ಕೆಜಿಎಫ್ ಚಾಪ್ಟರ್ 2 ಚಿತ್ರೀಕರಣಕ್ಕೆ ಮತ್ತೊಮ್ಮೆ ಆಘಾತ ಸಾಧ್ಯತೆ

Recommended Video

KGF ಗೆ ಎದುರಾಯ್ತು ಮತ್ತೊಂದು ಸಂಕಷ್ಟ. | KGF 2 | FILMIBEAT KANNADA

ರಾಕಿಂಗ್ ಸ್ಟಾರ್ ಯಶ್ ಅಭಿನಯದ ಕೆಜಿಎಫ್ ಸಿನಿಮಾ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿತ್ತು. ಚಾಪ್ಟರ್ 2 ಬಗ್ಗೆ ಭಾರಿ ಕುತೂಹಲ ಮೂಡಿದೆ. ಈಗಾಗಲೇ ಪಾರ್ಟ್ 2 ಚಿತ್ರೀಕರಣ ಭರದಿಂದ ಸಾಗುತ್ತಿದೆ. ಆದ್ರೀಗ ಚಿತ್ರೀಕರಣಕ್ಕೆ ಅಡ್ಡಿಯಾಗುವ ಸಂದರ್ಭ ಎದುರಾಗಿದೆ.

ಹೌದು, ಇತ್ತೀಚಿಗಷ್ಟೆ ಕೆಜಿಎಫ್ ಚಿತ್ರೀಕರಣದಿಂದ ಪರಿಸರಕ್ಕೆ ಹಾನಿ ಉಂಟಾಗುತ್ತಿದೆ ಎಂಬ ವ್ಯಕ್ತಿಯೊಬ್ಬರು ನ್ಯಾಯಾಲಯದ ಮೊರೆ ಹೋಗಿ, ತಡೆ ತಂದಿದ್ದರು. ಬಳಿಕ ಚಿತ್ರೀಕರಣಕ್ಕೆ ಗ್ರೀನ್ ಸಿಗ್ನಲ್ ಸಿಕ್ಕಿತ್ತು.

ಈಗ ರೌಡಿ ತಂಗಂ ಕುಟುಂಬದವರು ಕೋರ್ಟ್ ಮೆಟ್ಟಿಲೇರಿದ್ದು, ಕೆಜಿಎಫ್ ಚಿತ್ರಕ್ಕೆ ಮತ್ತೆ ತಡೆ ನೀಡುವ ಸಾಧ್ಯತೆ ಇದೆ. ಅಷ್ಟಕ್ಕೂ, ಕೆಜಿಎಫ್ ಹಾಗೂ ರೌಡಿ ತಂಗಂ ಕುಟುಂಬಕ್ಕೂ ಏನ್ ಸಂಬಂಧ? ಮುಂದೆ ಓದಿ....

ರೌಡಿ ತಂಗಂ ಬಗ್ಗೆ ಕೆಟ್ಟದಾಗಿ ತೋರಿಸಲಾಗಿದೆ

ರೌಡಿ ತಂಗಂ ಬಗ್ಗೆ ಕೆಟ್ಟದಾಗಿ ತೋರಿಸಲಾಗಿದೆ

ಕೆಜಿಎಫ್ ಚಿತ್ರದಲ್ಲಿ ಯಶ್ ನಿರ್ವಹಿಸಿರುವ ಪಾತ್ರ ರೌಡಿ ತಂಗಂ ಅವರದ್ದು ಎಂದು ತಂಗಂ ತಾಯಿ ಪೌಳಿ ಆರೋಪಿಸಿದ್ದಾರೆ. ಮಗನ ಬಗ್ಗೆ ಒಳ್ಳೆಯದು ತೋರಿಸುತ್ತೇವೆ ಎಂದು ಹೇಳಿ, ಈಗ ಕೆಟ್ಟದಾಗಿ ಬಿಂಬಿಸಿದ್ದಾರೆ ಎಂದು ದೂರಿದ್ದಾರೆ. ಹಾಗಾಗಿ, ಚಾಪ್ಟರ್ 2 ಚಿತ್ರೀಕರಣಕ್ಕೆ ತಡೆ ನೀಡಬೇಕೆಂದು ಕೋರ್ಟ್ ಗೆ ಮನವಿ ಮಾಡಿದ್ದಾರೆ.

ಕೆಜಿಎಫ್ 1 ಚಿತ್ರಕ್ಕೂ ಅಡ್ಡಿ.!

ಕೆಜಿಎಫ್ 1 ಚಿತ್ರಕ್ಕೂ ಅಡ್ಡಿ.!

ಈ ಹಿಂದೆ ಕೆಜಿಎಫ್ ಸಿನಿಮಾ ರಿಲೀಸ್ ಆಗುವ ಸಮಯದಲ್ಲೂ ರೌಡಿ ತಂಗಂ ಅವರಿಗೆ ಸಂಬಂಧಿಸಿದಂತೆ ಕೋರ್ಟ್ ನಲ್ಲಿ ತಡೆ ತರಲಾಗಿತ್ತು. ಆದರೂ ಕೆಲವು ಕಾನೂನಾತ್ಮಕ ಹೋರಾಟ ಮಾಡಿ ಸಿನಿಮಾ ರಿಲೀಸ್ ಮಾಡಿದ್ದರು ನಿರ್ಮಾಪಕರು. ಇದೀಗ, ಮತ್ತೆ ರೌಡಿ ತಂಗಂ ಕಡೆಯವರು ಕೆಜಿಎಫ್ ಗೆ ಅಡ್ಡಿಯಾಗುವ ಸೂಚನೆ ಕೊಟ್ಟಿದ್ದಾರೆ.

ವಿಚಾರಣೆಗೆ ಹಾಜರಾಗಲು ಕೆಜಿಎಫ್ ತಂಡಕ್ಕೆ ಸೂಚನೆ

ವಿಚಾರಣೆಗೆ ಹಾಜರಾಗಲು ಕೆಜಿಎಫ್ ತಂಡಕ್ಕೆ ಸೂಚನೆ

ರೌಡಿ ತಂಗಂ ಅವರ ತಾಯಿ ಅರ್ಜಿ ಸಲ್ಲಿಸಿರುವ ಹಿನ್ನೆಲೆ ಕೆಜಿಎಫ್ ಚಿತ್ರದ ನಿರ್ಮಾಪಕ, ನಿರ್ದೇಶಕ, ವಾಣಿಜ್ಯ ಮಂಡಳಿ ಅಧ್ಯಕ್ಷರಿಗೆ ವಿಚಾರಣೆಗೆ ಹಾಜರಾಗುವಂತೆ ಸೂಚನೆ ನೀಡಿದೆ. ಅಕ್ಟೋಬರ್ 9ಕ್ಕೆ ಮುಂದಿನ ವಿಚಾರಣೆ ನಡೆಯಲಿದ್ದು ಆ ದಿನ ಕೋರ್ಟ್ ಗೆ ವಿವರಣೆ ನೀಡಬೇಕಾದ ಅಗತ್ಯವಿದೆ.

'ಕೋಲಾರ' ಚಿತ್ರದ ವಿರುದ್ಧವೂ ಸಂಘರ್ಷ

'ಕೋಲಾರ' ಚಿತ್ರದ ವಿರುದ್ಧವೂ ಸಂಘರ್ಷ

ಕೆಜಿಎಫ್ ಸಿನಿಮಾ ರೌಡಿ ತಂಗಂ ಕುರಿತಾಗಿದ್ದು ಎಂದು ಎಲ್ಲಿಯೂ ಚಿತ್ರತಂಡ ಹೇಳಿಲ್ಲ. ಆದರೆ, ಇಂತಹದೊಂದು ಆರೋಪ ಆಗಾಗ ಕೇಳಿ ಬರುತ್ತೆ. ಈ ಹಿಂದೆ ಲೂಸ್ ಮಾದ ಯೋಗೇಶ್ ನಟನೆಯ 'ಕೋಲಾರ' ಚಿತ್ರದಲ್ಲಿ ರೌಡಿ ತಂಗಂ ಜೀವನ ಕಥೆ ಮಾಡಲಾಗಿತ್ತು. ಆ ಚಿತ್ರದ ವಿರುದ್ಧವೂ ತಂಗಂನ ತಾಯಿ ಕೋರ್ಟ್ ಗೆ ಹೋಗಿದ್ದರು. ನಂತರ ಪರಿಹಾರ ಧನ ನೀಡಿ ಸಂಧಾನ ಮಾಡಿಕೊಂಡಿದ್ದರು.

More from Filmibeat

English summary
Rowdy thangam mother pauly has filed case against Kgf chapter 2 movie team. she alleged kgf is rowdy thangam life based story.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X