»   » ಮದುವೆಗೆ ನೀವು ಸಿದ್ಧರಾಗಿದ್ದೀರಾ?

ಮದುವೆಗೆ ನೀವು ಸಿದ್ಧರಾಗಿದ್ದೀರಾ?

Posted By: Staff
Subscribe to Filmibeat Kannada

'ಶಾಪ" ಚಿತ್ರದ ನಟನೆಗಾಗಿ ರಾಜ್ಯ ಸರ್ಕಾರದ ಶ್ರೇಷ್ಠ ನಟಿ ಪ್ರಶಸ್ತಿಗೆ ಪಾತ್ರರಾಗಿರುವ ಅನು ಪ್ರಭಾಕರ್‌ ಈಗ ಏನು ಮಾಡುತ್ತಿದ್ದಾರೆ? ಸ್ವಲ್ಪ ಜ್ವರ ಬಂದು ಮನೆಯಲ್ಲಿ ಮಲಗಿರುವುದು ಬಿಟ್ಟರೆ, ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ ಎಂದು ಅವರ ಮುಂದಿನ ಸಿನಿಮಾಗಳ ಲಿಸ್ಟು ನೀಡಬಹುದಾದರೂ ಅಸಲು ವಿಷಯ ಅದಲ್ಲ . ಇನ್ನೂ ಪ್ರಶಸ್ತಿಯ ಖುಷಿಯಲ್ಲಿರುವಾಗಲೇ ಹಸೆಮಣೆಯ ರೋಮಾಂಚನಕ್ಕೆ ಅನು ಸಿದ್ಧರಾಗುತ್ತಿದ್ದಾರಂತೆ. ಈ ರೋಮಾಂಚನಕ್ಕೆ ಸ್ಯಾಂಡಲ್‌ವುಡ್‌ ಹಾಗೂ ಪ್ರೇಕ್ಷಕ ಸಿದ್ಧರಾಗಿರುವರೇ ಅನ್ನುವುದು ಬೇರೆಯ ವಿಷಯ.

ಒಟ್ಟಿನಲ್ಲಿ ಅನು ಪ್ರಭಾ-ಕ-ರ್‌ ಮದು-ವೆ-ಯಾ-ಗು-ತ್ತಿ-ದ್ದಾ-ರೆ ! ಅದೂ ಅಮೇ-ರಿ-ಕಾ-ದ-ಲ್ಲಿ ನೆಲೆ-ಸಿ-ರು-ವ ಹುಡು-ಗ-ನ-ನ್ನು ! ಈ ಸುದ್ದಿಯಾಂದಿಗೆ ಕನ್ನಡ ನಟಿಯರ ಈ ಸಾಲಿನ ಕಲ್ಯಾಣೋತ್ಸವ ಸುಗ್ಗಿಯಲ್ಲಿ ಅನು ಕೂಡ ಸೇರ್ಪಡೆಯಾದಂತಾಯಿತು.

ಅನು ಕೈ ಹಿಡಿಯಲಿರುವ ಹುಡುಗ ಸಾಫ್ಟ್‌ವೇರ್‌ ಇಂಜಿನಿಯರ್‌. ಐಟಿ ಸ್ಲೋಡೌನ್‌ ನಡುವೆಯೂ ಅಮೇರಿಕಾದಲ್ಲಿ ಉಳಿದಿರುವ ಹುಡುಗನ ಕೈ ಹಿಡಿಯುವುದರೊಂದಿಗೆ ಅನು ಕೂಡ ಅಮೇರಿಕಾ ವಾಸಿಯಾಗಲಿದ್ದಾರೆ. ಅಲ್ಲಿಗೆ ಸ್ಯಾಂಡಲ್‌ವುಡ್‌ ಭರವಸೆಯ ನಾಯಕಿಯಾಬ್ಬಳನ್ನು ಕಳೆದುಕೊಳ್ಳುವುದು ಹೆಚ್ಚೂ ಕಡಿಮೆ ಖಚಿತವಾಗಿದೆ.

ಅನು ಪ್ರಭಾಕರ್‌ ಮದುವೆಯ ಸುದ್ದಿ ಹೊರಬಿದ್ದಿರುವುದೇ ಅಮ್ಮ ಗಾಯತ್ರಿ ಪ್ರಭಾಕರ್‌ ಕಡೆಯಿಂದ. ಕಿರುತೆರೆ, ಬೆಳ್ಳಿತೆರೆಗಳಲ್ಲಿ ಆಗೊಮ್ಮೆ ಈಗೊಮ್ಮೆ ಪೋಷಕ ಪಾತ್ರಗಳಲ್ಲಿ ಮಿಂಚಿದ ಗಾಯತ್ರಿ ಪ್ರಭಾಕರ್‌ ನೆಲೆ ನಿಂತದ್ದು ಕಂಠದಾನ ಕಲಾವಿದೆಯಾಗಿ . ಸರ್ವಮಂಗಳಾ ನಂತರ ಕನ್ನಡದ ಬೇಡಿಕೆಯ ಕಂಠದಾನ ಕಲಾವಿದೆಯಾಗಿ ಗಾಯತ್ರಿ ರೂಪುಗೊಂಡಿದ್ದರು. ಗುಂಡು ಸಿಡಿದಂತೆ ಸ್ಪಷ್ಟವಾಗಿ ಮಾತನಾಡುವ ಅವರು ಕನ್ನಡ ಚಿತ್ರೋದ್ಯಮ ಕಂಡ ಅತ್ಯುತ್ತಮ ಕಂಠದಾನ ಕಲಾವಿದರ ಸಾಲಿನಲ್ಲಿ ನಿಲ್ಲುವ ಸಾಮರ್ಥ್ಯವುಳ್ಳವರು. ಅನು ಅವರ ಡೈಲಾಗ್‌ ಡೆಲಿವರಿ ಕಂಡ ಅನೇಕರು ಮಗಳನ್ನು ತಾಯಿಯಾಂದಿಗೆ ಹೋಲಿಸಿ (ರಾಜ್‌ ಜೊತೆ ಮಕ್ಕಳನ್ನು ಹೋಲಿಸಿದಂತೆ) ನಿರಾಶರಾದದ್ದೂ ಉಂಟು. ಎಷ್ಟೋ ಆಮದು ನಟಿಯರ ಅಭಿನಯ ಚೆನ್ನ ಅನಿಸಲಿಕ್ಕೆ ಅವರ ಸೌಂದರ್ಯಕ್ಕಿಂತ, ಹಿನ್ನೆಲೆಯಲ್ಲಿ ನಿಂತ ಗಾಯತ್ರಿ ಅವರ ಕಂಠವೂ ಕಾರಣ. ಆದರೆ, ಅವರೇನಿದ್ದರೂ ಸೈಡ್‌ವಿಂಗ್‌ನಲ್ಲೇ ತೃಪ್ತಿಪಟ್ಟುಕೊಂಡವರು.

'ಹೃದಯಾ ಹೃದಯಾ" ಮೂಲಕ ಮಗಳು ಅನು ಸಿನಿಮಾ ನಟಿಯಾಗುವುದರೊಂದಿಗೆ ಗಾಯತ್ರಿಯವರ ಕಂಠ ಬಂದಾಗಿತ್ತು . ಮಗಳು ನಾಯಕಿಯಾದ ಮಗಳ ಬೆಂಗಾವಲ ಕಣ್ಣಾಗಿ ಕಂಠದಾನ ಕಲಾವಿದೆ ಬದಲಾಗಿದ್ದರು. ಅನು ಎನ್ನುವ ಹೊಸ ಪ್ರತಿಭೆಯ ಆಗಮನದಿಂದ ಪುಳಕಗೊಂಡ ಸ್ಯಾಂಡಲ್‌ವುಡ್‌ ಅದ್ಭುತ ಕಲಾವಿದೆಯ ಕಂಠ ಮೂಕವಾದ ಕುರಿತು ಅಷ್ಟಾಗಿ ಚಿಂತಿಸಲೇ ಇಲ್ಲ .

ಈಗ ಮಗಳ ಮದುವೆಯ ನಂತರ ಗಾಯತ್ರಿ ಪ್ರಭಾಕರ್‌ ಮತ್ತೆ ಮಾತನಾಡಲಿಕ್ಕೆ ಶುರು ಹಚ್ಚಿಕೊಳ್ಳುತ್ತಾರಂತೆ. ಅನು ನಿರ್ಗಮನ- ಗಾಯತ್ರಿ ಆಗಮನ ಅನ್ನುವುದು ಅನಿವಾರ್ಯವಾಗಿರುವಂತೆಯೇ, ಸ್ಯಾಂಡಲ್‌ವುಡ್‌ ತಾನೇ ಬರೆದುಕೊಂಡ ನಿಯಮವೂ ಹೌದು.

ಮದುವೆಯಿಂದ ಜೀವನದಲ್ಲಿ ಸೆಟ್ಲ್‌ ಆದ ಖುಷಿಯ ಅನುಭವಕ್ಕೆ ಒಡ್ಡಿಕೊಳ್ಳಲು ಸಿದ್ಧವಾಗುತ್ತಿರುವ 'ಅನು ಮದುವೆ" ಸ್ಯಾಂಡಲ್‌ವುಡ್‌ ಪಾಲಿಗೆ ತಾತ್ಕಾಲಿಕವಾದರೂ ಹೊಡೆತ ಎನ್ನಿಸುವುದು ಖಚಿತ.  ಹಿರಿಯ ನಟಿಯಾಗುತ್ತಿದ್ದಾರೆ. ಶ್ರುತಿ ಅಮ್ಮನಾಗುತ್ತಿದ್ದಾರೆ. ಸುಧಾರಾಣಿ ಹೆಚ್ಚೂ ಕಡಿಮೆ ನಿವೃತ್ತಿಯ ಅಂಚಿನಲ್ಲಿದ್ದಾರೆ. ವಿಜಯಲಕ್ಷ್ಮಿಯನ್ನು ಸ್ಯಾಂಡಲ್‌ವುಡ್‌ ನಿರ್ಮಾಪಕರೇ ದೂರವಿರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅನು ಪ್ರಭಾಕರ್‌ ಅವರ 'ಅಕಾಲಿಕ ನಿವೃತ್ತಿ "ಸ್ಯಾಂಡಲ್‌ವುಡ್‌ ಪಾಲಿಗೆ ಭಾರೀ ಹೊಡೆತವೇ.

ಮದುವೆ ಎನ್ನುವುದು ಅನು ಅವರಿಗೆ ವೈಯಕ್ತಿಕ ನಷ್ಟವೂ ಹೌದೆನ್ನುವುದು ವಿಪರ್ಯಾಸವಾದರೂ, ಸತ್ಯ. ವೃತ್ತಿಯ ಉತ್ತುಂಗದಲ್ಲಿರುವಾಗ ಮದುವೆಯಾಗುವ ನಟಿಯರು ಕಡಿಮೆ. ಶಾಪ ಚಿತ್ರದ ಮೂಲಕ ಈಗಷ್ಟೇ ಕಲಾವಿದೆ ಅನ್ನಿಸಿಕೊಂಡಿರುವ ಅನು ಪ್ರಭಾಕರ್‌, ಕವಿತಾ ಲಂಕೇಶ್‌ರ ಅಲೆಮಾರಿ ಸಿನಿಮಾದ ಮೂಲಕ ಕಲಾವಿದೆಯಾಗಿ ಮತ್ತೊಂದು ಮೆಟ್ಟಿಲು ಹತ್ತಿದ್ದರು. ಅಲೆಮಾರಿಯಲ್ಲಿನ ಲಂಬಾಣಿ ಹುಡುಗಿಯ ಪಾತ್ರಕ್ಕೆ ಪ್ರಶಸ್ತಿಯ ನಿರೀಕ್ಷೆಯೂ ಇತ್ತು . ಆದರೆ, ಅನು ಯಶಸ್ಸಿನ ಎತ್ತರದಲ್ಲಿರುವಾಗಲೇ ಸಿನಿಮಾ ನಂಟು ಕಳಕೊಳ್ಳುವ ಯೋಚನೆಯಲ್ಲಿದ್ದಾರೆ. ಅದು ಸರಿಯೋ, ತಪ್ಪೋ ಎನ್ನುವ ಪ್ರಶ್ನೆಯನ್ನು ಔಪಚಾರಿಕವಾಗುಳಿಸಿ, ಹೊಸ ಹೊಸಿತಿಲ ತುಳಿಯುತ್ತಿರುವ ಅವರಿಗೆ ಶುಭ ಹಾರೈಸುವ. ಅನು ಅವರ ಅಮೇರಿಕಾ ವಾಸ ಸುಖಕರವಾಗಿರಲಿ. ಹಿರಿಯ ನಟಿಯರು ಅವರಿಗೆ ಮಾದರಿಯಾಗದಿರಲಿ.

English summary
Kannada heroine Anu Prabhakar all set to marry a guy from sillicon valley ?
Please Wait while comments are loading...

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada