»   » ಕರಾಳ ರಾತ್ರಿಯಲ್ಲಿ ಒಂದಾದ ಜೆಕೆ, ವೈಷ್ಣವಿ, ಅನುಪಮ ಗೌಡ

ಕರಾಳ ರಾತ್ರಿಯಲ್ಲಿ ಒಂದಾದ ಜೆಕೆ, ವೈಷ್ಣವಿ, ಅನುಪಮ ಗೌಡ

Posted By:
Subscribe to Filmibeat Kannada

ಬಿಗ್ ಬಾಸ್ ನಿಂದ ಹೊರ ಬಂದ ಸ್ಪರ್ಧಿಗಳೆಲ್ಲರೂ ಸಖತ್ ಬ್ಯೂಸಿ ಆಗಿದ್ದಾರೆ. ಮನೆ ಒಳಗೆ ಹೋಗಿದ್ದ ಕಲಾವಿದರು ಈಗ ಸಿನಿಮಾಗಳಲ್ಲಿ , ರಿಯಾಲಿಟಿ ಶೋಗಳನ್ನ ಭಾಗಿಯಾಗಿದ್ದಾರೆ. ಇತ್ತಿಚಿಗಷ್ಟೇ ನಟಿ ಶೃತಿ ಪ್ರಕಾಶ್ ಅಭಿನಯದ ಹೊಸ ಸಿನಿಮಾದ ಬಗ್ಗೆ ಸುದ್ದಿ ಓದಿದ್ರಿ. ಅದೇ ರೀತಿಯಲ್ಲಿ ಜೆಕೆ, ಅನುಪಮ ಹಾಗೂ ವೈಷ್ಣವಿ ಒಂದೇ ಸಿನಿಮಾದಲ್ಲಿ ಅಭಿನಯಿಸುತ್ತಿದ್ದಾರೆ.

ಬಿಗ್ ಬಾಸ್ ಮನೆಯಲ್ಲಿ ಇರುವಾಗಲೇ ಜೆ ಕೆ ಹಾಗೂ ಅನುಪಮ ಅವರಿಗಾಗಿ ಸಿನಿಮಾ ನಿರ್ದೇಶನ ಮಾಡುವುದಾಗಿ ತಿಳಿಸಿದ್ದ ಡೈರೆಕ್ಟರ್ ದಯಾಳ್ ಪದ್ಮಾನಾಭನ್ ಚಿತ್ರದ ಮಹೂರ್ತ ಸಮಾರಂಭಕ್ಕೆ ತಯಾರಿ ಮಾಡಿಕೊಂಡಿದ್ದಾರೆ.

ಕಾಲಿವುಡ್ ಸ್ಟಾರ್ ನಟನ ಸಿನಿಮಾದಲ್ಲಿ ಅನುಪಮ ಗೌಡ

ಮೊದಲಿಗೆ ಜೆ ಕೆ ಹಾಗೂ ಅನುಪಮ ಚಿತ್ರದಲ್ಲಿ ಇರುತ್ತಾರೆ ಎಂದಿದ್ದ ದಯಾಳ್ ಈಗ ಬಿಗ್ ಬಾಸ್ ನ ಇನ್ನೂ ಕೆಲ ಸ್ಪರ್ಧಿಗಳನ್ನ ಚಿತ್ರಕ್ಕೆ ಆಯ್ಕೆ ಮಾಡಿಕೊಂಡಿದ್ದಾರೆ. ಹಾಗಾದ್ರೆ ಯಾರೆಲ್ಲ ಚಿತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

ಒಂದೇ ದಿನ ಸೆಟ್ಟೇರಲಿದೆ ಎರಡು ಚಿತ್ರ

ಬಿಗ್ ಬಾಸ್ ಮನೆಯಲ್ಲಿ ಒಂದು ಸಿನಿಮಾ ನಿರ್ದೇಶನ ಮಾಡುವುದಾಗಿ ತಿಳಿಸಿದ್ದ ದಯಾಳ್ ಪದ್ಮನಾಭನ್ ಎರಡು ಚಿತ್ರಗಳ ಮಹೂರ್ತ ಮಾಡಲು ನಿರ್ಧರಿಸಿದ್ದಾರೆ. 'ಆ ಕರಾಳ ರಾತ್ರಿ' ಎಂದು ಚಿತ್ರಕ್ಕೆ ಶೀರ್ಷಿಕೆಯನ್ನ ಇಟ್ಟಿದ್ದಾರೆ. ಇದರ ಜೊತೆಯಲ್ಲಿ ಪುಟ 109 ಚಿತ್ರ ಕೂಡ ಸೆಟ್ಟೇರಲಿದೆ.

ಕರಾಳ ರಾತ್ರಿಯಲ್ಲಿ ಬಿಗ್ ಬಾಸ್ ಸ್ಪರ್ಧಿಗಳು

ಆ ಕರಾಳ ರಾತ್ರಿ ಹಾಗೂ ಪುಟ 109 ಎನ್ನುವ ಹೆಸರಿನಲ್ಲಿ ಫೆ 19 ರಂದು ಎರಡು ಸಿನಿಮಾಗಳು ಸೆಟ್ಟೇರಲಿದೆ. ಚಿತ್ರದಲ್ಲಿ ಜೆ ಕೆ , ಅನುಪಮ ಸೇರಿದಂತೆ ಬಿಗ್ ಬಾಸ್ ನ ವೈಷ್ಣವಿ ಕೂಡ ಅಭಿನಯಿಸುತ್ತಿದ್ದಾರೆ. ಜೊತೆಯಲ್ಲಿ ನವೀನ್ ಕೃಷ್ಣ, ರಂಗಾಯಣ ರಘು ಮತ್ತು ವೀಣಾ ಸುಂದರ್ ಮುಖ್ಯ ಪಾತ್ರವನ್ನ ನಿರ್ವಹಿಸುತ್ತಿದ್ದಾರೆ.

ತೆರೆ ಮೇಲೆ ಬರಲಿದೆ ಸತ್ಯ ಘಟನೆ

ಮೋಹನ್ ಹಬ್ಬು ಅವರ ನಾಟಕದ ಎಳೆಯನ್ನ ಇಟ್ಟುಕೊಂಡು ಸಿನಿಮಾದ ಕಥೆಯನ್ನಾಗಿ ಮಾಡಿಕೊಂಡಿದ್ದಾರೆ ದಯಾಳ್ ಪದ್ಮನಾಭನ್, ಚಿತ್ರಕ್ಕೆ ನವೀನ್ ಕೃಷ್ಣ ಸಂಭಾಷಣೆ ಬರೆಯಲಿದ್ದಾರೆ.

ಒಂದೇ ಬಾರಿ ಎರಡು ಚಿತ್ರಕ್ಕೆ ಚಾಲನೆ

ಮಹೂರ್ತ ದಿನಾಂಕ ನಿಗದಿ ಮಾಡಿರುವ ದಯಾಳ್ ಒಂದೇ ಮಹೂರ್ತ ಎರಡು ಸಿನಿಮಾ ಎಂದು ಆಮಂತ್ರಣ ಪತ್ರಿಕೆಯಲ್ಲಿ ಬರೆಸಿದ್ದಾರೆ. ಆದರೆ ಯಾರು ಯಾವ ಚಿತ್ರದಲ್ಲಿ ಅಭಿನಯಿಸುತ್ತಾರೆ. ಅಥವಾ ಎಲ್ಲರೂ ಒಂದೇ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಾರಾ? ಈ ಎಲ್ಲಾ ಪ್ರಶ್ನೆಗಳಿಗೆ ಮಹೂರ್ತದ ದಿನ ಉತ್ತರ ಸಿಗಲಿದೆ.

English summary
Kannada artist Anupama Gowda, JK and Vaishnavi are Acting in Dayal Padmanaban's 'An Karala Ratri' kannada movie, Dayal Padmanabhan is directing the film, film mahurtha is taking place on February 19th.

ಮನರಂಜನಾ ಜಗತ್ತಿನ ಎಲ್ಲ ತಾಜಾ ರೋಚಕ ಸುದ್ದಿಗಳನ್ನು ಪಡೆಯಿರಿ - Filmibeat Kannada