ಜಾಕ್ವೆಲಿನ್ ಬಗ್ಗೆ ಮತ್ತೊಂದು ಸರ್ಪ್ರೈಸ್ ಸುದ್ದಿ ನೀಡಿದ ಅನೂಪ್ ಭಂಡಾರಿ
ಕಿಚ್ಚ ಸುದೀಪ್ ಅಭಿನಯದ 'ವಿಕ್ರಾಂತ್ ರೋಣ' ಸಿನಿಮಾದಲ್ಲಿ ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡೀಸ್ ಕಾಣಿಸಿಕೊಳ್ಳುತ್ತಿದ್ದಾರೆ. ಹಾಡಿನ ಚಿತ್ರೀಕರಣಕ್ಕಾಗಿ ಬೆಂಗಳೂರಿಗೆ ಬಂದಿದ್ದ ನಟಿ ಈಗ ಶೂಟಿಂಗ್ ಮುಗಿಸಿ ಸಿಲಿಕಾನ್ ಸಿಟಿಗೆ ಬಾಯ್ ಬಾಯ್ ಹೇಳುತ್ತಿದ್ದಾರೆ ಎಂಬ ವಿಚಾರ ತಿಳಿದು ಬಂದಿದೆ. ಈ ನಡುವೆ ಕಿಚ್ಚನ ಜೊತೆ ವಿಶೇಷ ಹಾಡೊಂದರಲ್ಲಿ ಸೊಂಟ ಬಳುಕಿಸಿರುವ ಶ್ರೀಲಂಕಾ ಚೆಲುವೆಯ ಕುರಿತು ನಿರ್ದೇಶಕ ಅನೂಪ್ ಭಂಡಾರಿ ಮತ್ತೊಂದು ಭರ್ಜರಿ ಸುದ್ದಿ ಹೊರಹಾಕಿದ್ದಾರೆ.
ಸುದೀಪ್ ಮತ್ತು ಜಾಕ್ವೆಲಿನ್ ಡ್ಯಾನ್ಸ್ ಶೂಟಿಂಗ್ ಮುಗಿದಿದ್ದು, ಅಭಿನಯ ಚಕ್ರವರ್ತಿ ಸಹ ಟ್ವಿಟ್ಟರ್‌ನಲ್ಲಿ ಸಂತಸ ವ್ಯಕ್ತಪಡಿಸಿದ್ದರು. ಇದೀಗ, ಬಾಲಿವುಡ್ ಬ್ಯೂಟಿಯನ್ನು ಸ್ಯಾಂಡಲ್‌ವುಡ್‌ಗೆ ಸ್ವಾಗತ ಮಾಡಿರುವ ಅನೂಪ್ ಸರ್ಪ್ರೈಸ್ ಸುದ್ದಿಯೊಂದನ್ನು ಹಂಚಿಕೊಂಡಿದ್ದಾರೆ. ಮುಂದೆ ಓದಿ....

ಡ್ಯಾನ್ಸ್ ಮಾತ್ರವಲ್ಲ, ಆಕ್ಟಿಂಗ್ ಮಾಡಿದ್ದಾರೆ
ಆರಂಭದಲ್ಲಿ ಸುದ್ದಿಯಾದಂತೆ ನಟಿ ಜಾಕ್ವೆಲಿನ್ ಫರ್ನಾಂಡೀಸ್ ವಿಕ್ರಾಂತ್ ರೋಣ ಸಿನಿಮಾದಲ್ಲಿ ಹಾಡಿಗೆ ಡ್ಯಾನ್ಸ್ ಮಾಡಬೇಕಿತ್ತು. ಆದರೆ ಕೊನೆ ಕ್ಷಣದಲ್ಲಿ ಜಾಕ್ವೆಲಿನ್ ಈ ಸಿನಿಮಾದಲ್ಲಿ ಆಕ್ಟ್ ಕೂಡ ಮಾಡಿದ್ದಾರೆ ಎನ್ನುವ ವಿಷಯ ಬಹಿರಂಗವಾಗಿದೆ. ಹೌದು, ಜಾಕ್ವೆಲಿನ್ ಸುದೀಪ್ ಸಿನಿಮಾದಲ್ಲಿ ಪಾತ್ರವೊಂದರಲ್ಲಿ ಬಣ್ಣ ಹಚ್ಚಿದ್ದು, ಡ್ಯಾನ್ಸ್ ಮಾಡುವುದರ ಜೊತೆಗೆ ಕೆಲವು ಸೀನ್‌ಗಳಲ್ಲಿ ನಟಿಸಿದ್ದಾರೆ.

ಕನ್ನಡ ಕಲಿತ ಜಾಕ್ವೆಲಿನ್
'ವಿಕ್ರಾಂತ್ ರೋಣ' ಸಿನಿಮಾ ಪ್ಯಾನ್ ಇಂಡಿಯಾ ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ವಿಶೇಷ ಅಂದ್ರೆ ಈ ಚಿತ್ರಕ್ಕೆ ಕನ್ನಡದಲ್ಲಿ ಸ್ವತಃ ಜಾಕ್ವೆಲಿನ್ ಫರ್ನಾಂಡೀಸ್ ಡಬ್ಬಿಂಗ್ ಮಾಡಲಿದ್ದಾರಂತೆ. ಕನ್ನಡ ಕಲಿತು ವಾಯ್ಸ್ ಡಬ್ ಮಾಡಲು ನಿರ್ಧರಿಸಿದ್ದಾರೆ. ಇದು ನಿಜಕ್ಕೂ ಸ್ವಾಗತರ್ಹ ಮತ್ತು ಖುಷಿಯ ವಿಚಾರ.

ಚಂದನವನಕ್ಕೆ ಸ್ವಾಗತ
ಜಾಕ್ವೆಲಿನ್ ನಟನೆ ಬಗ್ಗೆ ನಿರ್ದೇಶಕ ಅನೂಪ್ ಭಂಡಾರಿ ಟ್ವೀಟ್ ಮಾಡಿದ್ದಾರೆ. ''ಚಂದನವನಕ್ಕೆ ಸ್ವಾಗತ ಜಾಕ್ವೆಲಿನ್ ಫರ್ನಾಂಡೀಸ್. ನಿಮ್ಮೊಂದಿಗೆ ಕೆಲಸ ಮಾಡಿದ್ದು ನಿಜಕ್ಕೂ ಖುಷಿ ತಂದಿದೆ. ಶೀಘ್ರದಲ್ಲಿ ನಿಮ್ಮ ಪಾತ್ರದ ಹೆಸರು ಮತ್ತು ಫಸ್ಟ್ ಲುಕ್ ಬಿಡುಗಡೆ ಮಾಡುತ್ತೇವೆ. ಡಬ್ಬಿಂಗ್ ವೇಳೆ ಮತ್ತೊಮ್ಮೆ ಸಿಗೋಣ'' ಎಂದು ಹೇಳಿದ್ದಾರೆ.
Recommended Video

ಜಾಕ್ವೆಲಿನ್‌ಗೆ ಥ್ಯಾಂಕ್ಸ್ ಹೇಳಿದ ಸುದೀಪ್
ಇನ್ನು ಜಾಕ್ವೆಲಿನ್ ಹಾಡಿನ ಬಗ್ಗೆ ನಟ ಸುದೀಪ್ ಸಹ ಟ್ವೀಟ್ ಮಾಡಿದ್ದು, ''ನಮ್ಮ ಸಿನಿಮಾದ ಹಾಡಿಗೆ ಜೋಶ್ ತುಂಬಿದ್ದಕ್ಕೆ ಧನ್ಯವಾದ ಜಾಕ್ವೆಲಿನ್ ಫರ್ನಾಂಡೀಸ್. ನಿಮ್ಮ ನೃತ್ಯ ನನ್ನನ್ನೂ ಒಂದೆರಡು ಸ್ಟೆಪ್ ಹಾಕುವಂತೆ ಪ್ರೇರೇಪಿಸಿತು. ನಿಮಗೆ ಶುಭವಾಗಲಿ'' ಎಂದರು.


Click it and Unblock the Notifications











