'ನಟಸಾರ್ವಭೌಮ'ನಿಗೆ ಜೊತೆಯಾದ ಮಲೆಯಾಳಂ ಬೆಡಗಿ
Recommended Video

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ 'ನಟಸಾರ್ವಭೌಮ' ಸಿನಿಮಾದಲ್ಲಿ ಮತ್ತೆ ರಚಿತಾರಾಮ್ ಅಪ್ಪು ಜೊತೆಯಾಗಿ ಅಭಿನಯ ಮಾಡುತ್ತಿದ್ದಾರೆ. ಈಗಾಗಲೇ ಚಿತ್ರೀಕರಣ ಶುರುವಾಗಿ ಸಾಕಷ್ಟು ದಿನಗಳು ಆಗಿದೆ. ಸದ್ಯ 'ನಟಸಾರ್ವಭೌಮ' ತಂಡದಿಂದ ಬಂದಿರುವ ಹೊಸ ಸುದ್ದಿ ಏನಪ್ಪ ಅಂದ್ರೆ ಅಪ್ಪು ಜೊತೆ ಅಭಿನಯಿಸಲು ಮತ್ತೊಬ್ಬ ನಾಯಕಿಯ ಎಂಟ್ರಿ ಆಗಿದ್ಯಂತೆ.
'ನಟಸಾರ್ವಭೌಮ' ಸಿನಿಮಾದಲ್ಲಿ ಇಬ್ಬರು ನಾಯಕಿಯರು ಕಾಣಿಸಿಕೊಳ್ಳುತ್ತಿದ್ದಾರೆ. ರಚಿತಾ ರಾಮ್ ಜೊತೆಯಲ್ಲಿ ಬಹುಭಾಷಾ ನಟಿ ಅನುಪಮಾ ಪರಮೇಶ್ವರನ್ ಕೂಡ ಸ್ಕ್ರೀನ್ ಶೇರ್ ಮಾಡಲು ಆಯ್ಕೆ ಆಗಿದ್ದಾರೆ. 'ಪ್ರೇಮಂ' ಸಿನಿಮಾ ಮೂಲಕ ಅನುಪಮಾ ಸಾಕಷ್ಟು ಹೆಸರು ಮಾಡಿದ್ದು ಮಲೆಯಾಳಂ ಮಾತ್ರವಲ್ಲದೆ ಟಾಲಿವುಡ್ ಹಾಗೂ ಕಾಲಿವುಡ್ ಚಿತ್ರದಲ್ಲಿಯೂ ಅಭಿನಯ ಮಾಡಿದ್ದಾರೆ.

ಅನುಪಮಾ 'ನಟಸಾರ್ವಭೌಮ' ಚಿತ್ರದಲ್ಲಿ ನಟಿಸುವ ಮೂಲಕ ಕನ್ನಡದಲ್ಲಿಯೂ ಖಾತೆ ತೆರೆಯಲಿದ್ದು, ಈ ಮೂಲಕ ಚತುರ್ಭಾಷಾ ನಟಿ ಆಗಲಿದ್ದಾರೆ. ಉಳಿದಂತೆ 'ನಟಸಾರ್ವಭೌಮ' ಸಿನಿಮಾವನ್ನು ಪವನ್ ಒಡೆಯರ್ ನಿರ್ದೇಶನ ಮಾಡುತ್ತಿದ್ದು, ರಾಕ್ ಲೈನ್ ವೆಂಕಟೇಶ್ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ.
ಪವರ್ ಸ್ಟಾರ್ ಪತ್ರಕರ್ತನ ಪಾತ್ರ ನಿರ್ವಹಿಸುತ್ತಾರೆ ಎನ್ನುವ ಸುದ್ದಿಗಳಿದ್ದು, ಚಿಕ್ಕಣ್ಣ ಕೂಡ ಮುಖ್ಯ ಪಾತ್ರವನ್ನು ನಿರ್ವಹಿಸಿದ್ದಾರೆ. ಸಾಕಷ್ಟು ವರ್ಷದ ನಂತರ ಬಿ ಸರೋಜದೇವಿ ಪವರ್ ಸ್ಟಾರ್ ಜೊತೆ ತೆರೆ ಹಂಚಿಕೊಳ್ಳುತ್ತಿದ್ದಾರೆ.


Click it and Unblock the Notifications











