For Quick Alerts
  ALLOW NOTIFICATIONS  
  For Daily Alerts

  ಅರ್ಜುನ್ ಸರ್ಜಾ ನಿಶ್ಚಿತಾರ್ಥ ಫೋಟೋ: ಈ ಚಿತ್ರದಲ್ಲಿರುವ ಮಕ್ಕಳು ಯಾರೆಂದು ಗುರುತಿಸಿ?

  |

  ಆಕ್ಷನ್ ಕಿಂಗ್ ಅರ್ಜುನ್ ಸರ್ಜಾ ನಟಿ ನಿವೇದಿತಾ ಅವರನ್ನು 1988ರಲ್ಲಿ ವಿವಾಹವಾದರು. ಕನ್ನಡದ ಹಿರಿಯ ನಟ ರಾಜೇಶ್ ಅವರ ಮಗಳು ಆಶಾ ರಾಣಿ (ನಿವೇದಿತಾ) ಜೊತೆ ಹಿರಿಯ ಸಮ್ಮುಖದಲ್ಲಿ ದಾಂಪತ್ಯ ಜೀವನ ಆರಂಭಿಸಿದ್ದರು.

  ಮೂರು ದಶಕಗಳ ಸುಖಕರ ದಾಂಪತ್ಯ ನಡೆಸಿರುವ ಅರ್ಜುನ್ ಸರ್ಜಾ ಮತ್ತು ನಿವೇದಿತಾ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದು, ಐಶ್ವರ್ಯ ಸರ್ಜಾ ಹಾಗೂ ಅಂಜನಾ ಸರ್ಜಾ. ಐಶ್ವರ್ಯ ನಾಯಕಿ ನಟಿಯಾಗಿ ಚಿತ್ರರಂಗದಲ್ಲಿ ಸಕ್ರಿಯರಾಗಿದ್ದಾರೆ.

  ಅಪ್ಪ..ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ: ಹುಟ್ಟುಹಬ್ಬದ ದಿನ ಅನು ಪ್ರಭಾಕರ್ ಭಾವುಕ ಪತ್ರಅಪ್ಪ..ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ: ಹುಟ್ಟುಹಬ್ಬದ ದಿನ ಅನು ಪ್ರಭಾಕರ್ ಭಾವುಕ ಪತ್ರ

  ಇದೀಗ, ಕನ್ನಡ ನಟಿ ಅನು ಪ್ರಭಾಕರ್ ಅವರು ಅರ್ಜುನ್ ಸರ್ಜಾ ಅವರ ನಿಶ್ಚಿತಾರ್ಥ ಫೋಟೋವೊಂದನ್ನು ಹಂಚಿಕೊಂಡಿದ್ದು, ದಿವಂಗತ ನಟ ಚಿರು ಸರ್ಜಾರನ್ನು ಸ್ಮರಿಸಿದ್ದಾರೆ.

  ''ನನ್ನ ಅಕ್ಕ ನಿವೇದಿತಾ ಹಾಗು ಭಾವ ಅರ್ಜುನ್ ಸರ್ಜಾ ಅವರ ನಿಶ್ಚಿತಾರ್ಥದ ಫೋಟೋ.. ಭಾವನ ತೊಡೆಮೇಲೆ ಚಿರು ಸರ್ಜಾ ಅಕ್ಕನ ತೊಡೆ ಮೇಲೆ ನಾನು. ಅಮೂಲ್ಯವಾದ ಫೋಟೋ! ಚಿರು ನೀವು ಎಲ್ಲಿದ್ದರೂ ನೀವು ಸಂತೋಷದಿಂದ ಮತ್ತು ಶಾಂತಿಯುತವಾಗಿರುತ್ತೀರಿ ಎಂದು ನಾನು ಭಾವಿಸುತ್ತೇನೆ'' ಎಂದು ಟ್ವೀಟ್ ಮಾಡಿದ್ದಾರೆ.

  ವಯಸ್ಸಿನ ಬಗ್ಗೆ ಅಣುಕಿಸಿದವನಿಗೆ ತಿರುಗೇಟು ನೀಡಿದ ಅನು ಪ್ರಭಾಕರ್ವಯಸ್ಸಿನ ಬಗ್ಗೆ ಅಣುಕಿಸಿದವನಿಗೆ ತಿರುಗೇಟು ನೀಡಿದ ಅನು ಪ್ರಭಾಕರ್

  ಮತ್ತೆ ಸದ್ದು ಮಾಡಿದ ಮೀ ಟು | Donal Bisht | Filmibeat Kannada

  ಸ್ವತಃ ಅನು ಪ್ರಭಾಕರ್ ಹೇಳಿರುವಂತೆ ಈ ಫೋಟೋದಲ್ಲಿ ನಿವೇದಿತಾ ಮೇಲೆ ತೊಡೆ ಮೇಲೆ ಕುಳಿತಿರುವುದು ಅನು ಪ್ರಭಾಕರ್. ಅರ್ಜುನ್ ಸರ್ಜಾ ತೊಡೆ ಮೇಲೆ ಕುಳಿತಿರುವುದು ಚಿರು ಸರ್ಜಾ. ಇಂದು ಚಿರು ಸರ್ಜಾ ಬದುಕಿಲ್ಲ. ಹಾಗಾಗಿ, ಚಿರು ನೆನಪಿನಾರ್ಥ ಈ ಫೋಟೋ ಶೇರ್ ಮಾಡಿದ್ದಾರೆ ಅನು ಪ್ರಭಾಕರ್.

  English summary
  Kannada actress Anu Prabhakar shared Arjun Sarja and Niveditha engagement photos.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X