ಶ್ರುತಿ ಬಾಯಿ ಮುಚ್ಚಬೇಕು ಅಂದ್ರೆ 2 ಕೋಟಿ ಕೊಡಬೇಕಂತೆ!
Recommended Video

ನಟಿ ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಅವರ ಮೀ ಟೂ ಪ್ರಕರಣಕ್ಕೆ ಅನೇಕ ತಿರುವುಗಳು ಸಿಗುತ್ತಿದೆ. ಈಗ ಈ ಘಟನೆಗೆ ಸಂಬಂಧಿಸಿದ ಹಾಗೆ ಮತ್ತೊಂದು ಅಚ್ಚರಿಯ ಸುದ್ದಿ ಬಂದಿದೆ.
'ಶ್ರುತಿ ಹರಿಹರನ್ ಬಾಯಿ ಮುಚ್ಚಿಕೊಂಡು ಇರಬೇಕು ಎಂದರೆ 2 ಕೋಟಿ ಹಣ ಕೊಡಬೇಕು' ಎಂದು ಬೇಡಿಕೆ ಇಡಲಾಗಿದೆಯಂತೆ. ಅರ್ಜುನ್ ಸರ್ಜಾ ಅವರ ಮ್ಯಾನೆಜರ್ ಗೆ ಈ ರೀತಿಯ ಕರೆ ಹೋಗಿದೆಯಂತೆ. ದುಡ್ಡು ಕೊಟ್ಟರೆ ಮಾತ್ರ ಈ ಪ್ರಕರಣ ಸುಖಾಂತ್ಯ ಕಾಣಲಿದೆ ಎಂದು ವ್ಯಕ್ತಿಯೊಬ್ಬ ಹೇಳಿದ್ದಾನಂತೆ. ಹೌದು, ಈ ರೀತಿಯ 'ಅಂತೆ' ಕಂತೆ ಸುದ್ದಿ ಈಗ ಹೊರಬಂದಿದೆ.
ಹಾಗಾದರೆ, ಸದ್ಯ ಬಂದಿರುವ ಈ ವಿಷಯ ನಿಜವೇ.?, ಶ್ರುತಿ ಹರಿಹರನ್ ಹಾಗೂ ಅರ್ಜುನ್ ಸರ್ಜಾ ಇಬ್ಬರ ಪ್ರಕರಣ ಮುಂದೆ ಏನಾಗುತ್ತದೆ ಎನ್ನುವ ಕೆಲ ಸಂಗತಿಗಳು ಮುಂದಿದೆ ಓದಿ...

ಅನಾಮಿಕ ವ್ಯಕ್ತಿಯಿಂದ ಕರೆ
ಅರ್ಜುನ್ ಸರ್ಜಾ ಮ್ಯಾನೇಜರ್ ಶಿವಾರ್ಜುನ್ ಅವರಿಗೆ ಅನಾಮಿಕ ವ್ಯಕ್ತಿಯಿಂದ ಕರೆ ಬಂದಿದೆಯಂತೆ. ಫೋನ್ ಮಾಡಿ ಮಾತನಾಡಿದ ಆ ವ್ಯಕ್ತಿ ಮೀ ಟೂ ಪ್ರಕರಣದ ಬಗ್ಗೆ ಶ್ರುತಿ ಹರಿಹರನ್ ಏನು ಮಾಡನಾಡದೆ ಬಾಯಿ ಮುಚ್ಚಿಕೊಂಡು ಇರಬೇಕು ಎಂದರೆ 1.5 ರಿಂದ 2 ಕೋಟಿ ನೀಡಬೇಕು ಎಂದು ಡಿಮ್ಯಾಂಡ್ ಮಾಡಿದನಂತೆ.

'ಅಂತೆ' ಕಂತೆ ಮಾತ್ರ
ಹಣಕ್ಕಾಗಿ ಬೇಡಿಕೆ ಇಟ್ಟಿದ್ದಾರೆ ಎಂಬ ಸುದ್ದಿ ಇದೀಗ ಹೊರ ಬಂದಿದೆ. ಆದರೆ, ಅದು 'ಅಂತೆ' ಕಂತೆ ಸುದ್ದಿ ಮಾತ್ರ. ಆ ವ್ಯಕ್ತಿ ಹಣ ಕೇಳಿರುವ ಬಗ್ಗೆ ಯಾವುದೇ ದಾಖಲೆಗಳನ್ನು ಅರ್ಜುನ್ ಸರ್ಜಾ ಕಡೆಯವರು ನೀಡಿಲ್ಲ. ಸೋ, ಹೀಗಿರುವಾಗ ಇದು, ನಿಜವೋ ಸುಳ್ಳೋ ಎಂದು ನಂಬುವುದು ಕಷ್ಟ.''

ಇಂದು ಸಂಧಾನ ಸಭೆ
ಈ ಪ್ರಕರಣ ಯಾವ ಹಂತಕ್ಕೆ ಹೋಗಲಿದೆ ಎನ್ನುವುದು ಇಂದು ತೀರ್ಮಾನ ಆಗಲಿದೆ. ಇಂದು ನಟ ಅಂಬರೀಶ್ ಅವರ ನೇತೃತ್ವದಲ್ಲಿ ಸಭೆ ನಡೆಯಲಿದೆ. ಇದರಲ್ಲಿ ಅರ್ಜುನ್ ಸರ್ಜಾ ಹಾಗೂ ಶೃತಿ ಹರಿಹರನ್ ಇಬ್ಬರೂ ಭಾಗಿಯಾಗುತ್ತಾರೆ ಎಂದು ಹೇಳಲಾಗುತ್ತಿದೆ.

ಚೆಂಬರ್ ನಲ್ಲಿ ತೀರ್ಮಾನವಾಗಲಿ ಎಂದ ಶಿವಣ್ಣ
ಶ್ರುತಿ - ಸರ್ಜಾ ಗಲಾಟೆಯ ಬಗ್ಗೆ ಮಾತನಾಡಿದ ಶಿವಣ್ಣ ''ಚೆಂಬರ್ ಬಗ್ಗೆ ನಮಗೆ ಗೌರವ ಇದ್ದು, ಅದನ್ನು ಕಾಪಾಡಿಕೊಂಡು ಹೋಗಬೇಕು. ಅಲ್ಲಿಯೇ ಈ ವಿವಾದ ಅಂತ್ಯ ಕಾಣಲಿ. ನಾನು ಯಾರ ಭಾವನೆಗೆ ನೋವುಂಟು ಮಾಡುವುದು ಬೇಡ. ಅವರದ್ದು ಸರಿ, ಇವರದ್ದು ಸರಿ ಎಂದು ಹೇಳುವುದಿಲ್ಲ'' ಎಂದು ಪ್ರತಿಕ್ರಿಯೆ ನೀಡಿದ್ದಾರೆ.


Click it and Unblock the Notifications











