For Quick Alerts
  ALLOW NOTIFICATIONS  
  For Daily Alerts

  ಅಣ್ಣಾತ್ತೆ ಫಸ್ಟ್ ಲುಕ್ ಬಂತು: ಶಿವಾಜಿ ಸುರತ್ಕಲ್ 2 ಶುರುವಾಯ್ತು

  |

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ 'ಅಣ್ಣಾತ್ತೆ' ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ಅನಾವರಣವಾಗಿದೆ. ಗೌರಿ-ಗಣೇಶ ಹಬ್ಬದ ಪ್ರಯುಕ್ತ ಅಣ್ಣಾತ್ತೆ ಫಸ್ಟ್ ಲುಕ್ ರಿಲೀಸ್ ಮಾಡುವುದಾಗಿ ಚಿತ್ರತಂಡ ಹೇಳಿತ್ತು. ಪ್ರಕಟಿಸದಂತೆ ಸೆಪ್ಟೆಂಬರ್ 10 ರಂದು ಬೆಳಗ್ಗೆ 11 ಗಂಟಗೆ ಪೋಸ್ಟರ್ ಅನಾವರಣಗೊಂಡಿದೆ.

  ಫಸ್ಟ್ ಲುಕ್ ಪೋಸ್ಟರ್‌ನಲ್ಲಿ ವೈಟ್ ಅಂಡ್ ವೈಟ್ ಪಂಚೆ-ಶರ್ಟ್‌ನಲ್ಲಿ ಕಾಣಿಸಿಕೊಂಡಿರುವ ತಲೈವಾ ಅಬ್ಬರಿಸಿದ್ದಾರೆ. ಇಂದು ಸಂಜೆ ಅಣ್ಣಾತ್ತೆ ಚಿತ್ರದ ಮೋಷನ್ ಪೋಸ್ಟರ್ ಬರಲಿದೆ.

  ಸೆಪ್ಟೆಂಬರ್ 10ರಂದು ಟ್ರೆಂಡ್ ಸೃಷ್ಟಿಸಲಿರುವ ಮೂರು ಪ್ರಮುಖ ಸುದ್ದಿಗಳುಸೆಪ್ಟೆಂಬರ್ 10ರಂದು ಟ್ರೆಂಡ್ ಸೃಷ್ಟಿಸಲಿರುವ ಮೂರು ಪ್ರಮುಖ ಸುದ್ದಿಗಳು

  ಇನ್ನು ಕನ್ನಡ ನಟ ರಮೇಶ್ ಅರವಿಂದ್ ಅವರ ಹುಟ್ಟುಹಬ್ಬದ ಪ್ರಯುಕ್ತ ಹೊಸ ಸಿನಿಮಾ ಅನೌನ್ಸ್ ಆಗಿದೆ. ಕಳೆದ ವರ್ಷ ಬಿಡುಗಡೆಯಾಗಿದ್ದ ಶಿವಾಜಿ ಸುರತ್ಕಲ್ ಸಿನಿಮಾದ ಮುಂದುವರಿದ ಭಾಗ ಅಧಿಕೃತವಾಗಿ ಪ್ರಕಟವಾಗಿದೆ. ಶಿವಾಜಿ ಸುರತ್ಕಲ್ 2 ಫಸ್ಟ್ ಲುಕ್ ಪೋಸ್ಟರ್ ಸಹ ಇಂದು ಬಹಿರಂಗವಾಗಿದೆ.

  ಅಣ್ಣಾತ್ತೆ ಸಿನಿಮಾ ಬಗ್ಗೆ

  ಅಂದ್ಹಾಗೆ, ಈ ಚಿತ್ರವನ್ನು ಸಿರುತೈ ಶಿವ ನಿರ್ದೇಶನ ಮಾಡಿದ್ದು, ಸ್ಟಾರ್ ಕಲಾವಿದರು ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಜೊತೆ ನಯನತಾರ, ಕೀರ್ತಿ ಸುರೇಶ್, ಹಿರಿಯ ನಟ ಮೀನಾ, ಖುಷ್ಬೂ, ಪ್ರಕಾಶ್ ರಾಜ್, ಸೂರಿ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸನ್ ಪಿಕ್ಚರ್ಸ್ ಈ ಸಿನಿಮಾ ನಿರ್ಮಿಸುತ್ತಿದ್ದು, ಡಿ ಇಮ್ಮನ್ ಸಂಗೀತ ಇದೆ. ದೀಪಾವಳಿ ಹಬ್ಬದ ಪ್ರಯುಕ್ತ ನವೆಂಬರ್ 4 ರಂದು ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಅಣ್ಣಾತ್ತೆ ಚಿತ್ರಮಂದಿರಕ್ಕೆ ಬರಲಿದೆ.

  'ಶಿವಾಜಿ ಸೂರತ್ಕಲ್' ಸೀಕ್ವೆಲ್‌ಗೆ ಸಜ್ಜಾದ ರಮೇಶ್ ಅರವಿಂದ್'ಶಿವಾಜಿ ಸೂರತ್ಕಲ್' ಸೀಕ್ವೆಲ್‌ಗೆ ಸಜ್ಜಾದ ರಮೇಶ್ ಅರವಿಂದ್

  ಶಿವಾಜಿ ಸುರತ್ಕಲ್ ಸಿನಿಮಾ ಬಗ್ಗೆ

  2020ರ ಫೆಬ್ರವರಿ ತಿಂಗಳಲ್ಲಿ ಶಿವಾಜಿ ಸೂರತ್ಕಲ್ ತೆರೆಕಂಡಿದ್ದು, ಆಕಾಶ್ ಶ್ರೀವಾಸ್ತವ್ ಅವರು ಈ ಚಿತ್ರ ನಿರ್ದೇಶಿಸಿದ್ದರು. ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಕೊರೊನಾ ವೈರಸ್ ಭೀತಿ ಎದುರಿಸಿದ ಆ ವರ್ಷದಲ್ಲಿ ಹೆಚ್ಚು ಗಳಿಕೆ ಕಂಡ ಸಿನಿಮಾ ಎಂಬ ಹೆಗ್ಗಳಿಕೆಗೂ ಪಾತ್ರವಾಗಿತ್ತು.

  Annaatthe First Look and Shivaji Surathkal 2 First Look Released

  ಅನೂಪ್ ಗೌಡ ಹಾಗೂ ರೇಖ ನಿರ್ಮಾಣ ಮಾಡಿದ್ದ ಈ ಚಿತ್ರದಲ್ಲಿ ರಮೇಶ್ ಅರವಿಂದ್ ಜೊತೆ ರಾಧಿಕಾ ನಾರಾಯಣ್, ಆರೋಹಿ ನಾರಾಯಣ್, ಅವಿನಾಶ್, ರಾಘು ರಾಮಣ್ಣಕೊಪ್ಪ, ರಮೇಶ್ ಪಂಡಿತ್ ಸೇರಿದಂತೆ ಹಲವರು ನಟಿಸಿದ್ದರು. ಈಗ ಮುಂದುವರಿದ ಭಾಗದಲ್ಲೂ ರಮೇಶ್, ರಾಧಿಕಾ ನಾರಾಯಣ್, ವಿದ್ಯಾಮೂರ್ತಿ ಕಾಣಿಸಿಕೊಳ್ಳಲಿದ್ದಾರೆ. ಇನ್ನುಳಿದಂತೆ ಇವರು ಜೊತೆ ಹೊಸ ಹೊಸ ಕಲಾವಿದರು ಸೇರ್ಪಡೆಯಾಗಲಿದ್ದಾರೆ.

  ಆಕಾಶ್ ಶ್ರೀವಾಸ್ತವ್ ಜೊತೆ ಅಭಿಜಿತ್ ಸೇರಿ ಚಿತ್ರಕಥೆ ರಚಿಸಿದ್ದರು. ಜುಡಾ ಸ್ಯಾಂಡಿ ಸಂಗೀತ ನೀಡಿದ್ದರು. ಗುರುಪ್ರಸಾದ್ ಎಂ ಅವರ ಛಾಯಾಗ್ರಹಣ ಒಳಗೊಂಡಿತ್ತು. ಈ ಚಿತ್ರವನ್ನು ಕೆಆಆರ್‌ಜಿ ಸ್ಟುಡಿಯೋಸ್ ನಿರ್ಮಾಣ ಮಾಡಿತ್ತು.

  English summary
  Superstar Rajinikanth starrer Annaatthe First Look and Ramesh aravind starrer Shivaji Surathkal 2 First Look Released.
  Friday, September 10, 2021, 13:58
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X