»   » ಪ್ರೇಮಿಗಳ ದಿನದಂದು ಅನು-ಕೃಷ್ಣ ಕಲ್ಯಾಣ

ಪ್ರೇಮಿಗಳ ದಿನದಂದು ಅನು-ಕೃಷ್ಣ ಕಲ್ಯಾಣ

Posted By:
Subscribe to Filmibeat Kannada

ಅನು ಪ್ರಭಾಕರ್‌ ಮದುವೆಯ ದಿನಾಂಕ ನಿಶ್ಚಯವಾಗಿದೆ. 2002 ರ ಫೆಬ್ರವರಿ 14 ರಂದು ಅನು ಎನ್ನುವ ಕನ್ಯಾರತ್ನಹಾಗೂ ಕೃಷ್ಣ ಕುಮಾರ್‌ ಎನ್ನುವ ವರನ ವಿವಾಹ ಮಹೋತ್ಸವ ಜರುಗಲಿದೆ ಎನ್ನುವ ಸುದ್ದಿ ಅನು ಕ್ಯಾಂಪ್‌ನಿಂದ ಹೊರಬಿದ್ದಿದೆ. ಫೆಬ್ರವರಿ 14 ಪ್ರೇಮಿಗಳ ದಿನ ಅನ್ನುವುದು ಸುದ್ದಿಯಲ್ಲಿನ ವಿಶೇಷ.

ಅನು ಹಾಗೂ ಕೃಷ್ಣಕುಮಾರ್‌ ಪ್ರೇಮಿಗಳೆನ್ನುವುದು ಜಗಜ್ಜಾಹೀರಾದ ವಿಷಯವಾದರೂ, ಅವರ ಮದುವೆ ಜರುಗುತ್ತಿರುವ ಪ್ರೇಮಿಗಳ ದಿನದ ಮುಹೂರ್ತಕ್ಕೂ ಪ್ರೇಮಕ್ಕೂ ಯಾವ ಸಂಬಂಧವೂ ಇಲ್ಲ. ‘ಅದೊಂದು ಆಕಸ್ಮಿಕ ಅಷ್ಟೇ’ ಅನ್ನುತ್ತಾರೆ ಅನು ಯಾವತ್ತಿನ ನಗೆಯಾಂದಿಗೆ. ವಧೂವರರ ಜಾತಕ ಫಲಗಳನ್ನು ತಾಳೆ ನೋಡಿಯೇ ಮದುವೆಯ ದಿನಾಂಕವನ್ನು ನಿಶ್ಚಯಿಸಲಾಗಿದೆ. ಆ ದಿನ ಪ್ರೇಮಿಗಳ ದಿನ ಆಗಿರುವುದು ಯೋಗಾಯೋಗ ಅನ್ನಬಹುದು.

ಮದುವೆ ನಿಶ್ಚಯವಾಗಿದ್ದರೂ, ಚಿತ್ರಗಳ ಸೆಟ್‌ಗಳಲ್ಲಿ ಜೋಡಿಯಾಗಿ ಕಾಣಿಸಿಕೊಂಡರೂ, ಅನು ಪ್ರಭಾಕರ್‌ಗೆ ಬೇಡಿಕೆಯೇನೂ ಕುಗ್ಗಿಲ್ಲ . ಇತ್ತೀಚೆಗಷ್ಟೇ ಚರಣ್‌ರಾಜ್‌ ಅಭಿನಯದ ‘ಅಣ್ಣಯ್ಯ ತಮ್ಮಯ’್ಯ, ಹಾಗೂ ಜಯಶ್ರೀ ದೇವಿ ಅವರ ‘ಜಗಜ್ಜನನಿ’ ಸಿನಿಮಾಗಳಿಗೆ ಅನು ಆಯ್ಕೆಯಾಗಿದ್ದಾರೆ. ‘ಮಿಸ್ಟರ್‌ ಹರಿಶ್ಚಂದ್ರ’ ನಂತರ ಮೋಹನ್‌ ನಾಯಕರಾಗಿರುವ ಚಿತ್ರವೊಂದನ್ನೂ ಅನು ಒಪ್ಪಿಕೊಂಡಿದ್ದಾರೆ ಎಂದು ಸುದ್ದಿ . ಅಲ್ಲಿಗೆ ಮದುವೆಯ ನಂತರವೂ ಅನು ಚಿತ್ರಗಳಲ್ಲಿ ತೊಡಗುವುದು ಖಚಿತ, ನೋಡಲು ಪ್ರೇಕ್ಷಕರು ಸಿದ್ಧರಿರಬೇಕಷ್ಟೆ .

ಸಿನಿಮಾ ಸೆಟ್‌ನಲ್ಲಿ ಕೇಳಿಸಿದ್ದು , ಕಂಡಿದ್ದು-

  1. ‘ಅಣ್ಣಯ್ಯ ತಮ್ಮಯ್ಯ’ ಸಿನಿಮಾದಲ್ಲಿ ನಟಿಸುವ ಮೂಲಕ ಕನ್ನಡ ಚಿತ್ರರಂಗಕ್ಕೆ ರೀ ಎಂಟ್ರಿ ಪಡೆದುಕೊಳ್ಳುತ್ತಿರುವ ಖುಷಿಯಲ್ಲಿರುವ ಚರಣ್‌ರಾಜ್‌ ತಮ್ಮ ಪಾತ್ರದ ಬಗ್ಗೆ ಖುಷಿಯಾಗಿದ್ದರು. ಅನು ಪ್ರಭಾಕರ್‌ ಪ್ರಸ್ತಾಪ ಬಂದಾಗ ಚರಣ್‌ ಮತ್ತಷ್ಟು ಉಲ್ಲಸಿತರಾದರು. ‘ನಾನು ಅವರ ಮನೆಗೆ ಹೋದಾಗ ಇಷ್ಟುದ್ದ ಇದ್ದಳು. ಪ್ರೀತಿಯಿಂದ ತಲೆ ಮೇಲೆ ಮೊಟಕುತ್ತಿದ್ದೆ. ಈಗ ನೋಡಿ ನಂಗಿಂತ ಎತ್ತರಕ್ಕೆ ಬೆಳೆದಿದ್ದಾಳೆ’ ಎಂದು ಚರಣ್‌ ನೆನಪುಗಳನ್ನು ಹೇಳಿಕೊಂಡರು. ಅನು ಅಭಿನಯದಲ್ಲೂ ಎತ್ತರಕ್ಕೆ ಬೆಳೆದಿದ್ದಾರೆ ಎಂಬುದು ಚರಣ್‌ ಸರ್ಟಿಫಿಕೇಟ್‌. ಅಂದಹಾಗೆ, ಅನು ಅಭಿನಯದ ಚಿತ್ರಗಳನ್ನು ಅವರು ನೋಡಿಲ್ಲ , ಹಾಡಿನ ದೃಶ್ಯಗಳನ್ನು ಟೀವಿಯಲ್ಲಿ ನೋಡಿದ್ದಾರೆ.
  2. ಮಗಳ ಬೆನ್ನ ಹಿಂದೆಯೇ ಗಾಯತ್ರಿ ಪ್ರಭಾಕರ್‌ ಹಾಜರಿದ್ದು , ಸೆಟ್‌ಗಳಲ್ಲಿ ಕಿರಿಕಿರಿ ಮಾಡುತ್ತಾರೆ ಅನ್ನುವುದು ಹಳೆಯ ಆರೋಪ. ಅನು ಮನದೊಳಗೆ ಕೃಷ್ಣ ಕುಮಾರ್‌ ಸಂದಮೇಲೆ, ಅಂಗರಕ್ಷಕರ ಪಾತ್ರ ಬದಲಾಗಿದೆ. ಸೆಟ್‌ಗಳಲ್ಲಿ ಅನು ಜೊತೆಗೆ ಕೃಷ್ಣಕುಮಾರ್‌ ಅವರನ್ನೂ ಆದರಿಸಬೇಕಾದ ಅನಿವಾರ್ಯತೆ ನಿರ್ಮಾಪಕರಿಗೆ. ಲೇಟೆಸ್ಟ್‌ ಸುದ್ದಿಯೆಂದರೆ, ಈಚೆಗೆ ಕೃಷ್ಣಕುಮಾರ್‌ ಸೆಟ್‌ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿಲ್ಲವಂತೆ. ಜಯಂತಿ ಮಗನ ಕಿವಿ ಹಿಂಡಿರಬಹುದೇ?

ವಾರ್ತಾ ಸಂಚಯ

ಮುಖಪುಟ / ಸ್ಯಾಂಡಲ್‌ವುಡ್‌

Kannada Photos

Go to : More Photos

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada

X