Don't Miss!
- News Mallikarjun Kharge: ಕಲಬುರಗಿ ಲೋಕಸಭಾ ಕ್ಷೇತ್ರ; ಅಳಿಯನ ಕಾಳಗದಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರತಿಷ್ಠೆ
- Sports T20 World Cup 2024: ವೀರೇಂದ್ರ ಸೆಹ್ವಾಗ್ ಆಯ್ಕೆಯ ಭಾರತ ತಂಡದಲ್ಲಿ ಪ್ರಮುಖ ಆಟಗಾರರಿಗೆ ಸ್ಥಾನವಿಲ್ಲ!
- Technology Realme: ರಿಯಲ್ಮಿ ನಾರ್ಜೋ 70 5G, ನಾರ್ಜೋ 70x 5G ಸ್ಮಾರ್ಟ್ಫೋನ್ ಲಾಂಚ್! ಸಖತ್ ಫೀಚರ್ಸ್... ಬೆಲೆ ಎಷ್ಟು?
- Automobiles ಮೇಡ್ ಇನ್ ಇಂಡಿಯಾ ಈ ಕಾರಿಗೆ ಜಪಾನ್ನಲ್ಲಿ ಭಾರೀ ಬೇಡಿಕೆ: ವಿಶ್ವಗುರು ಭಾರತಕ್ಕೆ ಎಲ್ಲವೂ ಸಾಧ್ಯ!
- Lifestyle ವಿಕಲಚೇತನರಿಗೆ ಸ್ಕೂಟಿ ಗಿಫ್ಟ್..! ಮನೆ ಕಟ್ಟಿಕೊಡುವ ಭರವಸೆ ನೀಡಿದ ನಟ ಲಾರೆನ್ಸ್..!
- Finance ರಿಲಯನ್ಸ್ಗೆ 28,607 ಕೋಟಿ ನಷ್ಟ, ಕಾರಣ ಏನು ಗೊತ್ತೆ?
- Education ವರ್ಧಿತ ಉತ್ಪಾದಕತೆಗಾಗಿ ಪ್ರತಿಯೊಬ್ಬರೂ ಕಲಿಯಬೇಕಾದ 10 ಅಗತ್ಯ ಕೌಶಲ್ಯಗಳು
- Travel Bengaluru to Ayodhya: ಬೆಂಗಳೂರಿನಿಂದ ಅಯೋಧ್ಯೆ ತಲುಪುವುದು ಹೇಗೆ? ನೀವಲ್ಲಿ ನೋಡಲೇಬೇಕಿರುವ ಸ್ಥಳಗಳು ಯಾವವು? ಮಾಹಿತಿ
'ರಂಗಿ' ಅನುಪ್ ಜೊತೆ ಕೆಲಸ ಮಾಡುವ ಆಸಕ್ತರಿಗೆ ಗುಡ್ ನ್ಯೂಸ್
ನಿರ್ದೇಶಕ ಅನುಪ್ ಭಂಡಾರಿ ಆಕ್ಷನ್-ಕಟ್ ಹೇಳಿರುವ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ 'ರಂಗಿತರಂಗ' ಚಿತ್ರತಂಡ ಇದೀಗ ಮತ್ತೆ ಎರಡನೇ ಪ್ರಾಜೆಕ್ಟ್ ಕಡೆ ಹೆಜ್ಜೆ ಹಾಕಿದ್ದು, ತಮ್ಮ ಚಿತ್ರದಲ್ಲಿ ಕೆಲಸ ಮಾಡಲು ಆಸಕ್ತಿ ಇರುವ ಪ್ರತಿಭೆಗಳಿಗೆ ಅವಕಾಶ ನೀಡುತ್ತಿದ್ದಾರೆ.
ಹೊಸಬರಾಗಿ ಸ್ಯಾಂಡಲ್ ವುಡ್ ಕ್ಷೇತ್ರಕ್ಕೆ ಕಾಲಿಟ್ಟ 'ರಂಗಿತರಂಗ' ಚಿತ್ರತಂಡ ಇದೀಗ ಹೊಸಬರಿಗೆ ಅವಕಾಶ ನೀಡಲು ಮುಂದಾಗಿದ್ದಾರೆ. ಈ ಮೊದಲು ಸಿನಿಮಾ ನಿರ್ದೇಶನ, ವಸ್ತ್ರ ವಿನ್ಯಾಸ, ಎಡಿಟಿಂಗ್, ಕಲಾ ವಿಭಾಗ, ಮತ್ತು ಆಸಕ್ತ ಬರಹಗಾರರಿಗೆ ಈ ತಂಡ ಕರೆ ಕೊಟ್ಟಿತ್ತು.[ನೀವು 'ರಂಗಿತರಂಗ' ತಂಡದೊಂದಿಗೆ ಕೆಲಸ ಮಾಡಬೇಕೆ? ಇಲ್ಲಿದೆ ಅವಕಾಶ!]
ಇದೀಗ ಮತ್ತೆ ನಟನೆಯಲ್ಲಿ ಆಸಕ್ತಿ ಇರುವ ನಟ-ನಟಿಯರಿಗೆ, ಹಾಡುಗಾರರಿಗೆ ಹಾಗೂ ಸಂಗೀತ ವಾದ್ಯಗಳನ್ನು ನುಡಿಸಲು ಆಸಕ್ತಿ ಇರುವ ಹೊಸ ಪ್ರತಿಭೆಗಳಿಗೆ ತಮ್ಮ ತಂಡದಲ್ಲಿ ಕೆಲಸ ಮಾಡಲು ಅವಕಾಶ ನೀಡಿದ್ದು ಆಸಕ್ತರು ಭಾಗವಹಿಸಬಹುದಾಗಿದೆ.
ನಟ-ನಟಿಯರು ತಾವು ಮಾಡಿದ ಪರ್ಫಾಮೆನ್ಸ್ ನ ವಿಡಿಯೋ ಲಿಂಕ್ ಮತ್ತು ಪ್ರೋಫೈಲ್ ಚಿತ್ರವನ್ನು [email protected] ಗೆ ಕಳುಹಿಸಲು ಕೋರಲಾಗಿದೆ. ನಟನೆಯ ವಿಡಿಯೋ ಇಲ್ಲದಿದ್ದರೆ, ಮೊಬೈಲ್ ನಲ್ಲಿ ಮಾಡಿದ 1-3 ನಿಮಿಷಗಳಿರುವ ವಿಡಿಯೋ ಒಂದನ್ನು ಕಳುಹಿಸಬಹುದು.[29 ವರ್ಷಗಳ ನಂತರ ಶಿವಣ್ಣ ಅವರ ದಾಖಲೆ ಮುರಿದ 'ರಂಗಿ' ನಟ ನಿರುಪ್ ಭಂಡಾರಿ.!]
ಹಾಡುಗಾರರು ಮತ್ತು ಸಂಗೀತ ವಾದ್ಯ ನುಡಿಸಲು ಆಸಕ್ತಿ ಇರುವವರು [email protected] ಗೆ ಆಡಿಯೋ ಸ್ಯಾಂಪಲ್ಸ್ ಅನ್ನು ಕಳುಹಿಸಲು ಕೋರಲಾಗಿದೆ. ಆಸಕ್ತರಲ್ಲಿ ವಿನಂತಿ ಒಂದು ಕನ್ನಡದಲ್ಲಿ ಹಾಡಿರುವ ಹಾಡನ್ನು ಕಡ್ಡಾಯವಾಗಿ ಕಳುಹಿಸಲು ಚಿತ್ರತಂಡದವರು ಕೋರಿದ್ದಾರೆ.
ಇನ್ನೇಕೆ ತಡ ಆಸಕ್ತರೇ, ಈಗಲೇ ನಿಮ್ಮ ಸಂಪೂರ್ಣ ವಿವರಣೆಯೊಂದಿಗೆ, ಸ್ಯಾಂಪಲ್ಸ್ ಅನ್ನು ಈ ಮೇಲಿನ ಮೇಲ್ ಐಡಿಗೆ ಕಳುಹಿಸಿ ಅವಕಾಶವನ್ನು ಉಪಯೋಗಿಸಿಕೊಳ್ಳಿ.