For Quick Alerts
  ALLOW NOTIFICATIONS  
  For Daily Alerts

  ಜಗತ್ತು ನಮ್ಮನ್ನು ಅರ್ಥ ಮಾಡಿಕೊಳ್ಳಲ್ಲ: ಕೊಹ್ಲಿ ಪತ್ನಿ ಅನುಷ್ಕಾ ಬೇಸರ

  |

  ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಬಾಲಿವುಡ್‌ನ ಜನಪ್ರಿಯ ತಾರಾ ಜೋಡಿ. ಕೊಹ್ಲಿ ಕ್ರಿಕೆಟ್‌ನಲ್ಲಿ ಕಿಂಗ್ ಆಗಿದ್ದರೆ ಸಿನಿಮಾಗಳಲ್ಲಿ ಅನುಷ್ಕಾ ಶರ್ಮಾ. ಕೆಲ ತಿಂಗಳ ಹಿಂದಷ್ಟೆ ಈ ದಂಪತಿ ಪೋಷಕರಾಗಿದ್ದಾರೆ.

  ಮಗು ಆದ ಬಳಿಕ ಹೆಚ್ಚು ಬಿಡುವು ಪಡೆಯದೆ ನಟಿ ಅನುಷ್ಕಾ ಶರ್ಮಾ ಮತ್ತೆ ನಟನೆಗೆ ಇಳಿದಿದ್ದಾರೆ. ವಿರಾಟ್ ಕೊಹ್ಲಿ ಸಹ ಸತತವಾಗಿ ಟೂರ್ನಿಗಳ ಮೇಲೆ ಟೂರ್ನಿಗಳನ್ನು ಆಡುತ್ತಿದ್ದಾರೆ.

  Anushka Sharma: ತಮ್ಮದೇ ನಿರ್ಮಾಣ ಸಂಸ್ಥೆಯಿಂದ ಹೊರನಡೆದ ಅನುಷ್ಕಾ ಶರ್ಮಾAnushka Sharma: ತಮ್ಮದೇ ನಿರ್ಮಾಣ ಸಂಸ್ಥೆಯಿಂದ ಹೊರನಡೆದ ಅನುಷ್ಕಾ ಶರ್ಮಾ

  ಅನುಷ್ಕಾ ಶರ್ಮಾ ನಟನೆಯ 'ಚಾಕಡ್ ಎಕ್ಸ್‌ಪ್ರೆಸ್' ಸಿನಿಮಾ ಬಿಡುಗಡೆ ಆಗಲು ಬಹುತೇಕ ರೆಡಿಯಾಗಿದೆ. ಈ ಸಂದರ್ಭದಲ್ಲಿ ಮಾಧ್ಯಮಗಳೊಟ್ಟಿಗೆ ಮಾತನಾಡಿರುವ ಅನುಷ್ಕಾ 'ವರ್ಕಿಂಗ್ ವುಮನ್'ನ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ.

  ''ನಾನು ಇರುವ ಚಿತ್ರರಂಗ ಬಹಳ ಬ್ಯುಸಿಯಾದದ್ದು, ಇಲ್ಲಿ ಎಲ್ಲರೂ ಓಡುತ್ತಿದ್ದಾರೆ. ನಾನೂ ಸಹ ಬಿಡುವಿಲ್ಲದೆ ಓಡುತ್ತಿದ್ದೇನೆ. ಇಲ್ಲವಾದರೆ ಹಿಂದೆ ಉಳಿದುಕೊಂಡು ಬಿಡುತ್ತೇನೆ. ನಾನೂ ಸಹ ಇಲಿ ರೇಸ್‌ನಲ್ಲಿನ ಒಂದು ಇಲಿಯಂತಾಗಿದ್ದೇನೆ'' ಎಂದು ತಮ್ಮ ಕಷ್ಟಗಳ ಬಗ್ಗೆ ಮಾತನಾಡಿದ್ದಾರೆ.

  ತಾಯಿಯಾಗಿದ್ದುಕೊಂಡು ಸಿನಿಮಾಗಳಲ್ಲಿ ಕೆಲಸ ಮಾಡುತ್ತಿರುವ ಬಗ್ಗೆ ಮಾತನಾಡಿರುವ ಅನುಷ್ಕಾ ಶರ್ಮಾ, ''ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಮಹಿಳೆಯರಿಗೆ ನಿಜಕ್ಕೂ ಕಷ್ಟದ ಕೆಲಸ. ಈ ಜಗತ್ತು ಅದೆಷ್ಟು ಪುರುಷ ಪ್ರಧಾನ ಎಂದರೆ ವೃತ್ತಿ ನಿರತ ತಾಯಿಯೊಬ್ಬಳ ಭಾವನೆಗಳನ್ನು, ಕಷ್ಟಗಳನ್ನು ಅರ್ಥ ಮಾಡಿಕೊಳ್ಳಲು ಸಹಾ ಜನರಿಗೆ ಸಾಧ್ಯವಿಲ್ಲ'' ಎಂದು ನೋವಿನಿಂದ ನುಡಿದಿದ್ದಾರೆ ಅನುಷ್ಕಾ ಶರ್ಮಾ.

  Anushka Sharma Talks About Struggles Of Working Women

  ''ನಾನೊಬ್ಬ ಮಹಿಳೆಯಾಗಿ, ವೃತ್ತಿ ನಿರತ ತಾಯಿಯ ಕಷ್ಟಗಳನ್ನು ಅರ್ಥ ಮಾಡಿಕೊಳ್ಳಲು ಸೋತಿದ್ದೆ. ಆದರೆ ನಾನು ತಾಯಿಯಾದ ಬಳಿಕವಷ್ಟೆ ಅದರ ಕಷ್ಟ ಗೊತ್ತಾಯಿತು. ಆದರೆ ಈಗ ನನಗೆ ತಾಯಂದಿರ ಬಗ್ಗೆ ವಿಶೇಷವಾಗಿ 'ವರ್ಕಿಂಗ್ ಮದರ್‌' ಸಮುದಾಯದ ಬಗ್ಗೆ ಬಹಳ ಪ್ರೀತಿ ಮತ್ತು ಗೌರವ ಇದೆ'' ಎಂದಿದ್ದಾರೆ.

  ''ಕೆಲಸದ ಸ್ಥಳಗಳಲ್ಲಿ ಮಹಿಳೆಯರಿಗೆ ಇನ್ನಷ್ಟು ನೆರವಿನ ಅವಶ್ಯಕತೆ ಇದೆ. ಹಲವು ಪುರುಷರು ಮಹಿಳೆಯರ ಬಗ್ಗೆ ಕರುಣಾತ್ಮಕ ದೃಷ್ಟಿ ಹೊಂದಿದ್ದಾರೆ. ಮಹಿಳೆಯರ ಬಗ್ಗೆ ವಿಶೇಷ ಗೌರವ ಹೊಂದಿದ್ದಾರೆ. ನಮ್ಮ 'ವೃತ್ತಿ ವಿಧಾನ' (ವರ್ಕ್ ಕಲ್ಚರ್) ಬಹಳ ಕ್ಲಿಷ್ಟಕರವಾದುದು. ಇಂಥಹಾ ಸನ್ನಿವೇಶದಲ್ಲಿ ಮಹಿಳೆಗೆ ಕೆಲಸದ ಸ್ಥಳದಲ್ಲಿ ಹೆಚ್ಚಿನ ಬೆಂಬಲ, ನೆರವಿನ ಅಗತ್ಯತೆ ಇದೆ. ಇದರಿಂದ ದೊಡ್ಡ ಸಾಧನೆಗಳನ್ನು ಮಹಿಳೆ ಮಾಡಲು ಅವಕಾಶ ಕಲ್ಪಿಸಿದಂತಾಗುತ್ತದೆ, ಹಾಗೂ ಭವಿಷ್ಯಕ್ಕೆ ಮಕ್ಕಳನ್ನು ಉತ್ತಮವಾಗಿ ರೂಪಿಸುವ ತಾಯಿಯ ಜವಾಬ್ದಾರಿಯಲ್ಲಿ ಪಾಲು ಪಡೆದಂತಾಗುತ್ತದೆ'' ಎಂದಿದ್ದಾರೆ ಅನುಷ್ಕಾ.

  English summary
  Actress Anushka Sharma talks about struggles of working women. She said working women facing more problems.
  Monday, May 16, 2022, 16:08
  IIFA

  Kannada Photos

  Go to : More Photos
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X
  X