For Quick Alerts
  ALLOW NOTIFICATIONS  
  For Daily Alerts

  ಪ್ರೀತಿಯಿಂದ ಸ್ವಾಗತಿಸಿದ ಕನ್ನಡಿಗರಿಗೆ ಧನ್ಯವಾದ ಹೇಳಿದ ಅನುಪಮಾ

  |

  ಪುನೀತ್ ರಾಜ್ ಕುಮಾರ್ ಅಭಿನಯದ ನಟಸಾರ್ವಭೌಮ ಚಿತ್ರಕ್ಕೆ ಉತ್ತ ಪ್ರತಿಕ್ರಿಯೆ ಸಿಕ್ಕಿದ್ದು, ಅಪ್ಪು ಡ್ಯಾನ್ಸ್, ಆಕ್ಟಿಂಗ್ ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ.

  ಚಿತ್ರದಲ್ಲಿ ರಚಿತಾ ರಾಮ್ ಮತ್ತು ಅನುಪಮಾ ಪರಮೇಶ್ವರನ್ ನಾಯಕಿಯರಿದ್ದು, ಇಬ್ಬರು ಕೂಡ ಮುದ್ದಾಗಿ ನಟಿಸಿದ್ದಾರೆ. ಆದ್ರೆ, ಅಪ್ಪು ಮತ್ತು ಅನುಪಮಾ ಅವರ ಜೋಡಿಗೆ ಅಭಿಮಾನಿಗಳು ಮನಸೋತಿದ್ದಾರೆ. ಮೊದಲ ಸಿನಿಮಾದಲ್ಲೇ ಆಕೆಯ ಮೇಲೆ ಕನ್ನಡಿಗರಿಗೆ ಲವ್ ಆಗಿದೆ.

  Nata Sarvabhouma Review : ಅಪ್ಪು ಪವರ್ ಫುಲ್.. ಸಿನಿಮಾ ಸಕ್ಸಸ್ ಫುಲ್.. Nata Sarvabhouma Review : ಅಪ್ಪು ಪವರ್ ಫುಲ್.. ಸಿನಿಮಾ ಸಕ್ಸಸ್ ಫುಲ್..

  ಹೌದು, ಅನುಪಮಾ ಪರಮೇಶ್ವರನ್ ಅವರ ನಟನೆ ಹಾಗೂ ಅವರ ಮೋಡಿ ಒಳಗಾಗಿರುವ ಕನ್ನಡ ಪ್ರೇಕ್ಷಕರು ಪ್ರೀತಿಯಿಂದ ಸ್ವಾಗತಿಸಿದ್ದಾರೆ. ಮೊದಲ ಸಿನಿಮಾದಲ್ಲೇ ಕೋಟ್ಯಾಂತರ ಕನ್ನಡಿಗರ ಮನಸ್ಸು ಕದ್ದ ಈ ಚೆಲುವೆ ಈಗ ಸ್ಯಾಂಡಲ್ ವುಡ್ ನ ನೆಚ್ಚಿನ ನಟಿಯಾಗಿದ್ದಾರೆ.

  ಇನ್ನು ನಟಸಾರ್ವಭೌಮ ಹಾಗೂ ಅನುಪಮಾ ಪರಮೇಶ್ವರನ್ ಅವರಿಗೆ ಸಿಕ್ಕ ಪ್ರತಿಕ್ರಿಯೆಗೆ ನಟಿ ಧನ್ಯವಾದ ತಿಳಿಸಿದ್ದಾರೆ. ''ಥ್ಯಾಂಕ್ ಯೂ ಆಲ್ ಫಾರ್ ಲವ್'' ಎಂದು ಒಂದೇ ವಾಕ್ಯದಲ್ಲಿ ತಮ್ಮ ಖುಷಿಯನ್ನ ವ್ಯಕ್ತಪಡಿಸಿದ್ದಾರೆ.

  'ನಟಸಾರ್ವಭೌಮ'ನಿಗೆ ಜೊತೆಯಾದ ಮಲೆಯಾಳಂ ಬೆಡಗಿ 'ನಟಸಾರ್ವಭೌಮ'ನಿಗೆ ಜೊತೆಯಾದ ಮಲೆಯಾಳಂ ಬೆಡಗಿ

  2015ರಲ್ಲಿ ತೆರೆಕಂಡಿದ್ದ ಮಲಯಾಳಂನ ಪ್ರೇಮಂ ಚಿತ್ರದ ಮೂಲಕ ಸಿನಿ ಜರ್ನಿ ಆರಂಭಿಸಿದ ಅನುಪಮಾ, ಅ ಆ, ತೆಲುಗು ಪ್ರೇಮಂ, ಕೃಷ್ಣಾರ್ಜುನ ಯುದ್ಧಂ, ಹಲೋ ಗುರು ಪ್ರೇಮ ಕೋಸಂ ಅಂತಹ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ನಟಸಾರ್ವಭೌಮ ಮೂಲಕ ಕನ್ನಡಕ್ಕೆ ಎಂಟ್ರಿ ಕೊಟ್ಟಿದ್ದಾರೆ.

  English summary
  actress anupama parameswaran debut to sandalwood in puneeth rajkumar starrer natasaarvabhowma. anupama personally got good response for her acting.

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X