ಸುದೀಪ್ ಗೆ ಮತ್ತೊಂದು ಸಿನಿಮಾ ಮಾಡ್ತಿದ್ದಾರೆ ಅನೂಪ್ ಭಂಡಾರಿ
Recommended Video
ನಿರ್ದೇಶಕ ಅನೂಪ್ ಭಂಡಾರಿ ತಮ್ಮ ಮೂರನೇ ಚಿತ್ರದಲ್ಲಿಯೇ ಸುದೀಪ್ ರಿಗೆ ಆಕ್ಷನ್ ಕಟ್ ಹೇಳುವ ಅವಕಾಶ ಪಡೆದಿದ್ದರು. ಈಗ ಕಿಚ್ಚನ ಕಡೆಯಿಂದ ಅನೂಪ್ ಗೆ ಮತ್ತೊಂದು ಆಫರ್ ಸಿಕ್ಕಿದೆ.
ಸುದೀಪ್ ಜೊತೆಗೆ ಅನೂಪ್ ಮತ್ತೊಂದು ಸಿನಿಮಾ ಮಾಡುತ್ತಿದ್ದಾರೆ. ಈ ಸಿನಿಮಾ 'ಬಿಲ್ಲಾ ರಂಗ ಭಾಷ' ಚಿತ್ರಕ್ಕೂ ಮುಂಚೆ ಶುರು ಆಗಲಿದೆ. ಸಪ್ಟೆಂಬರ್ ನಲ್ಲಿ ಈ ಸಿನಿಮಾ ಪ್ರಾರಂಭ ಆಗಿಲಿದೆ. ಜಾಕ್ ಮಂಜು ಈ ಸಿನಿಮಾದ ನಿರ್ಮಾಣ ಮಾಡುತ್ತಿದ್ದಾರೆ.
ಇತ್ತೀಚಿಗಷ್ಟೆ ಅನೂಪ್ ತಮ್ಮ ಮುಂದಿನ ಸಿನಿಮಾದ ಒಂದು ಪಾತ್ರಕ್ಕೆ 3 ರಿಂದ 7 ವರ್ಷದ ಒಬ್ಬ ಪುಟ್ಟ ಹುಡುಗಿ ಬೇಕು ಎಂದು ಆಡಿಷನ್ ಕರೆದಿದ್ದರು. ಆ ಆಡಿಷನ್ 'ಬಿಲ್ಲಾ ರಂಗ ಭಾಷ' ಸಿನಮಾಗೆ ಅಂತಲೇ ಅನೇಕರು ತಿಳಿದಿದ್ದರು. ಆದರೆ, ಅದು ಅನೂಪ್ ಮತ್ತು ಸುದೀಪ್ ಕಾಂಬಿನೇಶನ್ ನ ಹೊಸ ಸಿನಿಮಾಗೆ.

ಅನೂಪ್ 'ರಂಗಿತರಂಗ', 'ರಾಜರಥ' ಸಿನಿಮಾಗಳ ಬಳಿಕ 'ಬಿಲ್ಲಾ ರಂಗ ಭಾಷ' ಸಿನಿಮಾ ಶುರು ಮಾಡಿದ್ದರು. ಆದರ ಜೊತೆ ಜೊತೆಗೆ ಕಿಚ್ಚನೊಂದಿಗೆ ಹೊಸ ಸಿನಿಮಾ ಮಾಡುತ್ತಿದ್ದಾರೆ.
ಸುದೀಪ್ 'ಪೈಲ್ವಾನ್' ಸಿನಿಮಾ ಸಪ್ಟೆಂಬರ್ 12 ರಂದು ಬಿಡುಗಡೆ ಆಗುತ್ತಿದೆ. ಸದ್ಯ, 'ಕೋಟಿಗೊಬ್ಬ 3' ಚಿತ್ರದ ಚಿತ್ರೀಕರಣವೂ ನಡೆಯುತ್ತಿದೆ.


Click it and Unblock the Notifications











