ಅನುಷ್ಕಾ ಶೆಟ್ಟಿ ಬಗ್ಗೆ ಹರಿದಾಡಿದ್ದ ಸುದ್ದಿ ಸುಳ್ಳು

ಭಾಗಮತಿ ಚಿತ್ರದ ಬಳಿಕ ಯಾವ ಸಿನಿಮಾದಲ್ಲೂ ಕಾಣಿಸಿಕೊಳ್ಳದ ಅನುಷ್ಕಾ ಶೆಟ್ಟಿ ಇತ್ತೀಚಿಗಷ್ಟೆ ಗುಟ್ಟಾಗಿ ಆಸ್ಪತ್ರೆಗೆ ಹೋಗಿದ್ದರು ಎಂಬ ವಿಷ್ಯ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಅನುಷ್ಕಾ ಸೀಕ್ರೆಟ್ ಆಗಿ ಯಾಕೆ ಆಸ್ಪತ್ರೆಗೆ ಹೋಗಿದ್ದರು ಎಂದು ಸಿನಿ ಜಗತ್ತಿನಲ್ಲಿ ಗುಸುಗುಸು ಎನ್ನುತ್ತಿತ್ತು.

ಚಿರಂಜೀವಿ ಅಭಿನಯದ ಸೈರಾ ಸಿನಿಮಾ ಸೆಟ್ ನಲ್ಲಿ ಶೂಟಿಂಗ್ ಮಾಡಬೇಕಾದರೆ ಗಾಯವಾಗಿದೆ. ಅದಕ್ಕಾಗಿಯೇ ಆಸ್ಪತ್ರೆಗೆ ತೆರಳಿದ್ದರು. ಚಿಕಿತ್ಸೆ ನೀಡಿದ್ದ ವೈದ್ಯರು ಸುಮಾರು ಒಂದು ತಿಂಗಳು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎನ್ನಲಾಗಿತ್ತು.

ಆದರೆ, ಈ ಸುದ್ದಿಯನ್ನ ತಳ್ಳಿ ಹಾಕಿರುವ ಅನುಷ್ಕಾ ಶೆಟ್ಟಿ ''ಅದೆಲ್ಲ ಸುಳ್ಳು, ನಾನು ಆರೋಗ್ಯವಾಗಿದ್ದೇನೆ. ಸಿಯಾಟಲ್ ನಲ್ಲಿ ಚಿತ್ರೀಕರಣ ಮಾಡಲಿದ್ದೇನೆ. ಲವ್ ಯೂ ಆಲ್'' ಎಂದು ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

Anushka shetty clears about her health rumours

ಅಂದ್ಹಾಗೆ, ಚಿರಂಜೀವಿ, ವಿಜಯ್ ಸೇತುಪತಿ, ಸುದೀಪ್, ತಮನ್ನಾ ಸೇರಿದಂತೆ ಬಹುದೊಡ್ಡ ತಾರಬಳಗ ಹೊಂದಿರುವ ಸೈರಾ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಕೂಡ ವಿಶೇಷ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರ ಮಾಡಬೇಕಾದರೆ ಗಾಯವಾಗಿದೆ ಎಂದು ಹೇಳಲಾಗಿತ್ತು.

ಇದನ್ನ ಬಿಟ್ಟರೆ 'ನಿಶಬ್ದಂ' ಎಂಬ ಚಿತ್ರವೊಂದನ್ನ ಬಹುಭಾಷೆಯಲ್ಲಿ ಮಾಡ್ತಿದ್ದಾರೆ. ಇದೇ ಚಿತ್ರ ತಮಿಳು, ಹಿಂದಿ ಹಾಗೂ ಇಂಗ್ಲಿಷ್ ನಲ್ಲಿ 'ಸೈಲೆನ್ಸ್' ಎಂಬ ಹೆಸರಿನಲ್ಲಿ ಮೂಡಿಬರ್ತಿದೆ.

More from Filmibeat

English summary
South actress Anushka shetty has taken her facebook account to clears about her health rumours. she is fine and she will going to shooting in seattle.
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+
X