For Quick Alerts
  ALLOW NOTIFICATIONS  
  For Daily Alerts

  'ಶಾಸ್ತ್ರಿ' ನಟಿ ಮಾನ್ಯ ಸಾಧನೆಗೆ ಅನು ಪ್ರಭಾಕರ್ ಮೆಚ್ಚುಗೆ

  |

  ಕನ್ನಡ ನಟಿ ಮಾನ್ಯ ಇತ್ತೀಚಿಗಷ್ಟೆ ತಮ್ಮ ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕಿದ್ದರು. ಓದು, ಶಿಕ್ಷಣದ ಮಹತ್ವ ಎಂತಹದ್ದು, ಕಷ್ಟದ ಸಮಯದಲ್ಲಿ ಅದನ್ನು ನಿಭಾಯಿಸಿದ ರೀತಿ, ಬಾಲ್ಯದಲ್ಲಿ ಕಳೆದುಕೊಂಡ ಶಿಕ್ಷಣವನ್ನು ಮತ್ತೆ ಪಡೆದು ಸಾಧಿಸಿದ ಅನುಭವ ಹೇಳಿಕೊಂಡಿದ್ದರು.

  ನಟಿ ಮಾನ್ಯ ನಾಯ್ಡು ಅವರು ಈ ಪೋಸ್ಟ್‌ಗೆ ನಟಿ ಅನು ಪ್ರಭಾಕರ್ ಪ್ರತಿಕ್ರಿಯಿಸಿದ್ದು, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ''ನನ್ನ ಸ್ನೇಹಿತೆಯ ಅದ್ಭುತ ಯಶಸ್ಸಿನ ಕಥೆ ಕೇಳಿ. ನಾವಿಬ್ಬರು ವರ್ಷ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ವಿ. ಅಲ್ಲಿಂದ ಸ್ನೇಹಿತರಾದ್ವಿ. ಪ್ರತಿಭಾನ್ವಿತ ಹಾಗೂ ಯಶಸ್ವಿ ನಟಿಯಾಗಿದ್ದ ಯಶಸ್ವಿ ವೃತ್ತಿಗೇರುವ (ವೃತ್ತಿ-VP in CREDIT SUISSE) ಮೂಲಕ ಅಸಾಧ್ಯವೆನ್ನುವುದು ಸಾಧಿಸಿ ತೋರಿಸಿದ್ದಾರೆ'' ಎಂದು ಅಭಿನಂದಿಸಿದ್ದರು.

  ಜೀವನ ಎಂಬ ಸಾಗರದಲ್ಲಿ ತಾನು ಎದುರಿಸಿದ ಕಷ್ಟ ಹಂಚಿಕೊಂಡ 'ಶಾಸ್ತ್ರಿ' ನಾಯಕಿ ಮಾನ್ಯಜೀವನ ಎಂಬ ಸಾಗರದಲ್ಲಿ ತಾನು ಎದುರಿಸಿದ ಕಷ್ಟ ಹಂಚಿಕೊಂಡ 'ಶಾಸ್ತ್ರಿ' ನಾಯಕಿ ಮಾನ್ಯ

  ''ತನ್ನ ಬುದ್ಧಿವಂತಿಕೆಯನ್ನು ಖಂಡಿಸುವ ಒಬ್ಬ ವ್ಯಕ್ತಿಯು ಅವಳನ್ನು ಓದಲು ಮಾಡಲು ಪ್ರೇರೇಪಿಸಿದರು ಎಂದು ಅವಳು ಒಮ್ಮೆ ಹೇಳಿದ್ದಳು. ಆ ಪ್ರೇರಣೆಯ ಮಾನ್ಯ ಸಾಧನೆಗೆ ಕಾರಣವಾಯಿತು. ತನ್ನನ್ನು ಸಾಬೀತುಪಡಿಸಿಕೊಂಡು, ಆ ವ್ಯಕ್ತಿಯ ಅಭಿಪ್ರಾಯ ತಪ್ಪು ಎಂದು ಸಾಬೀತುಪಡಿಸಿದಳು'' ಎಂದು ತಿಳಿಸಿದ್ದಾರೆ.

  ''ನಟಿಯರು ಅಂದ್ರೆ ಕೇವಲ ಸೌಂದರ್ಯ ಮಾತ್ರವಲ್ಲ, ಅವರು ಬುದ್ದಿವಂತರು ಸಹ. ನಿನ್ನ ಸಾಧನೆಗೆ ಹ್ಯಾಟ್ಸಾಪ್, ನಿನಗೆ ಮತ್ತಷ್ಟು ಶಕ್ತಿ ಸಿಗಲಿ'' ಎಂದು ಅನು ಪ್ರಭಾಕರ್ ಶುಭಹಾರೈಸಿದ್ದಾರೆ. ಅನು ಪ್ರಭಾಕರ್ ಅವರ ಆತ್ಮೀಯ ಪ್ರತಿಕ್ರಿಯೆಗೆ ಮಾನ್ಯ ಧನ್ಯವಾದ ತಿಳಿಸಿದ್ದಾರೆ.

  Anu Prabhakar React About Manya Naidu Success Story
  ಪ್ರೇಮ್, ರಚಿತಾ ರಾಮ್ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡ ರಾಣಾ | Filmibeat Kannada

  ಪ್ರಸ್ತುತ, ನಟಿ ಮಾನ್ಯ ಅವರು ನ್ಯೂಯಾರ್ಕ್‌ನಲ್ಲಿ ಪತಿ ಹಾಗೂ ಮಗಳ ಜೊತೆ ನೆಲೆಸಿದ್ದು, ಅಲ್ಲಿಯೇ ಉದ್ಯೋಗ ಸಹ ಮಾಡುತ್ತಿದ್ದಾರೆ.

  English summary
  Kannada Actress Manya Naidu Shares her Life story and her struggling days in instagram. then, Anu Prabhakar React About Manya Naidu Success Story.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X