twitter
    For Quick Alerts
    ALLOW NOTIFICATIONS  
    For Daily Alerts

    ಕನ್ನಡ ಹುಡುಗಿಯರಿಗೆ ಇದೊಂದು ‘ ಶಾಪ’!

    By Super
    |

    ಹೃದಯಾ ಹೃದಯಾ ಮೂಲಕ ಚಿತ್ರರಂಗ ಪ್ರವೇಶಿಸಿದ ಅನು ಪ್ರಭಾಕರ್‌ಸಿರಿಕಂಠದ ಕಂಠದಾನ ಕಲಾವಿದೆ ಹಾಗೂ ಪೋಷಕ ನಟಿ ಗಾಯತ್ರಿ ಪ್ರಭಾಕರ್‌ ಅವರ ಪುತ್ರಿ. ಹೃದಯಾ ಹೃದಯಾ, ಯಾರಿಗೆ ಸಾಲತ್ತೆ ಸಂಬಳ, ಸ್ನೇಹಲೋಕ, ಶ್ರೀಮಸ್ತು ಶುಭಮಸ್ತು ಚಿತ್ರಗಳ ನಂತರ ಅನು ಕೈಯಲ್ಲಿ ಇನ್ನೂ ಎರಡು ಚಿತ್ರ - ಶಾಪ ಮತ್ತು ಹೂಂ ಅಂತಿಯಾ ಉಹೂಂ ಅಂತಿಯಾ ಇದೆಯಂತೆ. ಈ ಚಿತ್ರ ಪೂರ್ಣಗೊಂಡ ಬಳಿಕ ಅವರು ಫುಲ್‌ ಟೈಂ ನಿರುದ್ಯೋಗಿ . ಅಂದರೆ ಅನುಗೆ ಅವಕಾಶಗಳು ಕಡಿಮೆ ಆಗಿದೆ ಎಂದಾಯ್ತು. ಕನ್ನಡ ಚಿತ್ರ ರಂಗಾನೇ ಹಾಗೆ ಬಿಡಿ. ಕನ್ನಡದ ತಾಜಾ ನಟಿಯರು ಇಲ್ಲಿ ಉಳಿಯೋದೇ ಕಷ್ಟ. ನಮ್ಮ ನಿರ್ಮಾಪಕರು, ನಿರ್ದೇಶಕರು ಆಮದು ತಾರೆಯರಿಗೆ ತೋರಿಸೋ ಒಲವನ್ನು ನಮ್ಮ ಕನ್ನಡದ ತಾರೆಯರ ಬಗ್ಗೆ ತೋರಲ್ಲ. ನಿರ್ದೇಶಕರನ್ನು ಹೊರದಬ್ಬಿದ ಬಗ್ಗೆ ಈಗಾಗಲೇ ಕಾಂಟ್ರಾವರ್ಸಿ ಆಗಿರುವ ಭಾರಿ ವೆಚ್ಚದ ಅದ್ಧೂರಿ ಚಿತ್ರ ಕಾವೇರಿಗೆ ಔಟ್‌ಡೇಟೆಡ್‌ ಆಗಿರುವ ಹಾಗೂ ಬೇಡಿಕೆಯೇ ಇಲ್ಲದ ಮಾದುರಿ ದೀಕ್ಷಿತ್‌ ಆಯ್ಕೆಯಾಗಿದ್ದಾರೆ ಎಂಬ ಗುಲ್ಲೂ ಸ್ಯಾಂಡಲ್‌ವುಡ್‌ ಸಂದಿಗೊಂದಿಗಳಲ್ಲಿ ಕೇಳಿ ಬರುತ್ತಿದೆ.

    ಕನ್ನಡದೋರಿಗೆ ಇಲ್ಲಿ ಮಾನ್ಯತೆ ಇಲ್ಲ . ಆಮದು ತಾರೆಯರಿಗೆ ರತ್ನಗಂಬಳಿ ಹಾಸ್ತಾರೆ ಅಂತ ಬಹುತೇಕ ಎಲ್ಲ ಕನ್ನಡದ ನಟಿಯರೂ ಬೊಬ್ಬೆ ಹೊಡೆದಿದ್ದಾರೆ. ಶ್ರುತಿಯೂ ಮೊದಮೊದ್ಲು ಹೀಗೇ ಹೇಳ್ತಿದ್ರು. ಶ್ರುತಿ ಚಿತ್ರದ ನಂತರ ಸ್ವಲ್ಪ ಬ್ಯುಸಿ ಆದ್ಮೇಲೆ, ತಾರಾ ಮೌಲ್ಯ ಕೊಂಚ ಹೆಚ್ಚಿದ ಮೇಲೆ ಅಪಸ್ವರ ತೆಗಯಕ್ಕೂ ಶುರು ಮಾಡಿದ್ರು, ಪರಭಾಷೆಗೂ ಹಾರಿದ್ರು.. ಈಗ ಇದನ್ನೇ ಮುದ್ದು ಮುಖದ ಪ್ರೇಮಾನೂ ಮಾಡ್ತಿದ್ದಾರೆ, ತೆಲುಗಿನ ಒಂದೆರಡು ಯಶಸ್ಸು ಅವರನ್ನು ಅತ್ತ ತಿರುಗಿಸಿದೆ.

    ಅನುಗಂತೂ ಈಗ ಈರೀತಿಯ ಸಮಸ್ಯೆಗಳಿಲ್ಲ. ಆದರೆ ಅವಕಾಶದ ಕೊರತೆ ಮಾತ್ರ. ಅನು ಕನ್ನಡ ಚಿತ್ರರಂಗಕ್ಕೆ ಆದ್ಭುತ ಕೊಡುಗೆ ಎಂದವರೂ ಇದ್ದಾರೆ. ಕಲಾವಿದರ ಕುಟುಂಬದಿಂದಲೇ ಬಂದ ಅನು ಪ್ರತಿಭಾವಂತೆ ಎಂಬುದರಲ್ಲಿ ಎರಡು ಮಾತಿಲ್ಲ. ಪ್ರತಿಭೆಗೆ ತಕ್ಕ ವಿನಯ, ಅಭಿನಯ, ಅಂದ, ಚೆಂದ ಎಲ್ಲ ಇರುವ ಅನುಗೆ ಅವಕಾಶಗಳೇ ಅನುಮಾನ ಎನ್ನುವಂತಾಗಿವೆ. ಅನು ಪ್ರತಿಭೆಯನ್ನು ಆಕೆಯಾಂದಿಗೆ ಯಾರಿಗೆ ಸಾಲತ್ತೆ ಸಂಬಳ ಚಿತ್ರದಲ್ಲಿ ನಟಿಸಿದ ಖ್ಯಾತ ನಟಿ ಸುಹಾಸಿನಿ ಬಾಯಿತುಂಬಾ ಹೊಗಳಿದ್ದಾರೆ. ಹೇಳಿ ಕೊಟ್ಟಿದ್ದನ್ನು ತಟ್ಟನೆ ಕಲಿಯುವ ಮಹಾತ್ವಾಕಾಂಕ್ಷಿ ಅನು ಎಂದು ಹಾಡಿ ಹೊಗಳಿದ್ದಾರೆ. ಅನುಗೇ ಒಳ್ಳೆಯದು ಯಾವುದು, ಕೆಟ್ಟದ್ದು ಯಾವುದು ಎಂದು ಅರಿಯುವ ಶಕ್ತಿ ಇದೆ. ಅವಳಲ್ಲಿ ದಕ್ಷಿಣ ಭಾರತದ ಚೆಲುವಿನ ಬೆಡಗಿದೆ. ಆಕೆಗೆ ಉತ್ತಮ ಭವಿಷ್ಯವಿದೆ ಎನ್ನುತ್ತಾರೆ ಸುಹಾಸಿನಿ.

    ಸುಹಾಸಿನಿ ಏನೋ ಅನು ಬಗ್ಗೆ ಅಭಿಮಾನದ ಮಾತನ್ನಾಡಿದ್ದಾರೆ. ಆದರೆ ನಿರ್ಮಾಪಕರಿಗೆ ಆ ಅಭಿಮಾನವಿಲ್ಲವೇ? ಕನ್ನಡದ ಪ್ರತಿಭೆಗಳನ್ನು ಆದರಿಸುವ ಒಲವಿಲ್ಲವೆ? ಈ ಎಲ್ಲ ಪ್ರಶ್ನೆಗಳಿಗೆ ಉತ್ತರ ಕಷ್ಟ. ಆದರೆ ಒಂದೆರಡು ಚಿತ್ರಗಳ ನಂತರ ಆವಕಾಶ ಬಾರದಿದ್ದರೆ ಅನು ನಿರುದ್ಯೋಗಿಯಾಗುವುದಂತೂ ನಿಜ.

    English summary
    Here is another example of talent being wasted
    Wednesday, July 3, 2013, 15:33
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X