ವಯಸ್ಸಿನ ಬಗ್ಗೆ ಅಣುಕಿಸಿದವನಿಗೆ ತಿರುಗೇಟು ನೀಡಿದ ಅನು ಪ್ರಭಾಕರ್

ಮಗು ಆದ ಬಳಿಕ ನಟಿ ಅನು ಪ್ರಭಾಕರ್ ಯಾವುದೇ ಹೊಸ ಸಿನಿಮಾ ಕೈಗೆತ್ತಿಕೊಂಡಿರಲಿಲ್ಲ. ಕೊನೆಯದಾಗಿ 'ಅನುಕ್ತ' ಚಿತ್ರದಲ್ಲಿ ಅನು ಪ್ರಭಾಕರ್ ಕಾಣಿಸಿಕೊಂಡಿದ್ದರು. ಮಗು ಆಗುವುದಕ್ಕೂ ಮುಂಚೆ ಈ ಸಿನಿಮಾ ಶೂಟಿಂಗ್ ಮುಗಿಸಿದ್ದರು ಅನು. ಕಳೆದ ವರ್ಷ ಈ ಚಿತ್ರ ತೆರೆಕಂಡಿತ್ತು.

ಮಗುವಿನ ಆರೈಕೆಯಲ್ಲಿರುವ ಅನು ಪ್ರಭಾಕರ್ ಮತ್ತೆ ಯಾವಾಗ ಬಣ್ಣ ಹಚ್ಚುತ್ತಾರೆ ಎಂದು ಅಭಿಮಾನಿಗಳು ಕಾಯ್ತಿದ್ದರು. ನಿರೀಕ್ಷೆಯಂತೆ ಅನು ಪ್ರಭಾಕರ್ ಬೆಳ್ಳಿತೆರೆಗೆ ಕಂಬ್ಯಾಕ್ ಮಾಡಲು ಸಜ್ಜಾದರು. ಈಗಾಗಲೇ ಒಂದೆರಡು ಪ್ರಾಜೆಕ್ಟ್ ಸಹಿ ಮಾಡಿರುವ ಅನು ಇತ್ತೀಚಿಗಷ್ಟೆ ಫೋಟೋವೊಂದು ಶೇರ್ ಮಾಡಿ ಸಂತಸ ಹಂಚಿಕೊಂಡಿದ್ದರು.

ಆದರೆ, ಆ ಫೋಟೋಗೆ ವ್ಯಕ್ತಿಯೊಬ್ಬ ಕಾಲೆಳೆದು ಟೀಕೆ ಮಾಡಿದ್ದಾನೆ. ಅದಕ್ಕೆ ಅನು ಕೂಡ ಪ್ರತಿಕ್ರಿಯಿಸಿದ್ದು, ಖಾರವಾಗಿ ಉತ್ತರಿಸಿದ್ದಾರೆ. ಮುಂದೆ ಓದಿ...

ಮತ್ತೆ ಕ್ಯಾಮೆರಾ ಮುಂದೆ...!

ಮತ್ತೆ ಕ್ಯಾಮೆರಾ ಮುಂದೆ...!

ಸೀರೆಯಲ್ಲಿ ಕಾಣಿಸಿಕೊಂಡಿದ್ದ ಫೋಟೋವೊಂದನ್ನು ಟ್ವಿಟ್ಟರ್ ನಲ್ಲಿ ಶೇರ್ ಮಾಡಿರುವ ಅನು ಪ್ರಭಾಕರ್ ''ಮತ್ತೆ ಕ್ಯಾಮೆರಾ ಮುಂದೆ...''ಎಂದು ಕ್ಯಾಪ್ಷನ್ ಹಾಕಿ ಸ್ಮೈಲಿ ಎಮೋಜಿ ಹಾಕಿದ್ದಾರೆ. ಈ ಪೋಸ್ಟ್ ಗೆ ವ್ಯಕ್ತಿಯೊಬ್ಬ ಅಣುಕಿಸಿ ಕಾಮೆಂಟ್ ಮಾಡಿದ್ದಾರೆ.

ಈಗ ವಯಸ್ಸಾಗಿದೆ ಬಿಡಿ

ಈಗ ವಯಸ್ಸಾಗಿದೆ ಬಿಡಿ

'ಮತ್ತೆ ಕ್ಯಾಮೆರಾ ಮುಂದೆ...' ಅಂದ್ರೆ ಮತ್ತೆ ಸಿನಿಮಾದಲ್ಲಿ ನಟಿಸುತ್ತಿದ್ದೇನೆ ಎಂದು ಸಂತಸ ಹಂಚಿಕೊಂಡಿರುವ ಅನು ಪ್ರಭಾಕರ್ ಗೆ ವ್ಯಕ್ತಿಯೊಬ್ಬ ''ಈಗ ಸ್ವಲ್ಪ ವಯಸ್ಸಾಗಿದೆ ಬಿಡಿ ಸಾಕು'' ಎಂದು ಕಾಲೆಳೆದಿದ್ದಾನೆ.

ನೀವು ನನ್ನ ಸಿನಿಮಾ ನೋಡುವುದು ಬೇಡ ಬಿಡಿ

ನೀವು ನನ್ನ ಸಿನಿಮಾ ನೋಡುವುದು ಬೇಡ ಬಿಡಿ

ಅಣುಕಿಸಿ ಕಾಮೆಂಟ್ ಮಾಡಿದ ವ್ಯಕ್ತಿಗೆ ಉತ್ತರಿಸಿದ ಅನು ಪ್ರಭಾಕರ್ ''ವಯಸ್ಸು ಆದ್ರೆ ಕೆಲಸ ನಿಲ್ಲಿಸಬೇಕಾ ಮಧು ...?? ನೀವು ನನ್ನ ಸಿನಿಮಾ ನೋಡೋ ಅವಶ್ಯಕತೆ ಇಲ್ಲ ಬಿಡಿ ...!!! ಕಲಾವಿದರಾಗಿ ನಮ್ಮನ್ನಾ ಇಷ್ಟಾ ಪಡೋರು ನೋಡತಾರೆ!'' ಎಂದು ತಿರುಗೇಟು ನೀಡಿದ್ದಾರೆ.

ಅನು ಬೆಂಬಲಕ್ಕೆ ನಿಂತ ಅಭಿಮಾನಿಗಳು

ಅನು ಬೆಂಬಲಕ್ಕೆ ನಿಂತ ಅಭಿಮಾನಿಗಳು

ಈ ಟ್ವೀಟ್ ಬಳಿಕ ನೆಟ್ಟಿಗರು ಅನು ಪ್ರಭಾಕರ್ ಬೆಂಬಲಕ್ಕೆ ನಿಂತಿದ್ದಾರೆ. ಇಂತವರ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡಿ ಎಂದು ಸಪೋರ್ಟ್ ಮಾಡಿದ್ದಾರೆ. ''ಕಲೆಗೆ ಮತ್ತು ಕಲಾವಿದನಿಗೆ ಸಾವಿಲ್ಲ. ನೀವು ಚಿತ್ರರಂಗಕ್ಕೆ ಬರಬೇಕು ಮೇಡಂ. ಚಿಕ್ಕವನಿದ್ದಾಗ ನಿಮ್ಮ ಶ್ರೀರಸ್ತು ಶುಭಮಸ್ತು ತುಂಬಾ ಇಷ್ಟಪಟ್ಟಿದ್ದೆ. ದೊಡ್ಡವನಾದಾಗ ಸವಾರಿ ಇಷ್ಟಪಟ್ಟೆ. ನೀವು ಮತ್ತೆ ಚಿತ್ರ ಮಾಡಬೇಕು, ಪರದೆ ಮೇಲೆ ಬರಬೇಕು. ಇದೇ ನಮ್ಮ ಹಾರೈಕೆ. ಶುಭವಾಗಲಿ'' ಎಂದು ಒಬ್ಬರು ಟ್ವೀಟ್ ಮಾಡಿದ್ದಾರೆ.

ನೀವು ನಟಿಸಿ ಆಲ್ ದಿ ಬೆಸ್ಟ್

ನೀವು ನಟಿಸಿ ಆಲ್ ದಿ ಬೆಸ್ಟ್

''ಸರಿಯಾಗಿ ಹೇಳಿದ್ದೀರಿ ಮೇಡಂ... ನಮ್ಮ ಜನಕ್ಕೆ ಹೀರೋ ಮುಖದ ಮೇಲೆ ನೆರಿಗೆ ಬಂದ್ರೂ, ತಲೆ ಕೂದಲು ಬೆಳ್ಳಗಾದ್ರೂ, ಮಗಳ ವಯಸ್ಸಿನ ನಾಯಕಿ ಜೊತೆ ನಟಿಸಿದ್ರು ಇಷ್ಟ...ಅದೇ ನಾಯಕಿಯರು ಮದುವೆ ಆದಕೂಡಲೇ ವಯಸ್ಸಾಯ್ತು ಅಂತಾರೆ... ನಾಯಕಿಯ ವಯಸ್ಸಿಗೆ ಮಾತ್ರ ಬೆಲೆನಾ.. ಕಲೆಗೆ ಬೆಲೆಯೇ ಇಲ್ವಾ... ಏನ್ ಜನಾನೋ...ನೀವು ನಟಿಸಿ,all the best..'' ಎಂದು ಮತ್ತೊಬ್ಬರು ಬೆಂಬಲಿಸಿದ್ದಾರೆ.

ನೀವು ತಲೆ ಕೆಡಿಸ್ಕೊಬೇಡಿ ಮೇಡಂ

ನೀವು ತಲೆ ಕೆಡಿಸ್ಕೊಬೇಡಿ ಮೇಡಂ

''ಕಲಾವಿದರಿಗೆ ಗೌರವ ಕೊಡಬೇಕು, ಅವರ ವಯಸ್ಸಿನ ಬಗ್ಗೆ ನಿನಗೇಕೆ ಚಿಂತೆ, ಕರ್ನಾಟಕ ಜನತೆಯನ್ನ ತಮ್ಮ ಅಮೂಲ್ಯವಾದ ನಟನೆ ಮುಕಾಂತರ ರಂಜಿಸುತ್ತಿದ್ದರೆ, ನೀನು ಧನ್ಯವಾದ ಹೇಳು ಅದು ಬಿಟ್ಟು, ನಿಮ್ಮ ಕುಟುಂಬದವರು ಇದ್ದಿದ್ದರೆ ಹೀಗೆ ಪ್ರಶ್ನೆ ಮಾಡುತ್ತೀರಾ. ಅವಿವೇಕಿತನದ ಮಾತು, ನೀವು ತಲೆ ಕೆಡಿಸ್ಕೊಬೇಡಿ ಮೇಡಂ.'' ಎಂದು ಇನ್ನೊಬ್ಬರು ಬೆಂಬಲಿಸಿದ್ದಾರೆ.

ಸಾರಾ ಅಬೂಬಕ್ಕರ್ ಕಾದಂಬರಿಯಲ್ಲಿ ನಟನೆ!

ಸಾರಾ ಅಬೂಬಕ್ಕರ್ ಕಾದಂಬರಿಯಲ್ಲಿ ನಟನೆ!

ಸದ್ಯ ನೆನಪಿರಲಿ ಪ್ರೇಮ್ ನಟಿಸುತ್ತಿರುವ 25ನೇ ಚಿತ್ರ 'ಪ್ರೇಮಂ ಪೂಜ್ಯಂ' ಚಿತ್ರದಲ್ಲಿ ವಿಶೇಷ ಪಾತ್ರ ಮಾಡುತ್ತಿರು ಅನು ಪ್ರಭಾಕರ್ ಡಾಕ್ಟರ್ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಇದಾದ ಬಳಿಕ ಬರಹಗಾರ್ತಿ ಸಾರಾ ಅಬೂಬಕ್ಕರ್ ಅವರ ಕಾದಂಬರಿ ಚಿತ್ರ 'ಸಾರಾವಜ್ರ'ದಲ್ಲಿ ನಟಿಸುತ್ತಿದ್ದಾರೆ.

More from Filmibeat

English summary
Kannada actress Anu Prabhakar gave strong reply to commenters, who teased her age.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X