ಅಪಾರ್ಟ್‌ಮೆಂಟ್‌ಗೆ ನುಗ್ಗಿದ ಆರೋಪ: ನಟಿ ಶ್ರೀಲೀಲಾ ತಾಯಿ ವಿರುದ್ಧ ಮತ್ತೊಂದು ದೂರು ದಾಖಲು

ಅನೇಕಲ್‌ನಲ್ಲಿರುವ ಅಲಯನ್ಸ್‌ ಯೂನಿವರ್ಸಿಟಿ ವಿಚಾರದಲ್ಲಿ ಭಾರಿ ವಿವಾದದಲ್ಲಿ ಸಿಲುಕಿದ್ದ ನಟಿ ಶ್ರೀಲೀಲಾ ತಾಯಿ ಹೆಸರು ಇದೀಗ ಮತ್ತೊಂದು ವಿವಾದದಲ್ಲಿ ಸಿಲುಕಿಕೊಂಡಿದೆ. ಡಾಕ್ಟರ್‌ ಆಗಿರುವ ಶ್ರೀಲೀಲಾ ತಾಯಿ ತಮ್ಮ ವೃತ್ತಿಯಲ್ಲಿ ಜನಪ್ರಿಯರಾಗಿದ್ದರು ಆದರೆ ಇತ್ತೀಚಿನ ದಿನಗಳಲ್ಲಿ ಅವರ ವಿರುದ್ಧ ಅನೇಕ ಆರೋಪಗಳು ಕೇಳಿ ಬರುತ್ತಿದೆ.

ಅಪಾರ್ಟ್‌ಮೆಂಟ್‌ ಒಂದಕ್ಕೆ ಅಕ್ರಮವಾಗಿ ನುಗ್ಗಿದ ಆರೋಪದ ಮೇಲೆ ನಟಿ ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ ಅವರ ವಿರುದ್ಧ ಬೆಂಗಳೂರಿನ ಆಡುಗೋಡಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವರದಿಯಾಗಿದೆ. ಈ ಬಾರಿ ಸ್ವರ್ಣ ಲತಾ ಅವರ ವಿರುದ್ಧ ಪತಿ ಶುಭಾಕರ್ ರಾವ್ ಸುಪ್ರಪನೇನಿ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

ಶ್ರೀಲೀಲಾ ಅವರ ತಾಯಿ ಸ್ವರ್ಣಲತಾ ಹಾಗೂ ಅವರ ಪತಿ ಶುಭಾಕರ್ ರಾವ್ ಕಳೆದ ಇಪ್ಪತ್ತು ವರ್ಷಗಳಿಂದ ದೂರಾವಾಗಿದ್ದು, ಬೇರೆ ಬೇರೆ ವಾಸಿಸುತ್ತಿದ್ದಾರೆ. ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಇದೀಗ ಈ ಜೋಡಿ ವಿಚ್ಚೇದನ ಪಡೆದುಕೊಳ್ಳಲು ಮುಂದಾಗಿದ್ದು, ಕೋರ್ಟ್ ಮೆಲಟ್ಟಿಲೇರಿದ್ದಾರೆ. ಸ್ವರ್ಣಲತಾ ಹಾಗೂ ಶುಭಾಕರ್ ರಾವ್ ಅವರ ಡೈವೋರ್ಸ್ ಪ್ರಕರಣ ಸದ್ಯ ನ್ಯಾಯಾಲಯದಲ್ಲಿದೆ. ಈ ಮಧ್ಯೆ ಹೊಸ ಹೊಸ ಬೆಳವಣಿಗೆಯೊಂದು ನಡೆದಿದ್ದು, ಶುಭಾಕರ್ ರಾವ್ , ಸ್ವರ್ಣ ಲತಾ ಅವರ ವಿರುದ್ಧ ದೂರು ದಾಖಲಿಸಿದ್ದಾರೆ ಎನ್ನಲಾಗಿದೆ.

Another Case Filed Against Actress Sreeleela Mother

ಶುಭಾಕರ್ ರಾವ್ ಬೆಂಗಳೂರಿನ ಕೋರಮಂಗಲದಲ್ಲಿ ಅಪಾರ್ಟ್‌ಮೆಂಟ್‌ ಒಂದನ್ನು ಹೊಂದಿದ್ದಾರೆ. ಈ ಅಪಾರ್ಟ್‌ಮೆಂಟ್‌ವೊಳಗೆ ಶ್ರೀಲೀಲಾ ತಾಯಿ ಸ್ವರ್ಣಲತಾ ಅಕ್ರಮವಾಗಿ ಪ್ರವೇಶ ಮಾಡಿದ್ದಾರೆ. ಮನೆ ಬೀಗ ಒಡೆದು ಒಳ ನುಗ್ಗಿದ್ದಾರೆ ಎಂದು ಶುಭಾಕರ್ ರಾವ್ ಆರೋಪಿಸಿ ದೂರು ದಾಖಲಿಸಿದ್ದಾರೆ.

ಇನ್ನು ಕಳೆದ ತಿಂಗಳು ಸಪ್ಟೆಂಬರ್‌ 10ರಂದು ಶ್ರೀಲೀಲಾ ತಾಯಿ ಸ್ವರ್ಣಲತಾ ಹಾಗೂ ಮಧುಕರ್‌ ಅಂಗೂರ್‌ ತಮ್ಮ 40 ಜನ ಬೌನ್ಸರ್‌ಗಳೊಂದಿಗೆ ಅನೇಕಲ್‌ನಲ್ಲಿರುವ ಅಲಯನ್ಸ್‌ ಯೂನಿವರ್ಸಿಟಿಗೆ ನುಗ್ಗಿ ದಾಂಧಲೆ ನಡೆಸಿದ್ದರು. ಈ ಬಗ್ಗೆ ಕಾಲೇಜಿನ ಸಿಬ್ಬಂದಿ ನಿವೇದಿತಾ ಜೈನ್‌ ಆನೇಕಲ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಈ ಘಟನೆಗೆ ಸಂಬಂಧಿಸಿದಂತೆ ವಿಡಿಯೋವೊಂದು ವೈರಲ್‌ ಆಗಿತ್ತು. ವಿಡಿಯೋದಲ್ಲಿ ಸ್ವರ್ಣಲತಾ ಅಲಯನ್ಸ್‌ ಯೂನಿವರ್ಸಿಟಿಗೆ ನುಗ್ಗಿ ಅಲ್ಲಿನ ಸಿಬ್ಬಂದಿಯನ್ನು ಗದರಿದ್ದಾರೆ. ಅನುಮತಿ ಇಲ್ಲದೇ ಕಾಲೇಜಿನೊಳಗೆ ನುಗ್ಗಿ ರಂಪಾಟ ನಡೆಸಿರುವುದು ಸೆರೆಯಾಗಿತ್ತು. ಇನ್ನು ಕಾಲೇಜಿನ ಸಿಬ್ಬಂದಿಯೊಬ್ಬರು ಸ್ವರ್ಣಲತಾ ಅವರ ಮೊಬೈಲ್‌ ಕಿತ್ತುಕೊಳ್ಳಲು ಬಂದಾಗ ಅವರು ಸಿಟ್ಟಿನಿಂದ ಸಿಬ್ಬಂದಿಯ ಕೆನ್ನೆಗೆ ಬಾರಿಸಿದ್ದರು.

ಈ ಘಟನೆ ಸಂಬಂಧ ಸ್ವರ್ಣಲತಾ ವಿರುದ್ಧ ಆನೇಕಲ್‌ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ಎಫ್‌ಐಆರ್‌ ಕೂಡ ದಾಖಲಾಗಿದ್ದು, ಸ್ವರ್ಣಲತಾ ಅಲಯನ್ಸ್‌ ಯೂನಿವರ್ಸಿಟಿ ಪ್ರಕರಣದ ಎರಡನೇ ಆರೋಪಿಯಾಗಿದ್ದರು. ಸದ್ಯ ಅಲಯನ್ಸ್‌ ಯೂನಿವರ್ಸಿಟಿ ಪ್ರಕರಣದಲ್ಲಿ ಜಾಮೀನು ಪಡೆದಿರುವ ಶ್ರೀಲೀಲಾ ತಾಯಿ ಇದೀಗ ಮತ್ತೊಂದು ಪ್ರಕರಣದ ಆರೋಪಿಯಾಗಿದ್ದಾರೆ. ಈ ದೂರಿನ ಬಗ್ಗೆ ಪೊಲೀಸರು ಯಾವ ರೀತಿ ಕ್ರಮ ಕೈಗೊಳ್ಳುತ್ತಾರೆ ಕಾದು ನೋಡಬೇಕಿದೆ.

More from Filmibeat

English summary
Surapaneni Subhakar Rao filed case against actress Sreeleela mother Swarnalatha.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X