ಶ್ರುತಿ ಪಾತ್ರ ನೀಡಿದಕ್ಕೆ ಧನ್ಯವಾದ ತಿಳಿಸಿದ ಅನುಪಮ
''ನಟ ಸಾರ್ವಭೌಮ' ಸಿನಿಮಾ ನೋಡಿ ಬಂದ ಹುಡುಗರಿಗೆ ಅತಿಯಾಗಿ ಕಾಡುವುದು ಶ್ರುತಿ ಎಂಬ ನಾಯಕಿಯ ಪಾತ್ರ. ಈ ಪಾತ್ರ ಇಡೀ ಸಿನಿಮಾದ ಅಂದವನ್ನು ಹೆಚ್ಚಿಸಿದೆ. ಈ ಪಾತ್ರದಲ್ಲಿ ನಟಿಸಿರುವವರು ನಟಿ ಅನುಪಮ ಪರಮೇಶ್ವರನ್.
ಅನುಪಮ ಮೂಲತಃ ಮಲಯಾಳಂ ನಟಿಯಾಗಿದ್ದು, ಇದು ಅವರ ನಟನೆಯ ಮೊದಲ ಕನ್ನಡ ಸಿನಿಮಾ. ಈ ಚಿತ್ರದಲ್ಲಿ ಅವರಿಗೆ ಒಂದೊಳ್ಳೆ ಪಾತ್ರ ಸಿಕ್ಕಿದ್ದು, ಪ್ರೇಕ್ಷಕರಿಗೆ ಬಹಳ ಇಷ್ಟ ಆಗಿದೆ. ಚಿತ್ರದ ತಮ್ಮ ಪಾತ್ರಕ್ಕೆ ಸಿಕ್ಕಿರುವ ಪ್ರತಿಕ್ರಿಯೆ ಕಂಡು ಅನುಪಮ ಖುಷಿಯಾಗಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು ನಿರ್ದೇಶಕ ಪವನ್ ಒಡೆಯರ್ ಗೆ ಧನ್ಯವಾದ ತಿಳಿಸಿದ್ದಾರೆ. ಜೊತೆಗೆ ತಮ್ಮ ಪಾತ್ರಕ್ಕೆ ಪ್ರೀತಿ ನೀಡಿದ ಅಭಿಮಾನಿಗಳಿಗೆ ಥ್ಯಾಂಕ್ಯು ಹೇಳಿದ್ದಾರೆ.

ಅಂದಹಾಗೆ, 'ನಟ ಸಾರ್ವಭೌಮ' ಚಿತ್ರದಲ್ಲಿ ಅನುಪಮ ಲಾಯರ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಅವರ ಲುಕ್ ಇದೀಗ ದೊಡ್ಡ ಅಭಿಮಾನಿ ಬಳಗ ಪಡೆಯುವಂತೆ ಮಾಡಿದೆ. ಈ ಪ್ರೇಮಿಗಳ ದಿನಕ್ಕೆ ಎಲ್ಲರ ಪಾಲಿನ ಕ್ರಶ್ ಆಗಿದ್ದಾರೆ ಅನುಪಮ.
ಅನುಪಮ ಪರಮೇಶ್ವರನ್ ಸೌತ್ ಚಿತ್ರರಂಗದ ಹೆಸರಾಂತ ನಟಿ. 'ಪ್ರೇಮಂ' ಅವರ ಮೊದಲ ಸಿನಿಮಾವಾಗಿದ್ದು, ಮೊದಲ ಚಿತ್ರವೇ ಸೂಪರ್ ಹಿಟ್ ಆಗಿತ್ತು. ಇದುವರೆಗೆ 12 ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಮಲೆಯಾಳಂ, ತೆಲುಗು ಹಾಗೂ ತಮಿಳು ಸಿನಿಮಾಗಳಲ್ಲಿ ಕಾಣಿಸಿಕೊಂಡಿದ್ದ ಈಕೆ ಈಗ ಕನ್ನಡಕ್ಕೂ ಬಂದಿದ್ದಾರೆ.


Click it and Unblock the Notifications











