'ಮ್ಯಾಕ್ಸ್' ಬಗ್ಗೆ ಅಪಪ್ರಚಾರ? ಕಿಚ್ಚನ ಸಿನಿಮಾ ಟಾರ್ಗೆಟ್ ಮಾಡುತ್ತಿರುವುದು ಯಾರು?

By ಫಿಲ್ಮಿಬೀಟ್ ಡೆಸ್ಕ್

ಕನ್ನಡ ಚಿತ್ರರಂಗ ಸಂಕಷ್ಟಕ್ಕೆ ಸಿಲುಕಿದೆ. ದೊಡ್ಡ ಸಿನಿಮಾಗಳು ಬಾರದೇ ಪ್ರೇಕ್ಷಕರು ಚಿತ್ರಮಂದಿರದತ್ತ ಬರುತ್ತಿಲ್ಲ. ಈ ವರ್ಷ ಸ್ಯಾಂಡಲ್‌ವುಡ್ ಸಾಧನೆ ಕಳಪೆಯಾಗಿದೆ ಎಂದರೆ ತಪ್ಪಾಗಲ್ಲ. ಮುಂದಿನ ದಿನಗಳಲ್ಲಿ 'ಭೀಮ', ಬೈರತಿ ರಣಗಲ್', 'ಮ್ಯಾಕ್ಸ್', 'ಯುಐ', ಮಾರ್ಟಿನ್, 'ಕೆಡಿ' ಸಿನಿಮಾಗಳು ತೆರೆಗೆ ಬರಲು ಸಜ್ಜಾಗಿವೆ.

ದೊಡ್ಡ ಸಿನಿಮಾಗಳು ಅಂದಾಕ್ಷಣ ಸಹಜವಾಗಿಯೇ ನಿರೀಕ್ಷೆ ಮೂಡುತ್ತದೆ. ಸ್ಟಾರ್ ನಟರ ಸಿನಿಮಾಗಳ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿರುತ್ತದೆ. ಆದರೆ ಅದ್ಯಾಕೋ 'ಮ್ಯಾಕ್ಸ್' ಸಿನಿಮಾ ಬಗ್ಗೆ ನೆಗೆಟಿವ್ ಕಾಮೆಂಟ್ಸ್ ಹೆಚ್ಚಾಗುತ್ತಿದೆ. ಅನೌನ್ಸ್‌ಮೆಂಟ್ ಟೀಸರ್, ಪೋಸ್ಟರ್ಸ್ ಬಿಟ್ಟರೆ ಸಿನಿಮಾ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಸದ್ಯ ಟೀಸರ್ ಬಿಡುಗಡೆಗೆ ಸಿದ್ಧತೆ ನಡೆಯುತ್ತಿದೆ. ಇಂತಹ ಹೊತ್ತಲ್ಲೇ ಕೆಲವರು ಸಿನಿಮಾ ಬಗ್ಗೆ ನೆಗೆಟಿವ್ ಟ್ರೆಂಡ್ ಮಾಡಲು ಆರಂಭಿಸಿದ್ದಾರೆ.

Anti fans create negative trend on kichcha sudeep starrer Max film

ವಿಜಯ್ ಕಾರ್ತಿಕೇಯನ್ ನಟನೆಯ 'ಮ್ಯಾಕ್ಸ್' ಸಿನಿಮಾ ಪ್ಯಾನ್‌ ಇಂಡಿಯಾ ಮಟ್ಟದಲ್ಲಿ ತೆರೆಗೆ ಬರಲಿದೆ. ಕಿಚ್ಚ ಸುದೀಪ್ ಚಿತ್ರದಲ್ಲಿ ಖಡಕ್ ಪೊಲೀಸ್ ಆಫೀಸರ್ ಆಗಿ ಕಾಣಿಸಿಕೊಂಡಿದ್ದಾರೆ. ಮಹಾಬಲೀಪುರಂನಲ್ಲಿ ಭಾರೀ ಸೆಟ್ ಹಾಕಿ ಸಿನಿಮಾ ಚಿತ್ರೀಕರಣ ಮಾಡಲಾಗಿದೆ. ಸೆಪ್ಟೆಂಬರ್ ವೇಳೆಗೆ ಸಿನಿಮಾ ತೆರೆಗೆ ತರುವ ಪ್ರಯತ್ನ ನಡೀತಿದೆ. ಈಗಾಗಲೇ ಚಿತ್ರದ ಪೋಸ್ಟರ್‌ಗಳು ಕುತೂಹಲ ಮೂಡಿಸಿದೆ.

ಕನ್ನಡ ಹಾಗೂ ತಮಿಳು ಕಲಾವಿದರು, ತಂತ್ರಜ್ಞರು ಸೇರಿ ಮಾಡುತ್ತಿರುವ ಸಿನಿಮಾ ಇದು. ಸುದೀಪ್ ಜೊತೆಗೆ ವರಲಕ್ಷ್ಮಿ ಶರತ್‌ಕುಮಾರ್, ಸಂಯುಕ್ತಾ ಹೊರನಾಡ್, ಸುಕೃತಾ ವಾಗ್ಲೆ, ಸುನೀಲ್, ಪ್ರಮೋದ್ ಶೆಟ್ಟಿ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ. ಶೇಖರ್ ಚಂದ್ರ ಛಾಯಾಗ್ರಹಣ ಹಾಗೂ ಅಜನೀಶ್ ಲೋಕನಾಥ್ ಸಂಗೀತ ಚಿತ್ರಕ್ಕಿದೆ. ವಿ ಕ್ರಿಯೇಷನ್ಸ್ ಜೊತೆ ಸೇರಿ ಸುದೀಪ್ ತಮ್ಮದೇ ಕಿಚ್ಚ ಕ್ರಿಯೇಷನ್ಸ್ ಬ್ಯಾನರ್‌ನಲ್ಲಿ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

Anti fans create negative trend on kichcha sudeep starrer Max film

ಭಾರೀ ನಿರೀಕ್ಷೆ ಹುಟ್ಟಿಸಿರುವ ಚಿತ್ರಕ್ಕೆ ಇದೀಗ ನೆಗೆಟಿವ್ ಟ್ರೋಲ್ ಹೆಚ್ಚಾಗಿದೆ. 'ಮ್ಯಾಕ್ಸ್' ಆ ಸಿನಿಮಾ ರೀಮೆಕ್, ಎಲ್ಲಾ ಕಾಪಿ ಪೇಸ್ಟ್ ಅಂತ ಕೆಲವರು ಕಾಮೆಂಟ್ ಮಾಡಲು ಶುರು ಮಾಡಿದ್ದಾರೆ. ಇನ್ನು ಟೀಸರ್ ಕೂಡ ಬರುವ ಮುನ್ನ ಸಿನಿಮಾ ರೀಮೆಕ್ ಎಂದು ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಈ ಬಗ್ಗೆ ಚಿತ್ರತಂಡ ಯಾವುದೇ ಮಾಹಿತಿ ನೀಡಿಲ್ಲ. ಆದರೂ ಸುದೀಪ್ ಸಿನಿಮಾ ಟಾರ್ಗೆಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡ್ ಮಾಡುತ್ತಿರುವುದು ಗೊತ್ತಾಗುತ್ತಿದೆ.

ಚಿತ್ರರಂಗದಲ್ಲಿ ಸ್ಟಾರ್ ವಾರ್ ಸಾಮಾನ್ಯ. ಸ್ಟಾರ್‌ಗಳ ಫ್ಯಾನ್ಸ್ ನಡುವೆಯೂ ಪದೇ ಪದೇ ಕೆಸರೆರಚಾಟ ನಡೆಯುತ್ತಲೇ ಇರುತ್ತದೆ. ಆದರೆ ಈ ರೀತಿ ಒಂದು ಸಿನಿಮಾವನ್ನು ಟಾರ್ಗೆಟ್ ಮಾಡುವುದು ಎಷ್ಟು ಸರಿ ಎನ್ನುವ ಪ್ರಶ್ನೆ ಎದುರಾಗುತ್ತದೆ. ನೂರಾರು ಜನರ ಶ್ರಮ ಒಂದು ಚಿತ್ರಕ್ಕೆ ಇರುತ್ತದೆ. ಈ ರೀತಿ ನೆಗೆಟಿವ್ ಕಾಮೆಂಟ್ಸ್ ಮಾಡಿ ವಿಕೃತ ಆನಂದ ಪಡುವಂತಹದ್ದು ಏನಿದೆ? ತಮ್ಮ ನೆಚ್ಚಿನ ನಟ ಗ್ರೇಟ್ ಎಂದು ಕೊಚ್ಚಿಕೊಳ್ಳಲು ಮತ್ತೊಬ್ಬ ನಟನನ್ನು, ಮತ್ತೊಂದು ಸಿನಿಮಾವನ್ನು ಕೊಲ್ಲುವ ಪ್ರಯತ್ನ ಮಾಡಬಾರದು.

'ವಿಕ್ರಾಂತ್ ರೋಣ' ಬಳಿಕ 'ಮ್ಯಾಕ್ಸ್' ಸಿನಿಮಾ ಪ್ರೇಕ್ಷಕರ ಮುಂದೆ ಬರ್ತಿದೆ. ಇತ್ತೀಚೆಗೆ ಸುದೀಪ್ ತಮ್ಮ ಪಾತ್ರಕ್ಕೆ ಡಬ್ಬಿಂಗ್ ಮಾಡಿದ್ದಾರೆ. ಅಭಿಮಾನಿಗಳು ಈ ಚಿತ್ರಕ್ಕಾಗಿ ಕಾತರದಿಂದ ಕಾಯುತ್ತಿದ್ದಾರೆ. ಮೇಕಿಂಗ್ ಹಂತದಲ್ಲೇ ಸಿನಿಮಾ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ಒಳ್ಳೆ ಸಿನಿಮಾವನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ. ಒಳ್ಳೆ ಚಿತ್ರಕ್ಕೆ ಗೆಲುವು ಶತಸಿದ್ಧ ಎಂದು ಸುದೀಪ್ ಫ್ಯಾನ್ಸ್ ಕಾಮೆಂಟ್ ಮಾಡುತ್ತಿದ್ದಾರೆ.

More from Filmibeat

English summary
Why negative trend for sudeep's Max film;
Read more about: filmibeat original sudeep darshan
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X