For Quick Alerts
  ALLOW NOTIFICATIONS  
  For Daily Alerts

  ಸೆಪ್ಟೆಂಬರ್ 10ರಂದು ಟ್ರೆಂಡ್ ಸೃಷ್ಟಿಸಲಿರುವ ಮೂರು ಪ್ರಮುಖ ಸುದ್ದಿಗಳು

  |

  ಗೌರಿ-ಗಣೇಶ ಹಬ್ಬದ ಸಂಭ್ರಮದಲ್ಲಿರುವ ಅಭಿಮಾನಿಗಳಿಗೆ ತಮ್ಮ ನೆಚ್ಚಿನ ಸ್ಟಾರ್ ನಟರು ಹಲವು ಸರ್ಪ್ರೈಸ್ ಕೊಟ್ಟಿದ್ದಾರೆ. ಸಿನಿಮಾ ಪೋಸ್ಟರ್, ಟೀಸರ್, ಸಾಂಗ್ಸ್, ಟೈಟಲ್ ಹೀಗೆ ಹಲವು ಚಿತ್ರಗಳ ಅಪ್‌ಡೇಟ್ ಹೊರಬಿದ್ದಿದೆ. ಸೆಪ್ಟೆಂಬರ್ 10 ರಂದು ಕೆಲವು ಸಿನಿಮಾಗಳಿಂದ ಭರ್ಜರಿ ಉಡುಗೊರೆಗಳು ಕಾದಿವೆ. ಈ ಪೈಕಿ ನಾಳೆ ಇಡೀ ಸೋಶಿಯಲ್ ಮಿಡಿಯಾದಲ್ಲಿ ಈ ಮೂರು ಚಿತ್ರಗಳ ಅಬ್ಬರ ಸ್ವಲ್ಪ ಜೋರಾಗಿರಲಿದೆ.

  ತಲೈವಿ ಬಿಡುಗಡೆ

  ಕಂಗನಾ ರಣಾವತ್ ನಟನೆಯ 'ತಲೈವಿ' ಸಿನಿಮಾ ಸೆಪ್ಟೆಂಬರ್ 10ರಂದು ಅಧಿಕೃತವಾಗಿ ಬಿಡುಗಡೆಯಾಗುತ್ತಿದೆ. ತಮಿಳು, ತೆಲುಗು ಹಾಗೂ ಹಿಂದಿ ಭಾಷೆಯಲ್ಲಿ ತಲೈವಿ ರಿಲೀಸ್ ಆಗುತ್ತಿದ್ದು ಈಗಾಗಲೇ ನಿರೀಕ್ಷೆ ಹೆಚ್ಚು ಮಾಡಿದೆ. ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಅವರ ಬಯೋಪಿಕ್ ಸಿನಿಮಾ ಇದಾಗಿದ್ದು, ಚಿತ್ರದ ಬಗ್ಗೆ ಒಳ್ಳೆಯ ಟಾಕ್ ಇದೆ. ಆದರೆ, ಸಿನಿಮಾ ಹೇಗೆ ಮೂಡಿ ಬಂದಿದೆ ಎನ್ನುವುದು ನಾಳೆ ಹೊರಬೀಳಲಿದೆ.

  Thalaivii First Review: ಒಂದೇ ಪದದಲ್ಲಿ ಹೇಳುವುದಾದರೆ 'ಪವರ್‌ಫುಲ್'Thalaivii First Review: ಒಂದೇ ಪದದಲ್ಲಿ ಹೇಳುವುದಾದರೆ 'ಪವರ್‌ಫುಲ್'

  ಸೆಪ್ಟೆಂಬರ್ 10 ರಂದು ತಲೈವಿ ಸಿನಿಮಾದ ವಿಮರ್ಶೆ, ಅಭಿಪ್ರಾಯಗಳು ಗಮನ ಸೆಳೆಯಲಿದೆ. ಪ್ಯಾನ್ ಇಂಡಿಯಾ ಸಿನಿಮಾ ಆಗಿರುವುದರಿಂದ ಆ ಕಡೆ ಬಾಲಿವುಡ್, ಈ ಕಡೆ ಸೌತ್ ಇಂಡಸ್ಟ್ರಿಯಲ್ಲೂ ತಲೈವಿ ಚಿತ್ರಕ್ಕೆ ರೆಸ್‌ಪಾನ್ಸ್ ಹೇಗಿರಲಿದೆ ಎಂಬ ಕುತೂಹಲ ಕಾಡಿದೆ.

  ಎಎಲ್ ವಿಜಯ್ ನಿರ್ದೇಶಿಸಿರುವ ಈ ಚಿತ್ರವನ್ನು ವಿಷ್ಣುವರ್ಧನ ಇಂದುರಿ, ಹಿತೇಶ್ ಟಕ್ಕರ್, ತಿರುಮಲ ರೆಡ್ಡಿ ಜಂಟಿಯಾಗಿ ಈ ಚಿತ್ರ ನಿರ್ಮಿಸಿದ್ದು, ಜೀ ಸ್ಟುಡಿಯೋಸ್ ವಿತರಣೆಗೆ ಕೈ ಜೋಡಿಸಿದೆ. ಜಯಲಲಿತಾ ಪಾತ್ರದಲ್ಲಿ ಕಂಗನಾ ರಣಾವತ್ ನಟಿಸಿದ್ದು, ಎಂಜಿಆರ್ ಪಾತ್ರದಲ್ಲಿ ಖ್ಯಾತ ನಟ ಅರವಿಂದ್ ಸ್ವಾಮಿ ಅಭಿನಯಿಸಿದ್ದಾರೆ. ವಿಜಯೇಂದ್ರ ಪ್ರಸಾದ್ ಕಥೆ ಮಾಡಿದ್ದಾರೆ.

  ಅಣ್ಣಾತ್ತೆ ಫಸ್ಟ್ ಲುಕ್

  ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಅಣ್ಣಾತ್ತೆ ಸಿನಿಮಾ ಫಸ್ಟ್ ಲುಕ್ ಪೋಸ್ಟರ್ ಹಾಗೂ ಮೋಷನ್ ಪೋಸ್ಟರ್ ಸೆಪ್ಟೆಂಬರ್ 10 ರಂದು ಅನಾವರಣವಾಗಲಿದೆ. ಈ ಹಿನ್ನಲೆ ಒಂದು ದಿನ ಮುಂಚಿತವಾಗಿ ರಜನಿಕಾಂತ್ ಹಾಗೂ ಅಣ್ಣಾತ್ತೆ ಟ್ರೆಂಡಿಂಗ್‌ನಲ್ಲಿದೆ. ನಾಳೆ ಪೂರ್ತಿ ಅಣ್ಣಾತ್ತೆ ಚಿತ್ರವೂ ಸುದ್ದಿಯಲ್ಲಿರುತ್ತದೆ. ಸೆಪ್ಟೆಂಬರ್ 10 ರಂದು ಬೆಳಗ್ಗೆ 11 ಗಂಟೆಗೆ ಅಣ್ಣಾತ್ತೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹಾಗೂ ಅದೇ ದಿನ ಸಂಜೆ 6 ಗಂಟೆಗೆ 'ಅಣ್ಣಾತ್ತೆ' ಚಿತ್ರದ ಮೋಷನ್ ಪೋಸ್ಟರ್ ಅನಾವರಣ ಆಗಲಿದೆ.

  Annaatthe First Look, Darshans 55th Movie Title and Thalaivi Release on Sept 10

  ಸಿರುತೈ ಶಿವ ಈ ಚಿತ್ರ ನಿರ್ದೇಶನ ಮಾಡಿದ್ದು, ಸ್ಟಾರ್ ಕಲಾವಿದರು ಕಾಣಿಸಿಕೊಂಡಿದ್ದಾರೆ. ರಜನಿಕಾಂತ್ ಜೊತೆ ನಯನತಾರ, ಕೀರ್ತಿ ಸುರೇಶ್, ಹಿರಿಯ ನಟ ಮೀನಾ, ಖುಷ್ಬೂ, ಪ್ರಕಾಶ್ ರಾಜ್, ಸೂರಿ ಸೇರಿದಂತೆ ಹಲವರು ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಸನ್ ಪಿಕ್ಚರ್ಸ್ ಈ ಸಿನಿಮಾ ನಿರ್ಮಿಸುತ್ತಿದ್ದು, ಡಿ ಇಮ್ಮನ್ ಸಂಗೀತ ಇದೆ.

  ಗಣೇಶ ಹಬ್ಬದ ವಿಶೇಷ ರಜನಿಕಾಂತ್ ಅಭಿಮಾನಿಗಳಿಗೆ ಡಬಲ್ ಧಮಾಕ ಗಣೇಶ ಹಬ್ಬದ ವಿಶೇಷ ರಜನಿಕಾಂತ್ ಅಭಿಮಾನಿಗಳಿಗೆ ಡಬಲ್ ಧಮಾಕ

  ಡಿ ಬಾಸ್ 55 ಟೈಟಲ್

  ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ಯಜಮಾನ ನಿರ್ಮಾಪಕಿ ಶೈಲಜಾ ನಾಗ್ ಅವರ ಕಾಂಬಿನೇಷನ್‌ನಲ್ಲಿ ಮೂಡಿಬರಲಿರುವ 55ನೇ ಚಿತ್ರದ ಟೈಟಲ್ ಸೆಪ್ಟೆಂಬರ್ 10 ರಂದು ಬೆಳಗ್ಗೆ 9 ಗಂಟೆಗೆ ಅನಾವರಣವಾಗಲಿದೆ. ಈ ಹಿನ್ನೆಲೆ ಕಳೆದ ಎರಡು ದಿನದಿಂದಲೂ D55 ಟ್ರೆಂಡಿಂಗ್‌ನಲ್ಲಿದೆ. ನಾಳೆಯೂ D55 ಸದ್ದು ಮಾಡುವುದರಲ್ಲಿ ಅನುಮಾನವಿಲ್ಲ.

  'ಯಜಮಾನ' ಚಿತ್ರಕ್ಕೆ ನಿರ್ದೇಶನ ಮಾಡಿದ್ದ ವಿ ಹರಿಕೃಷ್ಣ ಅವರೇ ಈ ಚಿತ್ರಕ್ಕೂ ಆಕ್ಷನ್ ಕಟ್ ಹೇಳಲಿದ್ದು, ಇನ್ನುಳಿದ ಯಾವ ಮಾಹಿತಿಯೂ ಸದ್ಯಕ್ಕಿಲ್ಲ. ಇದು ಶೈಲಜಾ ನಾಗ್ ಅವರ ಮೀಡಿಯಾ ಹೌಸ್ ಸಂಸ್ಥೆಯಲ್ಲಿ ಮೂಡಿ ಬರುತ್ತಿರುವ 10ನೇ ಚಿತ್ರ ಆಗಿರುವುದು ವಿಶೇಷ. ದರ್ಶನ್ ಪ್ರಸ್ತುತ ಎಸ್‌ವಿ ರಾಜೇಂದ್ರ ಸಿಂಗ್ ಬಾಬು ನಿರ್ದೇಶನದಲ್ಲಿ ತಯಾರಾಗುತ್ತಿರುವ 'ರಾಜವೀರ ಮದಕರಿ ನಾಯಕ' ಸಿನಿಮಾದಲ್ಲಿ ನಟಿಸುತ್ತಿದ್ದಾರೆ.

  English summary
  Superstar Rajinikanth starrer Annaatthe movie First Look and D Boss Darshan's 55th Movie Title to be unveiled on Sept 10. and Thalaivi movie also releasing tomorrow.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X