ಸೋಶಿಯಲ್ ಮೀಡಿಯಾದಲ್ಲಿ ನಿವಿ ಸಖತ್ ಆಕ್ಟಿವ್, ಮತ್ತೊಂದು ಮದುವೆಗೆ ರೆಡಿಯಾದ್ರಾ ನಿವೇದಿತಾ ಗೌಡ?

By ಪೂರ್ವ

ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡ ಈಗಾಗಲೇ ಬೇರೆ ಬೇರೆ ಜೀವನದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ . ಆದರೆ ಅವರಿಬ್ಬರನ್ನು ಬದುಕಲು ಟ್ರೋಲಿಗರು ಬಿಡುತ್ತಿಲ್ಲ ಎಂದರೆ ತಪ್ಪಾಗದು. ಚಂದನ್ ಗೆ ತನ್ನ ಹೆಂಡತಿಗೆ ವಿಚ್ಛೇದನ ನೀಡಿದ್ದು ಮನಸ್ಸಿಗೆ ಬಹಳ ಬೇಸರ ತಂದಿದೆ. ಆದರೆ ನನ್ನಿಂದ ಆಗಿ ಯಾರಿಗೂ ತೊಂದರೆ ಆಗಬಾರದು ಎನ್ನುವ ಮನಸ್ಸು ಚಂದನ್ ಶೆಟ್ಟಿ ಅವರದ್ದು. ಅದೇನೇ ಇದ್ದರು ಅದು ಅವರ ವೈಯಕ್ತಿಕ ವಿಚಾರ.ಈಗಾಗಲೇ ನಿವೇದಿತಾ ಗೌಡ ಅವರು ಜಾಲಿ ಮೂಡ್ ನಲ್ಲಿದ್ದಾರೆ.

ಬಿಗ್ ಬಾಸ್ ಮೂಲಕ ಎಲ್ಲರ ಗಮನ ಸೆಳೆದ ನಟರು ಎಂದರೆ ಅವರು ನಿವೇದಿತಾ ಹಾಗೂ ಚಂದನ್ ಶೆಟ್ಟಿ ಎಂದು ಹೇಳಿದರೆ ತಪ್ಪಾಗದು. ಬಿಗ್ ಬಾಸ್ ಮುಗಿದ ಬಳಿಕ ಇವರು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಆದರೆ ಇದೀಗ ಇವರು ವಿಚ್ಛೇದನ ಪಡೆದುಕೊಂಡಿದ್ದಾರೆ. ಆದರೆ ಈ ವಿಚಾರವನ್ನು ಅಭಿಮಾನಿಗಳು ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದೀಗ ನಿವೇದಿತಾ ಗೌಡ ಹೊಸ ಫೋಟೋ ವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಮೊದಲಿನಿಂದಲೂ ನಿವೇದಿತಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ಸಕ್ರಿಯ ಆಗಿದ್ದವರು

Another photo of Niveditha Gowda ex-wife of Chandan Shetty goes viral

ಆದರೆ ಇದೀಗ ಮತ್ತೆ ಫೋಟೋ ವಿಡಿಯೋ ಶೇರ್ ಮಾಡುತ್ತಿರುವ ನಿವೇದಿತಾ ಗೌಡ ಬಗ್ಗೆ ಅಭಿಮಾನಿಗಳು ಕೆಲವರು ಮುನಿಸಿಕೊಂಡರೆ ಕೆಲವರು ಬಹಳ ಬೇಸರ ಪಟ್ಟುಕೊಂಡಿದ್ದಾರೆ . ಇನ್ನೂ ಕೆಲವರು ಬಹಳ ವ್ಯಂಗ್ಯವಾಗಿ ಮೆಸೇಜ್ ಮಾಡುತ್ತಿದ್ದಾರೆ ಇದೆಲ್ಲವನ್ನೂ ನಿವೇದಿತಾ ಗೌಡ ನೋಡಿದರೂ ಯಾವುದಕ್ಕೂ ಉತ್ತರ ನೀಡದೆ ಮೌನಿಯಾಗಿದ್ದಾರೆ. ಮೊಟ್ಟೆ ಇಡದ ಕೋಳಿ, ಶೆಟ್ರು ಮನೆ ಕೋಳಿ ಕೊನೆಗೆ ಮೊಟ್ಟೆ ಹಾಕದೆನೆ ಮನೆ ಬಿಟ್ಟಿತು ಎಂತ ಕೋಳಿ ಲೇ ಇದು ಎಂದೆಲ್ಲ ಕಾಮೆಂಟ್ ಮಾಡಿದ್ದಾರೆ.

ರೀಲ್ಸ್ ಮೂಲಕ ಎಲ್ಲರ ಮನಗೆದ್ದ ನಟಿ

ಮದುವೆಗಿಂತ ಮುಂಚೆಯಿಂದ ಕೂಡ ನಿವೇದಿತಾ ಗೌಡ ರೀಲ್ಸ್ ಗಳನ್ನು ಮಾಡಿಕೊಂಡು ಇದ್ದರೂ.ರ್ಯಾಪರ್ ಚಂದನ್ ಶೆಟ್ಟಿ ಅವರನ್ನು ಮದುವೆ ಆದ ಬಳಿಕ ಗಂಡನ ಜೊತೆಗೂ ಕೂಡ ರೀಲ್ಸ್ ಮಾಡುತ್ತಿದ್ದರು. ಹಾಗೆಯೇ ಚಂದನ್ ಜೊತೆ ನಿವೇದಿತಾ ಧ್ವನಿಗೂಡಿಸಿದ್ದು ಎಲ್ಲರಿಗೂ ತಿಳಿದೇ ಇದೆ. ಮೈಸೂರಿನಲ್ಲಿ ದಸರಾ ಮಹೋತ್ಸವದ ವೇದಿಕೆ ಮೇಲೆ ನಿವೇದಿತಾ ಗೌಡಗೆ ಪ್ರೇಮ ನಿವೇದನೆ ಮಾಡಿಕೊಂಡಿದ್ದ ಚಂದನ್‌ ಶೆಟ್ಟಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿದ್ದರು. ಅನೇಕ ಜನರು ಚಂದನ್ ಶೆಟ್ಟಿ ಆ ರೀತಿ ಮಾಡಿ ಇರುವುದನ್ನು ನೋಡಿ ಬಹಳ ಬೇಸರ ವ್ಯಕ್ತಪಡಿಸಿದರೆ ಇನ್ನೂ ಕೆಲವು ಮಂದಿ ಶಾಪ ಹಾಕಿದ್ದರು.

another-photo-of-niveditha-gowda-ex-wife-of-chandan-shetty-goes-viral

ಡಿವೋರ್ಸ್ ಆದ ಬಳಿಕ ಖುಷಿಯಾಗಿರುವ ನಟಿ

ಡಿವೋರ್ಸ್ ಆದ ಬಳಿಕ ಅನೇಕ ಜನರು ಚಂದನ್ ಹಾಗೂ ನಿವೇದಿತಾ ಗೌಡ ಬೇರೆ ಬೇರೆ ಆಗಲು ಇದೆ ಕಾರಣ ಆಗಿರಬಹುದು ಎಂದು ಹೇಳುತ್ತಿದ್ದರು. ಇನ್ನೂ ನಿವೇದಿತಾ ಗೌಡ ವಿಚ್ಛೇದನ ಆದ ಬಳಿಕ ಬಹಳ ಖುಷಿಯಾಗಿ ಇದ್ದಾರೆ ಎಂದು ಹೇಳಿದರೆ ತಪ್ಪಾಗದು ಸ್ವಾತಂತ್ರ್ಯವಾಗಿ ಎಲ್ಲೆಂದರಲ್ಲಿ ಹಕ್ಕಿಯಂತೆ ಹಾರಾಡುತ್ತಿದ್ದಾರೆ ಎಂದೆಲ್ಲ ಅನೇಕ ಜನ ಕಾಮೆಂಟ್ ಮೂಲಕ ಹೇಳುತ್ತಾರೆ. ಹಾಗೆಯೇ ಫೋಟೋ ವಿಡಿಯೋಗಳನ್ನು ಆಗಾಗ ಅಪ್ಲೋಡ್ ಮಾಡುತ್ತಾ ಸದಾ ಸುದ್ದಿಯಲ್ಲಿರುವ ಮುದ್ದು ಮೊಗದ ಚೆಲುವೆ ಎಂದು ಹೇಳಿದರೆ ತಪ್ಪಾಗದು. ಇದೀಗ ಸೀರೆಯುಟ್ಟ ನಿವೇದಿತಾ ಗೌಡ ನೋಡಿದ ಅನೇಕ ಜನ ಮುದ್ದು ಗೊಂಬೆಯ ಹಾಗೆ ಕಾಣಿಸುತ್ತಿದ್ದಿರಾ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ನಿವೇದಿತಾಗೆ ಟ್ರೋಲಿಗರ ಕಾಟ

ಹಾಗೆಯೇ ಇನ್ಸ್‌ಟಾಗ್ರಾಮ್‌ನಲ್ಲಿ ನಿವೇದಿತಾ ಗೌಡ ರೀಲ್ಸ್‌ಗೆ ಕಳೆ ಬಂದಿದೆ. ಅವರ ರೀಲ್ಸ್‌ಗೆ ಹಿಂದಿನದಕ್ಕಿಂತ ಹೆಚ್ಚಿನ ವೀವ್ಸ್‌ಗಳು, ಕಾಮೆಂಟ್‌ಗಳು ಹಾಗೂ ಲೈಕ್ಸ್‌ಗಳು ಬರುತ್ತಿವೆ. ಅದರೊಂದಿಗೆ ಸಾಕಷ್ಟು ಪ್ರಮೋಷನ್‌ ನಲ್ಲಿ ನಿವೇದಿತಾ ಭಾಗಿಯಾಗ್ತಿದ್ದಾರೆ. ಇನ್ನೂ ಸೀರೆಯಲ್ಲಿ ಸಖತ್ ಮುದ್ದಾಗಿ ಕಾಣಿಸುತ್ತಿರುವ ನಟಿಯ ಹಳೆಯ ಹಾಡಿಗೆ ರೀಲ್ಸ್ ಮಾಡಿ ಎಲ್ಲರ ಮನಸ್ಸನ್ನೂ ಗೆದ್ದಿದ್ದಾರೆ. ನೋಡಲು ಸಖತ್ ಕ್ಯೂಟ್ ಆಗಿರುವ ನಿವೇದಿತಾ ನೋಟಕ್ಕೆ ಅನೇಕ ಜನರು ಫಿದಾ ಆಗುರುವುದಂತು ಸತ್ಯ. ನೀಲಿ ಬಣ್ಣದ ಫ್ರಾಕ್ ತೊಟ್ಟು ಇನ್ನೊಂದು ಹೊಸ ಲುಕ್ ನಲ್ಲಿ ನಿವೇದಿತಾ ಗೌಡ ರೀಲ್ಸ್ ಮಾಡುತ್ತಿದ್ದಾರೆ. ಇದೀಗ ನಿವೇದಿತಾ ಅಭಿಮಾನಿಗಳು ಎರಡನೇ ಮದುವೆ ಯಾವಾಗ ಎಂದು ಪ್ರಶ್ನೆ ಮಾಡುತ್ತಿದ್ದಾರೆ. ಆದರೆ ನಿವೇದಿತಾ ಸದ್ಯ ಯಾರ ಕಾಮೆಂಟ್ ಗೆ ರಿಪ್ಲೈ ಕೊಡದೆ ಹ್ಯಾಪಿ ಮೂಡ್ ನಲ್ಲಿದ್ದಾರೆ.

.

More from Filmibeat

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X