twitter
    For Quick Alerts
    ALLOW NOTIFICATIONS  
    For Daily Alerts

    'ರಂಗಿ' ಅನುಪ್ ಜೊತೆ ಕೆಲಸ ಮಾಡುವ ಆಸಕ್ತರಿಗೆ ಗುಡ್ ನ್ಯೂಸ್

    By Suneetha
    |

    ನಿರ್ದೇಶಕ ಅನುಪ್ ಭಂಡಾರಿ ಆಕ್ಷನ್-ಕಟ್ ಹೇಳಿರುವ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ 'ರಂಗಿತರಂಗ' ಚಿತ್ರತಂಡ ಇದೀಗ ಮತ್ತೆ ಎರಡನೇ ಪ್ರಾಜೆಕ್ಟ್ ಕಡೆ ಹೆಜ್ಜೆ ಹಾಕಿದ್ದು, ತಮ್ಮ ಚಿತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ.

    ಹೊಸಬರಾಗಿ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕಾಲಿಟ್ಟ 'ರಂಗಿತರಂಗ' ಚಿತ್ರತಂಡ ಇದೀಗ ಹೊಸಬರಿಗೆ ಅವಕಾಶ ನೀಡಲು ಮುಂದಾಗಿದ್ದಾರೆ. ಈ ಮೊದಲು ಸಿನಿಮಾ ನಿರ್ದೇಶನ, ವಸ್ತ್ರ ವಿನ್ಯಾಸ, ಎಡಿಟಿಂಗ್, ಕಲಾ ವಿಭಾಗ, ಮತ್ತು ಆಸಕ್ತ ಬರಹಗಾರರಿಗೆ ಈ ತಂಡ ಕರೆ ಕೊಟ್ಟಿತ್ತು.[ನೀವು 'ರಂಗಿತರಂಗ' ತಂಡದೊಂದಿಗೆ ಕೆಲಸ ಮಾಡಬೇಕೆ? ಇಲ್ಲಿದೆ ಅವಕಾಶ!]

    ಇದೀಗ ಮತ್ತೆ ನಟನೆಯಲ್ಲಿ ಆಸಕ್ತಿ ಇರುವ ನಟ-ನಟಿಯರಿಗೆ, ಹಾಡುಗಾರರಿಗೆ ಹಾಗೂ ಸಂಗೀತ ವಾದ್ಯಗಳನ್ನು ನುಡಿಸಲು ಆಸಕ್ತಿ ಇರುವ ಹೊಸ ಪ್ರತಿಭೆಗಳಿಗೆ ತಮ್ಮ ತಂಡದಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದು ಆಸಕ್ತರು ಭಾಗವಹಿಸಬಹುದಾಗಿದೆ.

    ನಟ-ನಟಿಯರು ತಾವು ಮಾಡಿದ ಪರ್ಫಾಮೆನ್ಸ್ ನ ವಿಡಿಯೋ ಲಿಂಕ್ ಮತ್ತು ಪ್ರೋಫೈಲ್ ಚಿತ್ರವನ್ನು [email protected] ಗೆ ಕಳುಹಿಸಲು ಕೋರಲಾಗಿದೆ. ನಟನೆಯ ವಿಡಿಯೋ ಇಲ್ಲದಿದ್ದರೆ, ಮೊಬೈಲ್ ನಲ್ಲಿ ಮಾಡಿದ 1-3 ನಿಮಿಷಗಳಿರುವ ವಿಡಿಯೋ ಒಂದನ್ನು ಕಳುಹಿಸಬಹುದು.[29 ವರ್ಷಗಳ ನಂತರ ಶಿವಣ್ಣ ಅವರ ದಾಖಲೆ ಮುರಿದ 'ರಂಗಿ' ನಟ ನಿರುಪ್ ಭಂಡಾರಿ.!]


    ಹಾಡುಗಾರರು ಮತ್ತು ಸಂಗೀತ ವಾದ್ಯ ನುಡಿಸಲು ಆಸಕ್ತಿ ಇರುವವರು [email protected] ಗೆ ಆಡಿಯೋ ಸ್ಯಾಂಪಲ್ಸ್ ಅನ್ನು ಕಳುಹಿಸಲು ಕೋರಲಾಗಿದೆ. ಆಸಕ್ತರಲ್ಲಿ ವಿನಂತಿ ಒಂದು ಕನ್ನಡದಲ್ಲಿ ಹಾಡಿರುವ ಹಾಡನ್ನು ಕಡ್ಡಾಯವಾಗಿ ಕಳುಹಿಸಲು ಚಿತ್ರತಂಡದವರು ಕೋರಿದ್ದಾರೆ.

    ಇನ್ನೇಕೆ ತಡ ಆಸಕ್ತರೇ, ಈಗಲೇ ನಿಮ್ಮ ಸಂಪೂರ್ಣ ವಿವರಣೆಯೊಂದಿಗೆ, ಸ್ಯಾಂಪಲ್ಸ್ ಅನ್ನು ಈ ಮೇಲಿನ ಮೇಲ್ ಐಡಿಗೆ ಕಳುಹಿಸಿ ಅವಕಾಶವನ್ನು ಉಪಯೋಗಿಸಿಕೊಳ್ಳಿ.

    English summary
    The team of Rangitaranga has launched a talent hunt to draw talent for their next venture. Director Anup Bhandari and actor Nirup Bhandari are teaming up again for the new film. They have invited people with creative talent and interest in Male and Female Actors, Singers with Unique voice. and instrumentalists to apply.
    Saturday, January 16, 2016, 17:10
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X