twitter
    For Quick Alerts
    ALLOW NOTIFICATIONS  
    For Daily Alerts

    ಅನುಷ್ಕಾ ಶೆಟ್ಟಿ ಬಗ್ಗೆ ಹರಿದಾಡಿದ್ದ ಸುದ್ದಿ ಸುಳ್ಳು

    |

    ಭಾಗಮತಿ ಚಿತ್ರದ ಬಳಿಕ ಯಾವ ಸಿನಿಮಾದಲ್ಲೂ ಕಾಣಿಸಿಕೊಳ್ಳದ ಅನುಷ್ಕಾ ಶೆಟ್ಟಿ ಇತ್ತೀಚಿಗಷ್ಟೆ ಗುಟ್ಟಾಗಿ ಆಸ್ಪತ್ರೆಗೆ ಹೋಗಿದ್ದರು ಎಂಬ ವಿಷ್ಯ ದೊಡ್ಡ ಮಟ್ಟದಲ್ಲಿ ಚರ್ಚೆಯಾಗಿತ್ತು. ಅನುಷ್ಕಾ ಸೀಕ್ರೆಟ್ ಆಗಿ ಯಾಕೆ ಆಸ್ಪತ್ರೆಗೆ ಹೋಗಿದ್ದರು ಎಂದು ಸಿನಿ ಜಗತ್ತಿನಲ್ಲಿ ಗುಸುಗುಸು ಎನ್ನುತ್ತಿತ್ತು.

    ಚಿರಂಜೀವಿ ಅಭಿನಯದ ಸೈರಾ ಸಿನಿಮಾ ಸೆಟ್ ನಲ್ಲಿ ಶೂಟಿಂಗ್ ಮಾಡಬೇಕಾದರೆ ಗಾಯವಾಗಿದೆ. ಅದಕ್ಕಾಗಿಯೇ ಆಸ್ಪತ್ರೆಗೆ ತೆರಳಿದ್ದರು. ಚಿಕಿತ್ಸೆ ನೀಡಿದ್ದ ವೈದ್ಯರು ಸುಮಾರು ಒಂದು ತಿಂಗಳು ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎನ್ನಲಾಗಿತ್ತು.

    ಅನುಷ್ಕಾ ಶೆಟ್ಟಿ ಕುರಿತು ಬ್ರೇಕಿಂಗ್ ನ್ಯೂಸ್: ಇದು ಮದುವೆ ಸುದ್ದಿಯಲ್ಲ.! ಅನುಷ್ಕಾ ಶೆಟ್ಟಿ ಕುರಿತು ಬ್ರೇಕಿಂಗ್ ನ್ಯೂಸ್: ಇದು ಮದುವೆ ಸುದ್ದಿಯಲ್ಲ.!

    ಆದರೆ, ಈ ಸುದ್ದಿಯನ್ನ ತಳ್ಳಿ ಹಾಕಿರುವ ಅನುಷ್ಕಾ ಶೆಟ್ಟಿ ''ಅದೆಲ್ಲ ಸುಳ್ಳು, ನಾನು ಆರೋಗ್ಯವಾಗಿದ್ದೇನೆ. ಸಿಯಾಟಲ್ ನಲ್ಲಿ ಚಿತ್ರೀಕರಣ ಮಾಡಲಿದ್ದೇನೆ. ಲವ್ ಯೂ ಆಲ್'' ಎಂದು ಫೇಸ್ ಬುಕ್ ನಲ್ಲಿ ಸ್ಪಷ್ಟನೆ ನೀಡಿದ್ದಾರೆ.

    Anushka shetty clears about her health rumours

    ಪ್ರಭಾಸ್ ಜೊತೆ ಮದುವೆ ಬಗ್ಗೆ ಅನುಷ್ಕಾ ತಾಯಿ ಹೇಳಿದ ಮಾತಿನ ಅರ್ಥವೇನು.?ಪ್ರಭಾಸ್ ಜೊತೆ ಮದುವೆ ಬಗ್ಗೆ ಅನುಷ್ಕಾ ತಾಯಿ ಹೇಳಿದ ಮಾತಿನ ಅರ್ಥವೇನು.?

    ಅಂದ್ಹಾಗೆ, ಚಿರಂಜೀವಿ, ವಿಜಯ್ ಸೇತುಪತಿ, ಸುದೀಪ್, ತಮನ್ನಾ ಸೇರಿದಂತೆ ಬಹುದೊಡ್ಡ ತಾರಬಳಗ ಹೊಂದಿರುವ ಸೈರಾ ಚಿತ್ರದಲ್ಲಿ ಅನುಷ್ಕಾ ಶೆಟ್ಟಿ ಕೂಡ ವಿಶೇಷ ಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ಈ ಪಾತ್ರ ಮಾಡಬೇಕಾದರೆ ಗಾಯವಾಗಿದೆ ಎಂದು ಹೇಳಲಾಗಿತ್ತು.

    ಇದನ್ನ ಬಿಟ್ಟರೆ 'ನಿಶಬ್ದಂ' ಎಂಬ ಚಿತ್ರವೊಂದನ್ನ ಬಹುಭಾಷೆಯಲ್ಲಿ ಮಾಡ್ತಿದ್ದಾರೆ. ಇದೇ ಚಿತ್ರ ತಮಿಳು, ಹಿಂದಿ ಹಾಗೂ ಇಂಗ್ಲಿಷ್ ನಲ್ಲಿ 'ಸೈಲೆನ್ಸ್' ಎಂಬ ಹೆಸರಿನಲ್ಲಿ ಮೂಡಿಬರ್ತಿದೆ.

    English summary
    South actress Anushka shetty has taken her facebook account to clears about her health rumours. she is fine and she will going to shooting in seattle.
    Thursday, June 27, 2019, 19:21
    IIFA

    Kannada Photos

    Go to : More Photos
    ತಾಜಾ ಸುದ್ದಿ ತಕ್ಷಣ ಪಡೆಯಿರಿ
    Enable
    x
    Notification Settings X
    Time Settings
    Done
    Clear Notification X
    Do you want to clear all the notifications from your inbox?
    Settings X
    X