ಲಾಯರ್ ಅವತಾರದಲ್ಲಿ ಕನ್ನಡಕ್ಕೆ ಬಂದ 'ಪ್ರೇಮಂ' ಬೆಡಗಿ
Recommended Video

'ಪ್ರೇಮಂ' ಕೇವಲ ಮಲೆಯಾಳಂ ಸಿನಿಮಾರಂಗ ಮಾತ್ರವಲ್ಲದೇ ಇಡೀ ಭಾರತೀಯ ಚಿತ್ರರಂಗದ ಪ್ರೇಕ್ಷಕರನ್ನು ತನ್ನತ್ತ ಸೆಳೆದುಕೊಂಡ ಸಿನಿಮಾ. ಈ ಚಿತ್ರ ಬಿಡುಗಡೆ ಆದ ನಂತರ ಇದರ ನಾಯಕಿಯರನ್ನ ಕನ್ನಡಕ್ಕೆ ಕರೆತರುವ ಪ್ರಯತ್ನ ನಡೆದಿತ್ತು. ಸದ್ಯ, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾದಲ್ಲಿ 'ಪ್ರೇಮಂ' ಚಿತ್ರದ ಓರ್ವ ನಾಯಕಿ ಅಭಿನಯ ಮಾಡುತ್ತಿದ್ದು, ಲಾಯರ್ ಕೋಟು ಧರಿಸಿ ಚಿತ್ರೀಕರಣ ಸೆಟ್ ಗೆ ಎಂಟ್ರಿ ಕೊಟ್ಟಿದ್ದಾರೆ.
ಮಲೆಯಾಳಂ ನಟಿ ಅನುಪಮ ಪರಮೇಶ್ವರನ್ 'ನಟಸಾರ್ವಭೌಮ' ಸಿನಿಮಾದಲ್ಲಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಜೊತೆಯಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ, ರಚಿತಾ ರಾಮ್ ಕೂಡ ಚಿತ್ರದಲ್ಲಿ ನಾಯಕಿಯಾಗಿ ಅಭಿನಯ ಮಾಡುತ್ತಿದ್ದಾರೆ.

ಪವನ್ ಒಡೆಯರ್ ನಿರ್ದೇಶನ ಮಾಡುತ್ತಿರುವ 'ನಟಸಾರ್ವಭೌಮ' ಸಿನಿಮಾಗೆ ರಾಕ್ ಲೈನ್ ವೆಂಕಟೇಶ್ ಬಂಡವಾಳ ಹಾಕಿದ್ದಾರೆ. ಅನುಪಮ ಅವರ ಕೆಲವು ಸೀನ್ ಗಳ ಚಿತ್ರೀಕರಣ ಮುಗಿದಿದ್ದು ಕೆಲವೇ ದಿನಗಳಲ್ಲಿ ಸಿನಿಮಾತಂಡ ಕೊಲ್ಕತ್ತಾದ ಚಿತ್ರೀಕರಣದಲ್ಲಿ ಬ್ಯುಸಿ ಆಗಲಿದೆ.

ಸದ್ಯ ಅನುಪಮ ಪರಮೇಶ್ವರನ್ ಲಾಯರ್ ಲುಕ್ ನಲ್ಲಿರುವ ಫೋಟೋಗಳು ಎಲ್ಲೆಡೆ ಹರಿದಾಡುತ್ತಿವೆ. 'ನಟಸಾರ್ವಭೌಮ' ಸಿನಿಮಾಗೆ ಡಿ ಇಮಾನ್ ಸಂಗೀತ ಸಂಯೋಜನೆ ಮಾಡಿದ್ದು ಚಿತ್ರದಲ್ಲಿ ಚಿಕ್ಕಣ್ಣ, ರವಿಶಂಕರ್ ಇನ್ನು ಅನೇಕರು ಕಾಣಿಸಿಕೊಂಡಿದ್ದಾರೆ.


Click it and Unblock the Notifications











