For Quick Alerts
  ALLOW NOTIFICATIONS  
  For Daily Alerts

  ನಟ ರಘು ಮುಖರ್ಜಿಗೆ ಶುಭಕೋರಿದ ಪತ್ನಿ ಅನು ಪ್ರಭಾಕರ್

  |

  ನವೆಂಬರ್ 19 ಅಂತಾರಾಷ್ಟ್ರೀಯ ಪುರುಷ ದಿನಾಚರಣೆ....ಈ ವಿಶೇಷ ದಿನದಂದು ನಟ ರಘು ಮುಖರ್ಜಿ ಅವರಿಗೆ ಪತ್ನಿ ಅನು ಪ್ರಭಾಕರ್ ಶುಭಾಶಯ ಕೋರಿದ್ದಾರೆ.

  ''ರಘು ಮುಖರ್ಜಿ ನನ್ನ ಹೀರೋ, ನನ್ನ ಜೊತೆಗಾರ, ನನ್ನ ಪ್ರೀತಿ, ಬೆಸ್ಟ್ ಫ್ರೆಂಡ್, ನನ್ನ ಮಗುವಿನ ತಂದೆ....ಎಲ್ಲವನ್ನು ನೀನು ಅತ್ಯುತ್ತಮವಾಗಿ ನಿಭಾಯಿಸಿದ್ದಿಯಾ. ನನ್ನ ಜೀವನದಲ್ಲಿ ಅತಿ ಮುಖ್ಯ ವ್ಯಕ್ತಿಯಾಗಿದ್ದಕ್ಕೆ ಧನ್ಯವಾದ'' ಎಂದು ಅನು ಪ್ರಭಾಕರ್ ಟ್ವೀಟ್ ಮಾಡಿದ್ದಾರೆ.

  ಅಪ್ಪ..ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ: ಹುಟ್ಟುಹಬ್ಬದ ದಿನ ಅನು ಪ್ರಭಾಕರ್ ಭಾವುಕ ಪತ್ರಅಪ್ಪ..ನಿಮ್ಮನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ: ಹುಟ್ಟುಹಬ್ಬದ ದಿನ ಅನು ಪ್ರಭಾಕರ್ ಭಾವುಕ ಪತ್ರ

  2016ರಲ್ಲಿ ನಟ ರಘು ಮುಖರ್ಜಿ ಅವರೊಂದಿಗೆ ಅನು ಪ್ರಭಾಕರ್ ವಿವಾಹವಾದರು. 2018ರಲ್ಲಿ ರಘು ಮತ್ತು ಅನು ದಂಪತಿ ಹೆಣ್ಣು ಮಗುವಿಗೆ ಜನ್ಮ ನೀಡಿದರು. ಈ ಮಗುವಿಗೆ ನಂದನ ಪ್ರಭಾಕರ್ ಮುಖರ್ಜಿ ಎಂದು ಹೆಸರಿಟ್ಟಿದ್ದಾರೆ.

  ಅನುಕ್ತ ಚಿತ್ರದಲ್ಲಿ ಕೊನೆಯದಾಗಿ ಅನು ಪ್ರಭಾಕರ್ ನಟಿಸಿದ್ದರು. ಇದೀಗ, ಅಕ್ಕ ಚಿತ್ರದಲ್ಲಿ ಅಕ್ಕಮಹಾದೇವಿ ಪಾತ್ರದಲ್ಲಿ ಅನು ಪ್ರಭಾಕರ್ ನಟಿಸುತ್ತಿದ್ದಾರೆ. ಪುನೀತ್ ರಾಜ್ ಕುಮಾರ್ ನಟನೆಯ ಜೇಮ್ಸ್ ಸಿನಿಮಾದಲ್ಲೂ ಅನು ಪ್ರಮುಖ ಪಾತ್ರವೊಂದನ್ನು ಮಾಡುತ್ತಿದ್ದಾರೆ.

  ಮುದ್ದು ಮಗಳಿಗೆ ನಾಮಕರಣ ಮಾಡಿದ ಅನು ಪ್ರಭಾಕರ್-ರಘು ಮುಖರ್ಜಿ ದಂಪತಿಮುದ್ದು ಮಗಳಿಗೆ ನಾಮಕರಣ ಮಾಡಿದ ಅನು ಪ್ರಭಾಕರ್-ರಘು ಮುಖರ್ಜಿ ದಂಪತಿ

  ತಮಿಳು ಸ್ಟಾರ್ ಡೈರೆಕ್ಟರ್ ಸಿನಿಮಾ ಮೂಲಕ ಮತ್ತೆ ಒಂದಾದ ಶಿವಣ್ಣ, ಡಾಲಿ | Filmibeat Kannada

  ರಘು ಮುಖರ್ಜಿ ಕೊನೆಯದಾಗಿ ದಯವಿಟ್ಟು ಗಮನಿಸಿ ಸಿನಿಮಾದಲ್ಲಿ ಕಾಣಿಸಿಕೊಂಡಿದ್ದರು. ಅದಾದ ಬಳಿಕ ಯಾವ ಚಿತ್ರದಲ್ಲೂ ರಘು ಬಣ್ಣ ಹಚ್ಚಿಲ್ಲ.

  English summary
  Actress Anu Prabhakar Wishes her Husband Raghu Mukherjee on the Occasion of International Men's Day.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X