For Quick Alerts
  ALLOW NOTIFICATIONS  
  For Daily Alerts

  'ಅನುಕ್ತ' ಟ್ರೈಲರ್ ಸೂಪರ್ ಹಿಟ್: ಈ ಸಿನಿಮಾದಲ್ಲೇನೋ ಸೆಳೆತ ಇದೆ

  |

  ಕೆಲವು ಚಿತ್ರದ ಟ್ರೈಲರ್ ಗಳನ್ನ ನೋಡಿದ್ರೆ ಥಿಯೇಟರ್ ಗೆ ಹೋಗೋದು ಬೇಡ ಅನಿಸುತ್ತೆ. ಈ 'ಅನುಕ್ತ' ಟ್ರೈಲರ್ ನೋಡಿದ್ಮೇಲೆ ಯಾವಾಗ ಥಿಯೇಟರ್ ಗೆ ಹೋಗ್ತೀನಿ ಅಂತ ಅನಿಸ್ತಿದೆ. ಹೌದು, 'ಅನುಕ್ತ' ಟ್ರೈಲರ್ ಬಹಳ ಚೆನ್ನಾಗಿದೆ. ಸಿನಿಮಾನೂ ಅಷ್ಟೇ ಅದ್ಭುತವಾಗಿರುತ್ತೆ ಎಂಬ ಭರವಸೆ ಮೂಡಿಸುತ್ತಿದೆ.

  'ಅನುಕ್ತ' ಟ್ರೈಲರ್ ಹೇಳುವ ಪ್ರಕಾರ ಇದೊಂದು ಕ್ರೈಂ ಥ್ರಿಲ್ಲಿಂಗ್ ಕಥೆ. ಒಂದು ಕೊಲೆ ನಡೆದಿದೆ. ಆ ಕೊಲೆಯ ರಹಸ್ಯ ಭೇದಿಸಲು ತನಿಖಾಧಿಕಾರಿಗಳು ಊರಿಗೆ ಬರ್ತಾರೆ. ಬಂದ ನಂತರ ಅವರಿಗೂ ಕೆಲವು ವಿಚಿತ್ರ ಘಟನೆಗಳು ಎದುರಾಗುತ್ತೆ. ನಿಜಕ್ಕೂ ಇದು ಕೊಲೆನಾ ಅಥವಾ ಬೇರೇ ಏನೋ ಆಗಿದ್ಯಾ ಎಂಬ ಕುತೂಹಲ, ಆತಂಕ, ಭಯ ಹುಟ್ಟಿಸುತ್ತೆ.

  ಫೆಬ್ರವರಿ 1ಕ್ಕೆ 'ಬಜಾರ್'ಗೆ ಬರ್ತಿದೆ 'ಅನುಕ್ತ' ಫೆಬ್ರವರಿ 1ಕ್ಕೆ 'ಬಜಾರ್'ಗೆ ಬರ್ತಿದೆ 'ಅನುಕ್ತ'

  ಹೀಗೆ, ರೋಚಕ ದೃಶ್ಯಗಳ ಮೂಲಕ ಸಸ್ಪೆನ್ಸ್ ಕ್ರಿಯೇಟ್ ಮಾಡಿರುವ ಅನುಕ್ತ ಟ್ರೈಲರ್ ಇತ್ತೀಚಿಗಷ್ಟೆ ರಿಲೀಸ್ ಆಗಿತ್ತು. ಟ್ರೈಲರ್ ಗೆ ಅತ್ಯುತ್ತಮ ರೆಸ್ಪಾನ್ಸ್ ಸಿಕ್ಕಿದ್ದು, ಸಾಮಾಜಿಕ ಜಾಲತಾಣದಲ್ಲಿ ಅನುಕ್ತ ಟ್ರೆಂಡಿಂಗ್ ನಲ್ಲಿದೆ.

  ಅನು ಪ್ರಭಾಕರ್, ಸಂಪತ್ ರಾಜ್, ಸಂಗೀತಾ ಭಟ್, ಕಾರ್ತಿಕ್ ಅತ್ತಾವರ್, ಕೆ ಎಸ್ ಶ್ರೀಧರ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ. ಅಶ್ವಥ್ ಸ್ಯಾಮ್ಯುಲ್ ಈ ಚಿತ್ರಕ್ಕೆ ಚಿತ್ರಕತೆ ಬರೆದು ನಿರ್ದೇಶನ ಮಾಡಿದ್ದಾರೆ.

  ಲೋ ಬಜೆಟ್ ಚಿತ್ರಕ್ಕೆ ಫ್ರೀ ಆಗಿ ಸಾಂಗ್ ಕಂಪೋಸ್ ಮಾಡ್ತಾರಾ ನೋಬಿನ್ ಪೌಲ್.? ಲೋ ಬಜೆಟ್ ಚಿತ್ರಕ್ಕೆ ಫ್ರೀ ಆಗಿ ಸಾಂಗ್ ಕಂಪೋಸ್ ಮಾಡ್ತಾರಾ ನೋಬಿನ್ ಪೌಲ್.?

  ನೋಬಿಲ್ ಪೌಲ್ ಸಂಗೀತ, ಮನೋಹರ್ ಜೋಶಿ ಛಾಯಾಗ್ರಹಣ, ಎನ್ ಎಂ ವಿಶ್ವ ಅವರ ಸಂಕಲನ, ನವೀನ್ ಶರ್ಮಾ ಮತ್ತು ಕಿರಣ್ ಶೆಟ್ಟಿ ಸಂಭಾಷಣೆ ಬರೆದಿದ್ದು ಹರೀಶ್ ಬಂಗೇರಾ ನಿರ್ಮಾಣ ಮಾಡಿದ್ದಾರೆ.

  ಸದ್ಯ ಟ್ರೈಲರ್ ನಿಂದ ಸ್ಯಾಂಡಲ್ ವುಡ್ ಅಂಗಳದಲ್ಲಿ ಸದ್ದು ಮಾಡ್ತಿರುವ ಅನುಕ್ತ ಫೆಬ್ರವರಿ 1 ರಂದು ರಾಜ್ಯಾದ್ಯಂತ ತೆರೆಕಾಣುತ್ತಿದೆ. ಹೊಸ ರೀತಿಯ ಚಿತ್ರಗಳಿಗೆ ಪ್ರೇಕ್ಷಕರು ಜೈಹಾಕರ ಹಾಕಿದ್ದು, ಈ ಚಿತ್ರವು ಅದೇ ವಿಭಾಗಕ್ಕೆ ಸೇರುತ್ತೆ ಎಂಬ ನಿರೀಕ್ಷೆ ಇದೆ.

  English summary
  Kannada actor sampath raj, anu prabhakar, sangeetha bhat and Karthik Attavar satrrer anuktha movie trailer has released. the movie will release on february 1st.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X