ಅಪ್ಪನ ಸಿನಿಮಾ ಜೊತೆಗೆ ಎಂಟ್ರಿ ಕೊಡಲಿದ್ದಾರೆ ಅಭಿಷೇಕ್ ಅಂಬರೀಶ್
Recommended Video
ರೆಬೆಲ್ ಸ್ಟಾರ್ ಅಂಬರೀಶ್ ಪುತ್ರ ಅಭಿಷೇಕ್ ಅಭಿನಯದ ಮೊದಲ ಸಿನಿಮಾ 'ಅಮರ್' ರಿಲೀಸ್ ಗೆ ಸಜ್ಜಾಗಿದೆ. ಮುಂದಿನ ತಿಂಗಳು ಮೇ 31ರಂದು ಅಂಬರೀಶ್ ಹುಟ್ಟುಹಬ್ಬದ ಸಮಯದಲ್ಲಿ ಅದ್ಧೂರಿಯಾಗಿ ತೆರೆಗೆ ಬರುತ್ತಿದೆ. ಈಗಾಗಲೆ ಹಾಡುಗಳು ಮತ್ತು ಟ್ರೈಲರ್ ಮೂಲಕ ಭಾರಿ ನಿರೀಕ್ಷೆ ಮೂಡಿಸಿರುವ 'ಅಮರ್' ನೋಡಲು ಚಿತ್ರಾಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ.
ವಿಶೇಷ ಅಂದ್ರೆ ಅಭಿಷೇಕ್ ಅಭಿನಯದ 'ಅಮರ್' ಸಿನಿಮಾ ರಿಲೀಸ್ ದಿನವೇ ರೆಬೆಲ್ ಸ್ಟಾರ್ ಅಂಬರೀಶ್ ಸಿನಿಮಾ ಕೂಡ ತೆರೆಗೆ ಬರುತ್ತಿದೆ. ಹೌದು, ರೆಬೆಲ್ ಸ್ಟಾರ್ ಹುಟ್ಟುಹಬ್ಬದ ಪ್ರಯುಕ್ತ ಅಂಬರೀಶ್ ಅಭಿನಯದ ಬ್ಲಾಕ್ ಬಸ್ಟರ್ 'ಅಂತ' ಸಿನಿಮಾ ರಿ-ರಿಲೀಸ್ ಮಾಡಲು ಪ್ಲಾನ್ ಮಾಡಿದೆ ಚಿತ್ರತಂಡ.
'ಅಂತ' ಅಂಬರೀಶ್ ಸಿನಿ ಬದುಕಿಗೆ ಹೊಸ ಆಯಾಮ ನೀಡಿದ ಸಿನಿಮಾ. 1981ರಲ್ಲಿ ತೆರೆಗೆ ಬಂದ 'ಅಂತ' ಕನ್ನಡ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆದ ಸಿನಿಮಾ. ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಸಾರಥ್ಯದಲ್ಲಿ ಮೂಡಿ ಬಂದ ಈ ಸಿನಿಮಾದಲ್ಲಿ ರೆಬೆಲ್ ಸ್ಟಾರ್ ಅಂಬರೀಶ್ ದ್ವಿಪಾತ್ರದಲ್ಲಿ ಮಿಂಚಿದ್ದರು. ಕನ್ವರ್ ಲಾಲ್ ಪಾತ್ರ ಅಂತು ಕನ್ನಡ ಚಿತ್ರಪ್ರಿಯರು ಮರೆಯಲು ಸಾಧ್ಯವಿಲ್ಲ. ನಾಯಕಿಯರಾಗಿ ಲಕ್ಷ್ಮಿ ಮತ್ತು ಲತಾ ಕಾಣಿಸಿಕೊಂಡಿದ್ದರು.

ಪರಿಮಳ ಆರ್ಟ್ಸ್ ಬ್ಯಾನರ್ ನಲ್ಲಿ ಹೆಚ್ ವಿ. ಮಾರುತಿ ಮತ್ತು ವೇಣು ಗೋಪಾಲ್ ನಿರ್ಮಾಣ ಮಾಡಿದ್ದರು. ಜಿ.ಕೆ ವೆಂಕಟೇಶ್ ಸಂಗೀತ ಚಿತ್ರಕ್ಕಿದೆ. ಈಗ ಮತ್ತದೆ ಸೂಪರ್ ಹಿಟ್ ಅಂತ ಸಿನಿಮಾ ಡಿಸಿಟಲ್ ಫಾರ್ಮೆಟ್ ನೊಂದಿಗೆ ಮಗನ ಮೊದಲ ಸಿನಿಮಾ ಜೊತೆಗೆ ಬರುತ್ತಿದೆ. ಹೆಚ್ಚು ಚಿತ್ರಮಂದಿರಗಳಲ್ಲಿ ಹೊಸ ರೂಪದ 'ಅಂತ' ಸಿನಿಮಾ ರಾರಾಜಿಸಲಿದೆ.


Click it and Unblock the Notifications











