For Quick Alerts
  ALLOW NOTIFICATIONS  
  For Daily Alerts

  ತಾಯಿಯಾದ ಬಳಿಕ ಡಾಕ್ಟರ್ ಆದ ನಟಿ ಅನು ಪ್ರಭಾಕರ್

  |

  ಸ್ಯಾಂಡಲ್ ವುಡ್ ನ ನಟಿ ಅನು ಪ್ರಭಾಕರ್ ಸದ್ಯ ಮಗಳ ಲಾಲನೆ ಪಾಲನೆಯಲ್ಲಿ ಬ್ಯುಸಿಯಾಗಿದ್ದಾರೆ. ಮುದ್ದು ಮಗಳ ಆರೈಕೆ ಜೊತೆಗೆ ಅನು ಈಗ ಡಾಕ್ಟರ್ ಕೂಡ ಆಗುತ್ತಿದ್ದಾರೆ. ಅನು ಪ್ರಭಾಕರ್ ಡಾಕ್ಟರ್ ಆದ್ರ ಅಂತ ಅಚ್ಚರಿ ಪಡಬೇಡಿ. ಅವರು ಡಾಕ್ಟರ್ ಆಗಿದ್ದು ರಿಯಲ್ ಆಗಿ ಅಲ್ಲ ರೀಲ್ ಮೇಲೆ.

  ಹೌದು, ಅನು ಪ್ರಭಾಕರ್ ಮುಂದಿನ ಸಿನಿಮಾದಲ್ಲಿ ಡಾಕ್ಟರ್ ಆಗಿ ಕಣಿಸಿಕೊಳ್ಳುತ್ತಿದ್ದಾರೆ. ಅದೂ ನೆನಪಿರಲಿ ಪ್ರೇಮ್ ಸಿನಿಮಾದಲ್ಲಿ ಎನ್ನುವುದು ವಿಶೇಷ. ನೆನಪಿರಲಿ ಪ್ರೇಮ್ ಅಭಿನಯದ ಬಹು ನಿರೀಕ್ಷೆಯ 'ಪ್ರೇಮಂ ಪೂಜ್ಯಂ' ಚಿತ್ರದಲ್ಲಿ ಅನು ಪ್ರಭಾಕರ್ ವೈದ್ಯೆಯಾಗಿ ಮಿಂಚಲಿದ್ದಾರೆ.

  ಮುದ್ದು ಮಗಳಿಗೆ ನಾಮಕರಣ ಮಾಡಿದ ಅನು ಪ್ರಭಾಕರ್-ರಘು ಮುಖರ್ಜಿ ದಂಪತಿಮುದ್ದು ಮಗಳಿಗೆ ನಾಮಕರಣ ಮಾಡಿದ ಅನು ಪ್ರಭಾಕರ್-ರಘು ಮುಖರ್ಜಿ ದಂಪತಿ

  ಮಗುವಿಗೆ ಜನ್ಮ ನೀಡಿದ ಬಳಿಕ ಅನು ಪ್ರಭಾಕರ್ ಒಪ್ಪಿಕೊಳ್ಳುತ್ತಿರುವ ಮೊದಲ ಸಿನಿಮಾವಿದು. ಅನು ಪ್ರಭಾಕರ್ ಅಭಿನಯದ ಅನುಕ್ತ ಸಿನಿಮಾ ಕಳೆದ ಮೂರು ನಾಲ್ಕು ತಿಂಗಳ ಹಿಂದೆ ತೆರೆಗೆ ಬಂದಿತ್ತು. ಈಗ 'ಪ್ರೇಮಂ ಪೂಜ್ಯಂ' ಮೂಲಕ ಮತ್ತೆ ಬಣ್ಣ ಹಚ್ಚಲು ಸಜ್ಜಾಗಿದ್ದಾರೆ.

  ಅನು ಪ್ರಭಾಕರ್ ಚಿತ್ರದ ಕೊನೆಯಲ್ಲಿ ಎಂಟ್ರಿಕೊಡಲಿದ್ದಾರಂತೆ. ಕೆಲವೆ ನಿಮಿಷದ ಪಾತ್ರವಾದ್ರು ತುಂಬಾ ಪ್ರಮುಖ್ಯತೆ ಇದೆಯಂತೆ. ಈ ಪಾತ್ರದಿಂದ ಚಿತ್ರಕ್ಕೆ ಮಹತ್ವದ ತಿರುವು ಸಿಗಲಿದೆಯಂತೆ. ಹಾಗಾಗಿ ಚಿಕ್ಕಪಾತ್ರವಾದ್ರು ಒಳ್ಳೆಯ ಪಾತ್ರ ಮಾಡಿದ ಖುಷಿ ಅವರಿಗೆ ಸಿಗಲಿದೆಯಂತೆ.

  ಸದ್ಯ 'ಪ್ರೇಮಂ ಪೂಜ್ಯಂ' ಚಿತ್ರತಂಡ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇನ್ನು ಡೆಹ್ರಾಡೂನ್ ನಲ್ಲಿ ಚಿತ್ರೀಕರಣ ಮಾಡಲು ಪ್ಲಾನ್ ಮಾಡುತ್ತಿದೆ ಚಿತ್ರತಂಡ. ಅಂದ್ಹಾಗೆ ಚಿತ್ರಕ್ಕೆ ಡಾ.ರಾಘವೇಂದ್ರ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಪ್ರೇಮ್ ಗೆ ನಾಯಕಿಯಾಗಿ ಐಂದ್ರಿತಾ ರೇ ಮತ್ತು ಯುವ ಪ್ರತಿಭೆ ಬೃಂದಾ ಕಾಣಿಸಿಕೊಂಡಿದ್ದಾರೆ.

  English summary
  Kannada actress Anu Prabhakar will playing doctor in Nenapirali Prem starrer 'Premam Poojyam' film. This movie is directed by Raghavendra.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X