಾಡಿತ್ತು.
Recommended Video
ಬೇಸರದ ಸಮಯದಲ್ಲಿ ಜೊತೆಗಿದ್ದ, ಸಹಾನುಭೂತಿ ವ್ಯಕ್ತಪಡಿಸಿದ, ಗೆಳೆಯರು, ಕುಟುಂಬದವರು, ನೆಟ್ಟಿಗರಿಗೆ ಅನ್ನಾ ಬೆನ್ ಧನ್ಯವಾದ ತಿಳಿಸಿದ್ದಾರೆ. ಮಹಿಳೆಯರು ಹೊರಗಡೆ ಹೋದಾಗ ಜಾಗೃತೆಯಾಗಿರಿ, ಇಂಥಹಾ ಘಟನೆಗಳು ಆದ ಕೂಡಲೇ ಅದಕ್ಕೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ, ಪ್ರತಿಭಟಿಸಿ ಎಂದಿದ್ದಾರೆ ಅನ್ನಾ ಬೆನ್.


Click it and Unblock the Notifications











