For Quick Alerts
  ALLOW NOTIFICATIONS  
  For Daily Alerts

  ನವೆಂಬರ್ 8 ರಂದು ಅಂಬರೀಶ್ ಅಭಿಮಾನಿಗಳಿಗೆ ಹಬ್ಬ!

  |
  Ambareesh fans are up for a trat on november 8th | FILMIBEAT KANNADA

  ರೆಬೆಲ್ ಸ್ಟಾರ್ ಅಂಬರೀಶ್ ಅಭಿನಯದ ಸೂಪರ್ ಹಿಟ್ ಸಿನಿಮಾ 'ಅಂತ' ರಿ-ರಿಲೀಸ್ ಆಗ್ತಿದೆ ಎಂಬ ಸುದ್ದಿ ವರದಿಯಾಗಿತ್ತು. ಎಲ್ಲ ಅಂದುಕೊಂಡಂತೆ ಆಗಿದ್ದರೆ ಅಂಬಿಯ ಹುಟ್ಟುಹಬ್ಬಕ್ಕೆ ಈ ಚಿತ್ರ ತೆರೆಮೇಲೆ ಬರಬೇಕಿತ್ತು. ತಾಂತ್ರಿಕ ಕಾರಣದಿಂದ ಆಗ ಬಂದಿಲ್ಲ.

  ಹೊಸ ತಂತ್ರಜ್ಙಾನದೊಂದಿಗೆ ರಿ-ರಿಲೀಸ್ ಆಗುತ್ತಿರುವ ಅಂತ ಸಿನಿಮಾ ಈಗ ನವೆಂಬರ್ 8 ರಂದು ಚಿತ್ರಮಂದಿರಕ್ಕೆ ಲಗ್ಗೆಯಿಡುತ್ತಿದೆ. ಆಧುನಿಕ ಟಚ್ ನೀಡಿರುವ 'ಅಂತ' ಸಿನಿಮಾದ ಹೊಸ ಟ್ರೈಲರ್ ಬಿಡುಗಡೆಯಾಗಿದ್ದು, ಬಹಳ ಕಲರ್ ಫುಲ್ ಮೂಡಿಬಂದಿದೆ ಎಂಬ ಭರವಸೆ ಮೂಡಿಸಿದೆ.

  ನಟ ಅಂಬರೀಶ್ ಬಗ್ಗೆ ನಿಮಗೆ ಗೊತ್ತಿಲ್ಲದ ಸಂಗತಿಗಳು

  1981ರಲ್ಲಿ ತೆರೆಕಂಡಿದ್ದ ಅಂತ ಸಿನಿಮಾ ಆಗಿನ ಸಮಯದಕ್ಕೆ ಬಹುದೊಡ್ಡ ಹಿಟ್ ಚಿತ್ರವಾಗಿತ್ತು. ದ್ವಿಪಾತ್ರದಲ್ಲಿ ನಟಿಸಿದ್ದ ಅಂಬರೀಶ್ ಒಂದು ಕಡೆ ದಕ್ಷ ಪೊಲೀಸ್ ಅಧಿಕಾರಿಯಾಗಿ ಮತ್ತೊಂದೆಡೆ ಖತರ್ನಾಕ್ ರೌಡಿಯಾಗಿ ಕಾಣಿಸಿಕೊಂಡಿದ್ದರು. ಅದರಲ್ಲೂ 'ಕನ್ವರ್ ಲಾಲ್' ಪಾತ್ರ ಅಂಬರೀಶ್ ಅವರ ಇಮೇಜ್ ಬದಲಿಸಿದ್ದಲ್ಲದೇ, ಇಂಡಸ್ಟ್ರಿಯಲ್ಲಿ ಸೂಪರ್ ಸ್ಟಾರ್ ಆಗಿ ನಿಲ್ಲಲು ಸಹಕಾರಿಯಾಗಿತ್ತು.

  ವಿಷ್ಣು - ಅಂಬಿ ಮಾಡಬೇಕಿದ್ದ ಈ ಸಿನಿಮಾ ಕನಸಾಗಿಯೇ ಉಳಿದಿದೆವಿಷ್ಣು - ಅಂಬಿ ಮಾಡಬೇಕಿದ್ದ ಈ ಸಿನಿಮಾ ಕನಸಾಗಿಯೇ ಉಳಿದಿದೆ

  ಸಮಾಜದಲ್ಲಿ ನಡೆಯುವ ಭ್ರಷ್ಟಾಚಾರ, ದುಷ್ಟ ವ್ಯವಸ್ಥೆಗಳ ಕುರಿತು ಮೂಡಿಬಂದಿದ್ದ ಚಿತ್ರ ಇದಾಗಿದ್ದು, ಕನ್ನಡದ ಎವರ್ ಗ್ರೀನ್ ಸಿನಿಮಾಗಳ ಪೈಕಿ 'ಅಂತ' ಚಿತ್ರವೂ ಒಂದಾಗಿದೆ.

  ಎಸ್ ವಿ ರಾಜೇಂದ್ರ ಸಿಂಗ್ ಬಾಬು ಕಥೆ ಬರೆದು ನಿರ್ದೇಶನ ಮಾಡಿದ್ದರು. ಅಂಬರೀಶ್ ಗೆ ನಾಯಕಿಯಾಗಿ ಲಕ್ಷ್ಮಿ, ಮತ್ತು ಪ್ರಮುಖ ಪಾತ್ರದಲ್ಲಿ ಜಯಮಾಲ ನಟಿಸಿದ್ದರು. ಪ್ರಭಾಕರ್, ಶಕ್ತಿಪ್ರಸಾದ್, ಸುಂದರ್ ಕೃಷ್ಣ ಅರಸ್, ವಜ್ರಮುನಿ ಅಂತಹ ದಿಗ್ಗಜ ಕಲಾವಿದರು ಖಳನಾಯಕರಾಗಿ ನಟಿಸಿದ್ದರು.

  English summary
  Kannada Actor Ambareesh's Super-Hit movie 'Antha' is releasing all over Karnataka in a brand new copy.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X