ಅನುಪಮಾ ಎಂಬ ರೂಪಸಿ, ಆದಳು ಕನ್ನಡಿಗರೆದೆಯ ಪಟ್ಟದರಸಿ
ಇಂದು ಬಹುನಿರೀಕ್ಷಿತ 'ನಟ ಸಾರ್ವಭೌಮ' ಸಿನಿಮಾ ಬಿಡುಗಡೆಯಾಗಿದೆ. ಚಿತ್ರದಲ್ಲಿ ಮೆಚ್ಚಿಕೊಳ್ಳಬೇಕಾದ ಅನೇಕ ಅಂಶಗಳಿವೆ. ಅವುಗಳಲ್ಲಿ ಬಹಳ ಇಷ್ಟ ಆಗುವುದು ನಟಿ ಅನುಪಮ ಪರಮೇಶ್ವರನ್ ಎಂಬ ರೂಪಸಿ.
ಅನುಪಮ ಪಾತ್ರ ಬಂದರೆ ಪರದೆ ಮೇಲೆ ಸಿನಿಮಾ ಇನ್ನಷ್ಟು ಅಂದವಾಗಿ ಕಾಣುತ್ತಿದೆ. ತನ್ನ ಸೌಂದರ್ಯದ ಮೂಲಕ ಈ ಮಲೆಯಾಳಿ ಹುಡುಗಿ ಎಲ್ಲರ ಪ್ರೀತಿ ಪಡೆದುಕೊಂಡಿದ್ದಾಳೆ. ತುಂಬ ಚೆನ್ನಾಗಿ ಅವರನ್ನು ಸಿನಿಮಾದಲ್ಲಿ ತೋರಿಸಲಾಗಿದೆ. ಚಿತ್ರದ ಸೆಕೆಂಡ್ ಹಾಫ್ ನಲ್ಲಿ ಅನುಪಮ ಪಾತ್ರ ಬರುತ್ತದೆ. ಅವರ ಪಾತ್ರಕ್ಕೆ ಎಲ್ಲರನ್ನು ಸೆಳೆಯುವ ಶಕ್ತಿ ಇದೆ.
ಈ ಸಿನಿಮಾಗೆ ಸೋಷಿಯಲ್ ಮೀಡಿಯಾಗಳಲ್ಲಿ ಬರುತ್ತಿರುವ ಕಮೆಂಟ್ಸ್ ಗಳನ್ನ ನೀವು ಸಹ ಗಮನಿಸುತ್ತರಬಹುದು. ಅದರಲ್ಲಿ ಅನೇಕರು ಅನುಪಮರನ್ನು ಮೆಚ್ಚಿಕೊಂಡಿದ್ದಾರೆ. ಮುಂದೆ ಓದಿ...

ಸೆಕೆಂಡ್ ಹಾಫ್ ನಲ್ಲಿ ಬರುವ ಶ್ರುತಿ
ಎಲ್ಲರಿಗೂ ತಿಳಿದಿರುವ ಹಾಗೆ 'ನಟ ಸಾರ್ವಭೌಮ' ಸಿನಿಮಾದಲ್ಲಿ ಇಬ್ಬರು ನಾಯಕಿಯರು. ಈ ಪೈಕಿ ಅನುಪಮ ಶ್ರುತಿ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಶ್ರುತಿ ಇಲ್ಲಿ ಲಾಯರ್ ಆಗದ್ದಾರೆ. ಈ ಪಾತ್ರದ ಅವಧಿ ಕಡಿಮೆ ಇದ್ದರೂ ತನ್ನ ನಟನೆ ಹಾಗೂ ಸೌಂದರ್ಯದ ಮೂಲಕ ಅನುಪಮ ಬಹಳ ಇಷ್ಟ ಆಗುತ್ತಾರೆ.

30 ರಿಂದ 45 ನಿಮಿಷಗಳು
ಮಲೆಯಾಳಂ ನಟಿಯಾಗಿರುವ ಅನುಪಮ ಪರಮೇಶ್ವರನ್ ಕನ್ನಡರ ಪ್ರೀತಿ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕನ್ನಡದಲ್ಲಿ ಮೊದಲ ಸಿನಿಮಾದಲ್ಲಿಯೇ ತಮ್ಮ ಆಕ್ಟಿಂಗ್ ಮೂಲಕ ನೋಡುಗರನ್ನು ಸೆಳೆದಿದ್ದಾರೆ. 'ನಟ ಸಾರ್ವಭೌಮ' ಸಿನಿಮಾದಲ್ಲಿ ಅವರ ಪಾತ್ರ 30 ರಿಂದ 45 ನಿಮಿಷಗಳು ಇದೆ. ಆದರೆ, ಅವರ ಪಾತ್ರ ಚಿತ್ರದ ತೂಕ ಹೆಚ್ಚಿಸಿದೆ.

'ಪ್ರೇಮಂ' ಹುಡುಗಿಯ ಮೊದಲ ಕನ್ನಡ ಸಿನಿಮಾ
ಅನುಪಮ ಪರಮೇಶ್ವರನ್ ಸೌತ್ ಚಿತ್ರರಂಗದ ಹೆಸರಾಂತ ನಟಿ. 'ಪ್ರೇಮಂ' ಅವರ ಮೊದಲ ಸಿನಿಮಾವಾಗಿದ್ದು, ಮೊದಲ ಚಿತ್ರವೇ ಸೂಪರ್ ಹಿಟ್ ಆಗಿತ್ತು. ಇದುವರೆಗೆ 12 ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಮಲೆಯಾಳಂ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಈಕೆ ಈಗ ಕನ್ನಡಕ್ಕೂ ಬಂದಿದ್ದಾರೆ.

ಸಿನಿಮಾದ ವಿಮರ್ಶೆ
ಒಂದೇ ಸಾಲಿನಲ್ಲಿ ಹೇಳಬೇಕು ಅಂದರೆ, 'ನಟ ಸಾರ್ವಭೌಮ' ಪಕ್ಕಾ ಪುನೀತ್ ಅಭಿಮಾನಿಗಳ ಸಿನಿಮಾ. ಅಪ್ಪು ನಟನೆ, ಡ್ಯಾನ್ಸ್, ಫೈಟ್ ಎಲ್ಲವನ್ನು ಇಷ್ಟ ಪಡುವವರು ಈಗಲೇ ಟಿಕೆಟ್ ಬುಕ್ ಮಾಡಿ ಸಿನಿಮಾಗೆ ಹೋಗಬಹುದು. ಇಡೀ ಮನೆ ಮಂದಿಗೆ ಮನರಂಜನೆ ನೀಡುವ ಒಂದೊಳ್ಳೆ ಎಂಟರ್ಟೈನಿಂಗ್ ಸಿನಿಮಾ 'ನಟ ಸಾರ್ವಭೌಮ'. ಟೀಸರ್ ನಲ್ಲಿ ಹೇಳಿರುವ ಹಾಗೆಯೇ ಅಪ್ಪು ಡ್ಯಾನ್ಸ್, ಫೈಟ್ ಖಂಡಿತ 'ನೆಕ್ಟ್ ಲೆವೆಲ್' ನಲ್ಲಿದೆ.


Click it and Unblock the Notifications











