ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಕೇಳಿ ಬರ್ತಿದೆ ಮತ್ತೊಬ್ಬ ಮಹಿಳೆ ಹೆಸರು? ಯಾರಾಕೆ?
ಪವಿತ್ರಾ ಗೌಡಗೆ ಕೆಟ್ಟದಾಗಿ ಮೆಸೇಜ್ ಕಳುಹಿಸಿದ್ದಕ್ಕೆ ರೇಣುಕಾಸ್ವಾಮಿ ಎಂಬಾತನನ್ನು ಕಿಡ್ಯ್ನಾಪ್ ಮಾಡಿ ಕೊಲೆ ಮಾಡಿರುವ ವಿಚಾರ ಭಾರೀ ಚರ್ಚೆ ಹುಟ್ಟಾಕ್ಕಿದೆ. ನಟ ದರ್ಶನ್ ಸೂಚನೆಯಂತೆ ಈ ಘಟನೆ ಆತನನ್ನು ಕರೆತಂದು ಥಳಿಸಿ ಕೊಲ್ಲಲಾಗಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.
ಪ್ರಕರಣ ಸಂಬಂಧ ನಟ ದರ್ಶನ್, ಪ್ರೇಯಸಿ ಪವಿತ್ರಾ ಗೌಡ ಸೇರಿದಂತೆ 13 ಜನರನ್ನು ವಶಕ್ಕೆ ಪಡೆದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಚಿತ್ರದುರ್ಗದ ಅಭಿಮಾನಿ ಸಂಘದ ಅಧ್ಯಕ್ಷನ ಮೂಲಕ ಮೃತ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಕರೆಸಿ ಶೆಡ್‌ವೊಂದರಲ್ಲಿ ಕೂಡಿ ಹಾಕಿ ಶನಿವಾರ(ಜೂನ್ 8) ಥಳಿಸಿದ್ದಾರೆ. ರಾತ್ರಿ ವೇಳೆಗೆ ಆತ ಕೊನೆಯುಸಿರೆಳೆದಿದ್ದರು ಭಾನುವಾರ ಬೆಳಗಿನ ಜಾವ 3 ಗಂಟೆ ಸುಮಾರಿಗೆ ಶವವನ್ನು ಸುಮನಹಳ್ಳಿ ರಿಂಗ್ ರೋಡ್ ಬಳಿ ಆರೋಪಿಗಳು ಎಸೆದು ಹೋಗಿದ್ದಾರೆ.

ಪೊಲೀಸರಿಗೆ ಶರಣಾಗಿ ತಪ್ಪೊಪ್ಪಿಗೆ ಮುಂದಾಗಿದ್ದ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿದ್ದಾಗ ಪ್ರಕರಣದ ತೀವ್ರತೆ, ಹಿಂದಿರುವ ಮಾಸ್ಟರ್ ಮೈಂಡ್ ಯಾರು ಎನ್ನುವುದರ ಬಗ್ಗೆ ಮಾಹಿತಿ ಲಭ್ಯವಾಗಿದೆ. ಆ ಹಿನ್ನೆಲೆಯಲ್ಲಿ ಪೊಲೀಸರು ನಟ ದರ್ಶನ್, ಆತನ ಪ್ರೇಯಸಿ ಪವಿತ್ರಾ ಗೌಡಳನ್ನು ವಶಕ್ಕೆ ಪಡೆದು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಕಳೆದ ಮೂರ್ನಾಲ್ಕು ತಿಂಗಳಿಂದ ರೇಣುಕಾಸ್ವಾಮಿ ಪವಿತ್ರಾ ಗೌಡ ಪೋಸ್ಟ್‌ಗಳಿಗೆ ಕಾಮೆಂಟ್ ಮಾಡುತ್ತಿದ್ದ ಎಂದು ಹೇಳಲಾಗುತ್ತಿದೆ.
ಆತ ಅಕೌಂಟ್ ಅನ್ನು ಪವಿತ್ರಾ ಗೌಡ ಬ್ಲಾಕ್ ಮಾಡಿದಾಗ ಫೇಕ್ ಅಕೌಂಟ್ ಕ್ರಿಯೇಟ್ ಮಾಡಿ ಕಾಮೆಂಟ್ ಮಾಡುತ್ತಿದ್ದ ಎನ್ನಲಾಗುತ್ತಿದೆ. ದರ್ಶನ್ ಹಾಗೂ ಪತ್ನಿ ವಿಜಯಲಕ್ಷ್ಮಿ ಸಂಸಾರ ಚೆನ್ನಾಗಿರಬೇಕು, ಅವರಿಬ್ಬರ ನಡುವೆ ಪವಿತ್ರಾ ಗೌಡ ಎಂಟ್ರಿ ಆಗಿದ್ದು ಸರಿಯಿಲ್ಲ ಎಂದು ರೇಣುಕಾಸ್ವಾಮಿ ಬೇಸರಗೊಂಡಿದ್ದರು. ಇದೇ ಕಾರಣಕ್ಕೆ ಪವಿತ್ರಾ ಗೌಡ ಪೋಸ್ಟ್‌ಗಳಿಂದ ಕಾಮೆಂಟ್ ಮಾಡುತ್ತಾ ಬಂದಿದ್ದರು ಎನ್ನಲಾಗಿದೆ.
ಅಂದಹಾಗೆ ಪವಿತ್ರಾ ಗೌಡ ಪೊಲೀಸರ ವಿಚಾರಣೆ ವೇಳೆ ರಜಿನಿ ಎನ್ನುವ ಯುವತಿ ಹೆಸರನ್ನು ಹೇಳಿರುವುದಾಗಿ ಬಿಟಿವಿ ವಾಹಿನಿಯಲ್ಲಿ ವರದಿಯಾಗಿದೆ. ರೇಣುಕಾಸ್ವಾಮಿ ಈ ರೀತಿ ಕಾಮೆಂಟ್‌ಗಳನ್ನು ಮಾಡುವ ಬಗ್ಗೆ ಪವಿತ್ರಾ ಗೌಡಗೆ ಯೂಟ್ಯೂಬಲ್ ರಜಿನಿ ತಿಳಿಸುತ್ತಿದ್ದರು, ಎನ್ನುವ ಮಾತುಗಳು ಕೇಳಿಬರ್ತಿದೆ. ರಜಿನಿ ಎಕ್ಸ್‌ಪ್ರೆಸ್ ಹೆಸರಿನಲ್ಲಿ ಆಕೆ ಒಂದು ಯೂಟ್ಯೂಬ್ ಚಾನಲ್ ಹೊಂದಿದ್ದಾರೆ. ಈ ಚಾನಲ್‌ನಲ್ಲಿ ನಟ ದರ್ಶನ್‌ಗೆ ಸಂಬಂಧಿಸಿ ವೀಡಿಯೋಗಳನ್ನು ಹೆಚ್ಚು ಪೋಸ್ಟ್ ಮಾಡುತ್ತಿದ್ದರು. ಆ ಮೂಲಕ ದರ್ಶನ್ ಹಾಗೂ ಪವಿತ್ರಾ ಗೌಡ ವಿಶ್ವಾಸ ಗಳಿಸಿದ್ದರು. ಇದೇ ವಿಶ್ವಾಸದಿಂದ ಇಂತಹ ಕೆಟ್ಟ ಕಾಮೆಂಟ್‌ಗಳ ಬಗ್ಗೆ ಆಕೆ ಪವಿತ್ರಾ ಗೌಡ ಗಮನಕ್ಕೆ ತರುತ್ತಿದ್ದರು. ಅದರಲ್ಲಿ ರೇಣುಕಾಸ್ವಾಮಿ ಕಾಮೆಂಟ್‌ಗಳ ವಿಚಾರವೂ ಹೇಳುತ್ತಿದ್ದರು ಎನ್ನಲಾಗ್ತಿದೆ.
ಇದೀಗ ಖುದ್ದು ಯೂಟ್ಯೂಬರ್ ರಜನಿ ತಮ್ಮ ಸೋಶಿಯಲ್ ಮೀಡಿಯಾ ಖಾತೆಯಲ್ಲಿ ವೀಡಿಯೋ ಮಾಡಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. ನನಗೂ ಪ್ರಕರಣಕ್ಕೂ ಯಾವುದೇ ಸಂಬಂಧ ಇಲ್ಲ. ನಾನು ಎಲ್ಲೂ ನಾಪತ್ತೆ ಆಗಿಲ್ಲ. ನಾನು ನಾಪತ್ತೆ ಆಗಿದ್ದರೆ ಬಂದು ಮಾತನಾಡುತ್ತಿರಲಿಲ್ಲ ಎಂದು ಹೇಳಿದ್ದಾರೆ.

ಇತ್ತೀಚೆಗೆ ರೇಣುಕಾಸ್ವಾಮಿ ಮರ್ಮಾಂಗದ ಫೋಟೊ ಕಳುಹಿಸಿ "ದರ್ಶನ್‌ಗಿಂತ ನಾನೇನು ಕಮ್ಮಿ ಬಾ" ಎಂದು ಪವಿತ್ರಾ ಗೌಡಗೆ ಅಸಭ್ಯವಾಗಿ ಕಾಮೆಂಟ್ ಮಾಡಿದ್ದರು, ಇದೇ ಫೋಟೊ, ಕಾಮೆಂಟ್ ದರ್ಶನ್ ಹಾಗೂ ಪವಿತ್ರಾ ಗೌಡ ಇಬ್ಬರನ್ನು ಕೆರಳಿಸಿತ್ತು ಎಂದು ಟಿವಿ9 ಸುದ್ದಿವಾಹಿನಿ ವರದಿ ಮಾಡಿದೆ. ಇದೇ ಕೆಟ್ಟ ಕಾಮೆಂಟ್, ಫೋಟೊ ರೇಣುಕಾಸ್ವಾಮಿ ಜೀವವನ್ನೇ ತೆಗೆದುಬಿಟ್ಟಿದೆ.
ಪ್ರಕರಣ ಹಿನ್ನೆಲೆ ದರ್ಶನ್, ಪವಿತ್ರಾಗೌಡ, ನಿಖಿಲ್, ವಿನಯ್, ಕಾರ್ತಿಕ್ ಹಾಗೂ ರಾಘವೇಂದ್ರ ಸೇರಿ 13 ಮಂದಿ ಆರೋಪಿಗಳನ್ನು ಮಂಗಳವಾರ (ಜೂನ್ 11)ಬಂಧಿಸಲಾಗಿದೆ. ಮ್ಯಾಜಿಸ್ಟ್ರೇಟ್ ಕೋರ್ಟ್ ಆರೋಪಿಗಳನ್ನು 6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿದೆ.


Click it and Unblock the Notifications











